Russia Ukraine Crisis: ಆಶ್ರಯ ಬೇಡಿ ಪೋಲೆಂಡ್ ಗೆ ತೆರಳಿದ ಉಕ್ರೇನ್ ಪ್ರಜೆಗಳು!
ಉಕ್ರೇನ್ ನ ಮೇಲೆ ರಷ್ಯಾದ ಮುಂದುವರಿದ ಆಕ್ರಮಣ
ಇಡೀ ದೇಶವನ್ನೇ ವಶಪಡಿಸಿಕೊಳ್ಳುವತ್ತ ರಷ್ಯಾದ ಚಿತ್ತ
ಆಶ್ರಯ ಬೇಡಿ ಪೋಲೆಂಡ್ ಗೆ ತೆರಳಿದ ಉಕ್ರೇನ್ ಪ್ರಜೆಗಳು
ಕೈವ್ (ಫೆ.25): ರಷ್ಯಾದ (Russia) ಆಕ್ರಮಣಕಾರಿ ಸೇನೆ, ಇಡೀ ಉಕ್ರೇನ್ (Ukraine) ದೇಶವನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಮುನ್ನುಗ್ಗಿದ್ದು, ಇದರಿಂದ ಭಯಭೀತರಾಗಿರುವ ಉಕ್ರೇನ್ ನ ಜನತೆ (Ukrainian Citizens) ಆಶ್ರಯ ಬೇಡಿ ಪಕ್ಕದ ಪೋಲೆಂಡ್ ಗೆ (Poland ) ತೆರಳಿದ್ದಾರೆ. ಇನ್ನೊಂದೆಡೆ ಯುದ್ಧ ನಿರಾಶ್ರಿತರಾಗಿರುವ ಉಕ್ರೇನ್ ನ ಪ್ರಜೆಗಳನ್ನು ಮುಕ್ತವಾಗಿ ಸ್ವಾಗತಿಸುವುದಾಗಿ ಪಕ್ಕದ ನ್ಯಾಟೋ ದೇಶಗಳು ಈಗಾಗಲೇ ಹೇಳಿವೆ.
ನಿರಂತರವಾಗಿ ಉಕ್ರೇನ್ ನ ಮೇಲೆ ರಷ್ಯಾ ದಾಳಿ ಮಾಡುತ್ತಿದ್ದು, ರಾಜಧಾನಿ ಕೈವ್ ವರೆಗೆ ರಷ್ಯಾದ ಸೇನೆ ಬಂದು ನಿಂತಿದೆ. ಕಗ್ಗತ್ತಲಿನಲ್ಲಿ ಎಲ್ಲೆಂದರಲ್ಲಿ ಬಾಂಬ್ ಹಾಗೂ ಕ್ಷಿಪಣಿಗಳ ಸುರಿಮಳೆ ಆಗುತ್ತಿದ್ದು ಜನರನ್ನು ಆತಂಕಕ್ಕೆ ಈಡು ಮಾಡಿದೆ. ಕೆಲವು ಕಡೆ ಜನವಸತಿ ಪ್ರದೇಶದಲ್ಲಿ ಕ್ಷಿಪಣಿ ದಾಳಿಗಳು ನಡೆದಿವೆ. 11 ವಾಯುನೆಲೆ ಹಾಗೂ 70ಕ್ಕೂ ಹೆಚ್ಚಿನ ಮಿಲಿಟರಿ ತಾಣ ಈಗಾಗಲೇ ನಾಶಗೊಂಡಿದೆ ಎಂದು ರಷ್ಯಾ ಹೇಳಿದೆ.
Russia-Ukraine War: ಜನವಸತಿ ಕೇಂದ್ರಗಳ ಮೇಲೆ ದಾಳಿ, ಜೀವ ಉಳಿಸಿಕೊಳ್ಳಲು ಓಡುತ್ತಿದ್ದಾರೆ ಉಕ್ರೇನ್ ಜನ
ರಷ್ಯಾದ ಆಕ್ರಮಣ ಹೆಚ್ಚುತ್ತಿರುವಂತೆ ಅಲ್ಲಿನ ಜನತೆ ಪೋಲೆಂಡ್ ನತ್ತ ಆಶ್ರಯ ಕೇಳಿ ಧಾವಿಸುತ್ತಿದ್ದಾರೆ. ಪೋಲೆಂಡ್ ಗೆ ತೆರಳುವ ಎಲ್ಲಾ ರೈಲುಗಳು ಜನರಿಂದ ತುಂಬಿ ಹೋಗಿವೆ. ಮಹಿಳೆಯರು ಹಾಗೂ ಮಕ್ಕಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ.