Operation Ganga ಸುಮಿಯಲ್ಲಿ ಸಿಲುಕಿದ್ದ ಎಲ್ಲಾ ವಿದ್ಯಾರ್ಥಿಗಳು ಸೇರಿ ಒಟ್ಟು 17,100 ಭಾರತೀಯರ ರಕ್ಷಣೆ!
ಸುಮಿ ನಗರದಲ್ಲಿದ್ದ 694 ವಿದ್ಯಾರ್ಥಿಗಳ ರಕ್ಷಣೆ
ಉಕ್ರೇನ್‌ನಿಂದ ಒಟ್ಟು 17,100 ಭಾರತೀಯರ ರಕ್ಷಣೆ
ಯಶಸ್ವಿಯಾತ್ತು ಆಪರೇಶನ್ ಗಂಗಾ ಮಿಶನ್
ಉಕ್ರೇನ್(ಮಾ.08): ಯುದ್ಧ ನಾಡು ಉಕ್ರೇನ್‌ನಿಂದ ಭಾರತೀಯರ ರಕ್ಷಣಾ ಕಾರ್ಯ ಅತ್ಯಂತ ಯಶಸ್ವಿಯಾಗಿದೆ. ರಷ್ಯಾದ ತೀವ್ರ ದಾಳಿಗೆ ತುತ್ತಾಗಿದ್ದ ಸುಮಿ ನಗರದಲ್ಲಿ ಸಿಲುಕಿದ್ದ 694 ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. ಸುಮಿಯಿಂದ 35 ಬಸ್‌ಗಳಲ್ಲಿ ಪೊಲ್ಟೊವಾಗೆ ನಗರಕ್ಕೆ ಕರೆ ತರಲಾಗಿದೆ. ಈ ಮೂಲಕ ಭಾರತ ಇದುವರೆಗೆ ಉಕ್ರೇನ್‌ನಿಂದ 17,100 ಭಾರತೀಯರ ರಕ್ಷಣೆ ಮಾಡಿದೆ