Russia Ukraine Crisis: ಉಕ್ರೇನ್ ನ ಗಲ್ಲಿಗಲ್ಲಿಗಳ ಸೈನಿಕರ ಹೆಣ, ಸೇನಾ ವಾಹನಗಳು ಜಖಂ

ನಾಲ್ಕನೇ ದಿನಕ್ಕೆ ಕಾಲಿಟ್ಟ ರಷ್ಯಾ-ಉಕ್ರೇನ್ ಕಾಳಗ

ಉಕ್ರೇನ್ ನಲ್ಲಿ ದಿನಕಳೆದಂತೆ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನ

ಗಲ್ಲಿಗಲ್ಲಿಗಳಲ್ಲಿ ಕಾಣಸಿಗುತ್ತಿವೆ ಸೈನಿಕರ ಶವ

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 27): ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಸಮರ (War) ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ಸೇನೆಯನ್ನು ಹಿಮ್ಮೆಟ್ಟಿಸಲು ಅಲ್ಪ ಮಟ್ಟಿಗೆ ಉಕ್ರೇನ್ ಸೇನೆ ಯಶಸ್ವಿಯಾಗಿದೆ. ಆದರೆ, ಉಕ್ರೇನ್ ನ ಗಲ್ಲಿಗಲ್ಲಿಗಳಲ್ಲಿ ಸೈನಿಕರ ಶವ (Dead Bodies) ಕಾಣಸಿಗುತ್ತಿವೆ. ದಾರಿಯುದ್ಧಕ್ಕೂ ಸೇನಾ ಟ್ಯಾಂಕರ್ (Army Tanker), ಸೇನಾವಾಹನಗಳು ಜಖಂಗೊಂಡಿರುವ ದೃಶ್ಯ ಸಾಮಾನ್ಯವಾಗಿದೆ.

ಇನ್ನೊಂದೆಡೆ ರಷ್ಯಾ ಸೇನೆಯ ವಿರುದ್ಧ ಉಕ್ರೇನ್ ನ ನಾಗರೀಕರೇ ಕಣಕ್ಕಿಳಿದಿರುವುದು ಪರಿಸ್ಥಿತಿ ಇನ್ನಷ್ಟು ಹದಗಡೆವುವಂತೆ ಮಾಡಿದೆ. ಇನ್ನು ತೈಲ ಸ್ಥಾವರಗಳನ್ನು ಗುರಿಯಾಗಿಟ್ಟುಕೊಂಡು ರಷ್ಯಾ ದಾಳಿ ನಡೆಸುತ್ತಿದ್ದು, ಬಹುತೇಕ ತೈಲ ಘಟಕಗಳು ಬೆಂಕಿಯ ಉರಿಯಲ್ಲಿದೆ. ಇನ್ನೊಂದೆಡೆ ಕೀವ್ ನಗರಕ್ಕೆ ಪ್ರವೇಶಿಸಲು ರಷ್ಯಾ ನಡೆಸುತ್ತಿರುವ ಬಹುತೇಕ ಯತ್ನಗಳು ವಿಫಲವಾಗಿದೆ.

Russia-Ukraine Crisis: ರಷ್ಯಾ ಸೇನೆ ವಿರುದ್ಧ ಹೋರಾಟಕ್ಕಿಳಿದ ಉಕ್ರೇನ್ ನಾಗರೀಕರು
ಸದ್ಯದ ಮಟ್ಟಿಗೆ ಯುದ್ಧ ಮುಗಿಯುವ ಲಕ್ಷಣಗಳು ತೋರಿಲ್ಲ. ಶಾಂತಿ ಮಾತುಕತೆಯ ಒಪ್ಪಂದಕ್ಕೆ ರಷ್ಯಾ ಒಲವು ತೋರಿದ್ದರೂ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಾತ್ರ ಬೆಲಾರಸ್ ಹೊರತಾಗಿ ಬೇರೆ ಯಾವುದೇ ದೇಶದಲ್ಲಾದರೂ ಮಾತುಕತೆಗೆ ಒಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ. ಇದರ ನಡುವೆ ಉಕ್ರೇನ್ ನಲ್ಲಿ ರಷ್ಯಾ ಹಾಗೂ ಉಕ್ರೇನ್ ಸೈನಿಕರ ಆಕ್ರಮಣಗಳು ಇನ್ನಷ್ಟು ತೀವ್ರಗೊಂಡಿರುವ ಬಗ್ಗೆ ವರದಿಯಾಗಿದೆ.

Related Video