Asianet Suvarna News Asianet Suvarna News

ಹಮಾಸ್ ಉಗ್ರರ ದಾಳಿಗೆ ರಕ್ತಸಿಕ್ತವಾಯ್ತು ಇಸ್ರೇಲ್: 2005ರಿಂದಲೂ ಧಗಧಗಿಸುತ್ತಲೇ ಇದೆ ದ್ವೇಷದ ಜ್ವಾಲೆ..!

ಹೊತ್ತಿ ಉರಿಯುತ್ತಿರುವ ಇಸ್ರೇಲ್ ಮತ್ತು ಹಮಾಸ್ ಯುದ್ಧ ಆರಂಭವಾಗಿದ್ದೇಕೆ.. ಮತ್ತು ಹೇಗೆ ಅನ್ನೋ ಕುತೂಹಲ ನಿಮ್ಮಲ್ಲೂ ಮೂಡಿರಬಹುದು. ಜೆರಸುಲೆಂಗೂ ಈ ಯುದ್ಧಕ್ಕೂ ಸಂಬಂಧವೇನು ಅನ್ನೋ ಅನುಮಾಕ ಕೂಡ ಬರಬಹುದು. ಈ ಯುದ್ಧ ಶುರುವಾಗಿದ್ದೇಕೆ..? ಇದಕ್ಕೆ ಮುನ್ನುಡಿ ಬರೆದಿದ್ಯಾರು..? ಅನ್ನೋದರ ಡೀಟೇಲ್ ನಿಮ್ಮ ಮುಂದೆ.

ಕಳೆದ 3 ದಿನದಿಂದ ಹಮಾಸ್ ಉಗ್ರರು ಇಸ್ರೇಲ್(Isreal) ಮೇಲೆ ಎರಗಿ ಬಂದಿದ್ದಾರೆ. ಇಸ್ರೇಲ್ ಕೂಡ ತಿರುಗಿ ಬಿದ್ದಿದ್ದು, ಪ್ಯಾಲೆಸ್ತೀನ್(Palestine) ಮೇಲೆ ಪ್ರತಿಯುದ್ಧ ಸಾರಿದೆ. ಆದರೆ ಇದು ಮೂರು ದಿನಗಳ ಹಿಂದೆ ಹುಟ್ಟಿದ ಯುದ್ಧವಲ್ಲ. ಬರೋಬ್ಬರಿ 18 ವರ್ಷದಿಂದ ಹೊತ್ತಿ ಉರಿಯುತ್ತಿರುವ ದ್ವೇಷದ ಜ್ವಾಲೆ. ಮಧ್ಯಪ್ರಾಚ್ಯ ಯುದ್ಧದ ವೇಳೆ ಈಜಿಪ್ಟ್‌ತ್‌ನಿಂದ ಗಾಜಾಪಟ್ಟಿಯನ್ನು ವಶಪಡಿಸಿಕೊಂಡಿದ್ದ ಇಸ್ರೇಲ್, 2005ರಲ್ಲಿ ಒಂದು ಮಹತ್ವದ ನಿರ್ಧಾರ ಮಾಡುತ್ತೆ. ಆ ನಿರ್ಧಾರದಿಂದಲೇ ಗಾಜಾಪಟ್ಟಿ(Gaza), ಅಂದಿನಿಂದ ಇಂದಿನವರೆಗೂ ಯುದ್ಧಭೂಮಿಯಾಗಿ ಬದಲಾಗಿದೆ. 2005ರಲ್ಲಿ ಗಾಜಾಪಟ್ಟಿಯಿಂದ ಇಸ್ರೇಲ್ ತನ್ನ ಸೇನೆಯನ್ನ ಹಿಂಪಡೆದು ಕೊಳ್ಳುತ್ತೆ. ಆ ಬಳಿಕ ಗಾಜಾಪಟ್ಟಿ ಪ್ಯಾಲೆಸ್ತೀನ್ ಅದೀನಕ್ಕೆ ಸೇರುತ್ತೆ. 2006ರಲ್ಲಿ ಪ್ಯಾಲೆಸ್ತೀನ್ ಚುನಾವಣೆಯಲ್ಲಿ ಹಮಾಸ್ಗೆ(Hamas) ಬಹುಮತ ಬಂದಿದ್ದರಿಂದ ಉಗ್ರರ ಬಲ ಕುಗ್ಗಿಸುವುದಕ್ಕಾಗಿ, ಪ್ಯಾಲೆಸ್ತೀನ್‌ಗೆ ನೀಡಿದ್ದ ಬಲವನ್ನು ಅಮೆರಿಕ ಮತ್ತು ಇಸ್ರೇಲ್ ಹಿಂಪಡೆಯುತ್ತವೆ. ಬಳಿಕ ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿ ಗಿಲಾಡ್ ಶಾಲಿತ್ ಸೇನಾ ನೆಲೆಯನ್ನ ಹಮಾಸ್ ವಶಕ್ಕೆ ಪಡೆಯುತ್ತೆ. ಸುಮಾರು 5 ವರ್ಷಗಳ ಕಾಲ ಸೇನಾ ನೆಲೆ ಹಮಾಸ್ ಹಿಡಿತಲ್ಲೇ ಇರುತ್ತೆ. 2007ರಲ್ಲಿ ಗಾಜಾಪಟ್ಟಿ ಮೇಲೆ ಹಿಡಿತ ಹೊಂದಿದ್ದ ಉಗ್ರರು ಪ್ಯಾಲೆಸ್ತೀನ್‌ ಅಧ್ಯಕ್ಷ ಮಹಮೂದ್‌ ಅಬ್ಬಾಸ್‌ ನಿಷ್ಠ ಸೇನಾ ಪಡೆಯನ್ನ ಹೊರಗಟ್ಟುತ್ತಾರೆ.

ಇದನ್ನೂ ವೀಕ್ಷಿಸಿ:  Bigboss ಮನೆಯಲ್ಲಿ ನೈಜಿರಿಯನ್ ಕನ್ನಡಿಗನದ್ದೇ ಸದ್ದು: ವೇಷ-ಭಾಷೆ-ಹೇರ್‌ಸ್ಟೈಲ್‌ಗೆ ಸ್ಪರ್ಧಿಗಳೆಲ್ಲ ದಂಗು !

Video Top Stories