Russia-Ukraine War: ಜನವಸತಿ ಕೇಂದ್ರಗಳ ಮೇಲೆ ದಾಳಿ, ಜೀವ ಉಳಿಸಿಕೊಳ್ಳಲು ಓಡುತ್ತಿದ್ದಾರೆ ಉಕ್ರೇನ್ ಜನ
ಕಳೆದ ಕೆಲವು ದಿನಗಳಿಂದ ಯುದ್ಧದ ಬೆದರಿಕೆ ಹಾಕುತ್ತಲೇ ಬಂದಿದ್ದ ರಷ್ಯಾ, ನೆರೆಯ ಉಕ್ರೇನ್ ಮೇಲೆ ಸಮರ ಆರಂಭಿಸಿದೆ. ಉಕ್ರೇನ್ ದೇಶವನ್ನು ಸುತ್ತುವರೆದು ಕ್ಷಿಪಣಿ, ವಿಮಾನ, ಕಾಪ್ಟರ್‌ಗಳ ಮೂಲಕ ಭಾರೀ ದಾಳಿ ಆರಂಭಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಯುದ್ಧದ ಬೆದರಿಕೆ ಹಾಕುತ್ತಲೇ ಬಂದಿದ್ದ ರಷ್ಯಾ, ನೆರೆಯ ಉಕ್ರೇನ್ ಮೇಲೆ ಸಮರ ಆರಂಭಿಸಿದೆ. ಉಕ್ರೇನ್ ದೇಶವನ್ನು ಸುತ್ತುವರೆದು ಕ್ಷಿಪಣಿ, ವಿಮಾನ, ಕಾಪ್ಟರ್‌ಗಳ ಮೂಲಕ ಭಾರೀ ದಾಳಿ ಆರಂಭಿಸಿದ್ದಾರೆ. ಪರಿಣಾಮ ರಾಜಧಾನಿ ಕೀವ್ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಬಾಂಬ್‌ಗಳು ಸ್ಫೋಟಿಸಿದ ಹಾಗೂ ದಟ್ಟಹೊಗೆ ಆಕಾಶದತ್ತ ಏಳುತ್ತಿರುವ ದೃಶ್ಯಗಳು ಕಂಡುಬಂದಿವೆ.
ಎರಡೂ ದೇಶಗಳಲ್ಲಿ ಭಾರೀ ಸಾವು-ನೋವು ಮತ್ತು ಸಾಕಷ್ಟುಪ್ರಮಾಣದ ಸೇನಾ ಆಸ್ತಿಗಳಿಗೆ ಹಾನಿಯಾಗಿದೆ. ರಷ್ಯಾ ದಾಳಿಯಲ್ಲಿ ಉಕ್ರೇನ್‌ನ 40 ಸೈನಿಕರು ಹಾಗೂ 18 ನಾಗರಿಕರು ಸೇರಿ 58 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 11 ವಾಯುನೆಲೆ ಸೇರಿ ಉಕ್ರೇನ್‌ನ 74 ಸೇನಾನೆಲೆಗಳನ್ನು ಧ್ವಂಸಗೊಳಿಸಿದ್ದೇವೆ ಎಂದು ರಷ್ಯಾ ಹೇಳಿದೆ. ಮತ್ತೊಂದೆಡೆ ಉಕ್ರೇನ್ ತಾನು ರಷ್ಯಾದ 8 ವಿಮಾನಗಳನ್ನು ಹೊಡೆದುರುಳಿಸಿದ್ದು, ದಾಳಿಯಲ್ಲಿ ರಷ್ಯಾದ 50 ಯೋಧರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.