Asianet Suvarna News Asianet Suvarna News

ನಿತ್ಯಾನಂದನ ಕೈಲಾಸದಲ್ಲಿ ರಾಜಕೀಯ ಬೆಳವಣಿಗೆ: ನಿತ್ಯನ ಸರ್ವಾಧಿಕಾರ, ರಂಜಿತಾ ಮಂತ್ರಿಮಂಡಲ.. ಏನಿದು ಕತೆ.?

ನಿತ್ಯಾ ಕಟ್ಟಿದ ದೇಶಕ್ಕೆ ಮಾನ್ಯತೆ ಕೊಟ್ಟಿತಾ ವಿಶ್ವಸಂಸ್ಥೆ?
ದೇಶ ಬಿಟ್ಟು ಪರಾರಿಯಾದವನು ಹೇಳಿದ್ದೇನು ಗೊತ್ತಾ..?
ನಿತ್ಯಾನ ಪರ ವಕಾಲತ್ತು ವಹಿಸಿದವಳು ಹೇಳಿದ್ದೇನು..?
 

ದಕ್ಷಿಣ ಅಮೆರಿಕದ ಈಕ್ವೆಡಾರ್ ದೇಶದ ದ್ವೀಪವೊಂದನ್ನೇ ಖರೀದಿಸಿರೋ ನಿತ್ಯಾನಂದ(Nithyananda), ಅದಕ್ಕೆ ಕೈಲಾಸ(Kailasa) ಅಂತ ಹೆಸರಿಟ್ಟಿದ್ದಾನೆ. ಟ್ರಿನಿಡಾಡ್ ಮತ್ತು ಟೊಬ್ಯಾಗೊ ಅನ್ನೋ ದೊಡ್ಡ ನಗರಗಳಿಗೂ ಈ ಪ್ರದೇಶ ಹತ್ತಿರದಲ್ಲೇ ಇದೆ. ಅಷ್ಟೇ ಅಲ್ಲ, ತನ್ನ ದೇಶಕ್ಕೆ ಪ್ರತ್ಯೇಕ ಧ್ವಜ, ಲಾಂಛನ, ಪ್ರತ್ಯೇಕ ಪಾಸ್‌ಪೋರ್ಟ್, ಪ್ರತ್ಯೇಕ ಕರೆನ್ಸಿ ಸಿದ್ದಪಡಿಸಿಕೊಂಡಿದ್ದಾನೆ. ಆದ್ರೆ ಎಲ್ಲದಕ್ಕಿಂತಾ ಅಚ್ಚರಿ ತರಿಸಿದ್ದು, ಕೆಲವೇ ತಿಂಗಳ ಹಿಂದೆ, ನಿತ್ಯನ ಪ್ರತಿನಿಧಿಗಳು, ವಿಶ್ವಸಂಸ್ಥೆಯಲ್ಲಿ ಕಾಣಿಸಿಕೊಂಡಿದ್ದು. ವಿಜಯಪ್ರಿಯ ಅನ್ನೋ ಹೆಸರಿನ ಈ ನಿತ್ಯಾನಂದ ಲೋಕದ ಸುಂದರಿ, ಮೂರು ತಿಂಗಳ ಹಿಂದೆ ಕೋಲಾಹಲವನ್ನೇ ಸೃಷ್ಟಿಸಿದ್ದಳು. ಈಗ ಈಕೆಗಿಂತಾ ಹೆಚ್ಚು ಸದ್ದು ಮಾಡ್ತಾ ಇರೋ ಸಂಗತಿ ಅಂದ್ರೆ, ಅದು, ಮಾ ನಿತ್ಯಾನಂದಮಯಿ, ಅಲಿಯಸ್ ರಂಜಿತಾ(Ranjitha), ಪ್ರಧಾನ ಮಂತ್ರಿ ಹುದ್ದೆಯಲ್ಲಿ ಕೂತಿರೋದು. 

ಇದನ್ನೂ ವೀಕ್ಷಿಸಿ:  ಬಜೆಟ್‌ನಲ್ಲಿ "ಆರ್ಥಿಕ ಶಿಸ್ತು" ಮೀರಿದ್ರಾ "ನೀತಿ"ರಾಮಯ್ಯ..?: ಬಿಜೆಪಿಯ 17 ಯೋಜನೆ, ಕಾಯ್ದೆಗಳಿಗೆ ಸಿದ್ದು ಬ್ರೇಕ್

Video Top Stories