
ಬಜೆಟ್‌ನಲ್ಲಿ "ಆರ್ಥಿಕ ಶಿಸ್ತು" ಮೀರಿದ್ರಾ "ನೀತಿ"ರಾಮಯ್ಯ..?: ಬಿಜೆಪಿಯ 17 ಯೋಜನೆ, ಕಾಯ್ದೆಗಳಿಗೆ ಸಿದ್ದು ಬ್ರೇಕ್
ಚರಿತ್ರೆ ಕಂಡು ಕೇಳರಿಯದ ಬಜೆಟ್‌ನಲ್ಲಿ ರೋಚಕ ಲೆಕ್ಕಾಚಾರ..!
ರಾಜ್ಯವನ್ನು ದಿವಾಳಿಯಾಗಲು ಬಿಡಲಾರೆ ಸಿದ್ದರಾಮಯ್ಯ ಶಪಥ..!
ಬಜೆಟ್ ಮಂಡಿಸಿದ ಮರುದಿನವೇ ಪ್ರತಿಜ್ಞೆ ಮಾಡಿದ ಸಿಎಂ ಸಿದ್ದು
ಕೊಂಕು ಮಾತನ್ನೇ ಚಾಲೆಂಜಾಗಿ ತೆಗೆದುಕೊಂಡಿದ್ದ ಸಿದ್ದರಾಮಯ್ಯನವರೀಗ(Siddaramaiah) ರಾಜ್ಯದಲ್ಲೇ ಅತ್ಯಂತ ಹೆಚ್ಚು ಬಜೆಟ್‌ಗಳನ್ನು ಮಂಡಿಸಿದ ದಾಖಲೆವೀರ. ಶುಕ್ರವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರೋದು ದಾಖಲೆಯ 14ನೇ ಬಜೆಟ್. ಇಷ್ಟೊಂದು ಸಂಖ್ಯೆಯ ಬಜೆಟ್‌ಗಳನ್ನು( budget) ಮಂಡಿಸಿದ ಮತ್ತೊಬ್ಬ ಮಂತ್ರಿ, ಮುಖ್ಯಮಂತ್ರಿ ರಾಜ್ಯದಲ್ಲೇ ಇಲ್ಲ. ಸಿದ್ದರಾಮಯ್ಯ ಅಂದ್ರೆ ಲೆಕ್ಕ, ಲೆಕ್ಕ ಅಂದ್ರೆ ಸಿದ್ದರಾಮಯ್ಯ. ಕಬ್ಬಿಣದ ಕಡಲೆಗಳಂತಿರೋ ಅಂಕಿ ಅಂಶಗಳು ಸಿದ್ದರಾಮಯ್ಯನವರಿಗೆ ಸದಾ ಕರತಲಾಮಲಕ. ಹೀಗಾಗಿ ಅವರನ್ನು ಲೆಕ್ಕರಾಮಯ್ಯ, ನೀತಿರಾಮಯ್ಯ ಅಂತ ಕರೀತಾರೆ. ಕಳೆದ ಫೆಬ್ರವರಿಯಲ್ಲಿ ಆಗಿನ ಬಿಜೆಪಿ(BJP) ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ₹3,09,182 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ರೆ, ಈಗ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿರೋ ಸಿದ್ದರಾಮಯ್ಯ ₹3,27,747 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ಅಂದ್ರೆ ನಾಲ್ಕೇ ತಿಂಗಳುಗಳ ಅಂತರದಲ್ಲಿ ಮಂಡನೆಯಾದ ರಾಜ್ಯ ಬಜೆಟ್ ಗಾತ್ರದಲ್ಲಿ ಏರಿಕೆಯಾಗಿರುವ ಮೊತ್ತ ₹18,565 ಕೋಟಿ ರೂ.ಆಗಿದೆ. ಅಷ್ಟೇ ಅಲ್ಲ ಕೈ ಸರ್ಕಾರದ 11 ಹಳೇ ಯೋಜನೆಗಳಿಗೆ ಮರುಜೀವ ಕೊಟ್ಟಿದ್ದಾರೆ. ಬಿಜೆಪಿಯ 17 ಯೋಜನೆಗಳಿಗೆ ಬ್ರೇಕ್ ಹಾಕಿದ್ದಾರೆ.
ಇದನ್ನೂ ವೀಕ್ಷಿಸಿ: ಜೈನಮುನಿಗಳಿಗೆ ರಕ್ಷಣೆ ಕೊಡಬೇಕು, ಕೊಲೆಗಡುಕರಿಗೆ ಶಿಕ್ಷೆ ಆಗಬೇಕು: ಗುಣಧರನಂದಿ ಮಹಾರಾಜ್ ಸ್ವಾಮೀಜಿ