Asianet Suvarna News Asianet Suvarna News

ಭಾರತದ ಪಾಲಾಗುತ್ತಾ ಪಾಕ್ ಆಕ್ರಮಿತ ಕಾಶ್ಮೀರ..? ಇಂಡಿಯಾ ಕಡೆ ಹೆಚ್ಚಾಗಿದ್ದೇಕೆ ಹೋರಾಟಗಾರರ ಒಲವು?

ಪಾಕ್ ವಿರುದ್ಧ ಮೊಳಗಿದೆ ಸಮರ ಘೋಷ!
ಭಾರತ ಸೇರಲು ಕಾಯ್ತಾ ಇರೋದೇಕೆ ಆ ಜನ?
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಏನಾಗುತ್ತಿದೆ?

ನಾವು ಭಾರತಕ್ಕೆ ಸೇರ್ತೀವಿ ಅಂತ ಸಾವಿರ ಸಾವಿರ ಸಂಖ್ಯೆಯಲ್ಲಿ, ಪಾಕಿಸ್ತಾನದ (Pakisthan) ವಿರುದ್ಧ ಹೋರಾಡ್ತಿದ್ದಾರೆ ಗಿಲ್ಗಿಟ್-ಬಲ್ಟಿಸ್ತಾನ್ ಪ್ರಜೆಗಳು. ಭಾರತದ ಮುಕುಟಮಣಿ ಕಾಶ್ಮೀರದಲ್ಲಿ(Kashmir) ನಿರೀಕ್ಷಿಸೋಕೂ ಸಾಧ್ಯವಾಗದಂಥಾ ಒಂದು ಸಂಚಲನ ನಡೀತಿದೆ. ಪಾಕ್ ಆಕ್ರಮಿತ ಕಾಶ್ಮೀರದ ಭಾಗವಾಗಿರೋ ಗಿಲ್ಗಿಟ್ ಬಲ್ಟಿಸ್ತಾನದ ಪ್ರಾಂತ್ಯದಲ್ಲಿ, ಸಾವಿರ ಸಾವಿರ ಜನ ಬೀದಿಗಿಳಿದಿದ್ದಾರೆ. ನಮ್ಮನ್ನ ಬಿಟ್ಟುಬಿಡಿ, ನಮಗೆ ಪಾಕಿಸ್ತಾನದ ಜೊತೆಗಿರೋಕೆ ಇಷ್ಟವಿಲ್ಲ. ನಾವು ಭಾರತದ(India) ಜೊತೆ ಜಾಯ್ನ್ ಆಗ್ತೀವಿ ಅಂತ, ದೊಡ್ಡ ಮಟ್ಟದ ಹೋರಾಟ ಮಾಡ್ತಿದ್ದಾರೆ. ಇವತ್ತು ಪಾಕಿಸ್ತಾನ ತನ್ನದು ಅಂತ ಹೇಳ್ಕೊಳ್ತಾ ಇರೋ ಕಾಶ್ಮೀರದ ಭಾಗದಲ್ಲಿ ದೊಡ್ಡ ಮಟ್ಟದ ಹೋರಾಟ ನಡೀತಿದೆ. ಹೀಗೆ ಸಾವಿರ ಸಾವಿರ ಸಂಖ್ಯೇಲಿ ಜನ, ಪಾಕ್ ವಿರುದ್ಧ ತಿರುಗಿಬಿದ್ದಿರೋದನ್ನ ನೋಡಿದ್ರೆನೇ, ಈ ಹೋರಾಟದ(Protest) ತೀವ್ರತೆ ಎಷ್ಟಿದೆ ಅನ್ನೋದು ಎಂಥವರಿಗೂ ಅರ್ಥವಾಗುತ್ತೆ. ಅಷ್ಟೇ ಅಲ್ಲ, ಈ ಹೋರಾಟದ ಭಯಕ್ಕೆ ಪಾಕಿಸ್ತಾನ ಕುತಂತ್ರದ ಸೂತ್ರ ಅನುಸರಿಸಿದೆ. ಗಿಲ್ಗಿಟ್ ಬಲ್ಟಿಸ್ತಾನ್ ಪ್ರಾಂತ್ಯದಲ್ಲಿ ಹೋರಾಟ ಶುರುವಾಗಿದ್ದು ಈಗಲ್ಲ, ಆದಾಗಲೇ ವಾರದ ಹಿಂದೆಯೇ ಈ ಮಟ್ಟದ ಹೋರಾಟ ನಡೀಬೋದು ಅನ್ನೋ ಸುಳಿವು ಸಿಕ್ಕಿತ್ತು. ಈ ಹೋರಾಟದ ಪ್ರಭಾವ ಕಡಿಮೆ ಮಾಡೋಕೆ, ಪಾಕ್ ಅನುಸರಿಸಿದ ಮಾರ್ಗವೇ ವಿಚಿತ್ರವಾಗಿತ್ತು. ಮೊದಲನೇದಾಗಿ, ಸಾಮಾನ್ಯ ಜನರ ಆಕ್ರೋಶ ಅಡಗಿಸೋದಕ್ಕೆ, ಮಿಲಿಟರಿ ನೆರವು ಪಡೀತು.. ಅದಾದ ಬಳಿಕ, ಪಾಕಿನ ಮಾಧ್ಯಮಗಳು ಅಲ್ಲಿನ ಸುದ್ದಿ ಪ್ರಸಾರ ಮಾಡದ ಹಾಗೆ ಆದೇಶ ಹೊರಡಿಸ್ತು. ಆದ್ರೆ ಯಾವಾಗ, ಸೋಷಿಯಲ್ ಮೀಡಿಯಾ ಮೂಲಕವೇ ಇಲ್ಲಿನ ಪರಿಸ್ಥಿತಿ ಜಗತ್ತಿಗೆ ಗೊತ್ತಾಗೋಕೆ ಮೊದಲಾಯ್ತೋ, ಆಗ ಇಂಟರ್‌ನೆಟ್, ಫೋನ್ ಕನೆಕ್ಷನ್ನೂ ಕೂಡ ಕಟ್ ಮಾಡ್ತು. ಒಟ್ಟಾರೆ, ಹೋರಾಟಗಾರರನ್ನ ಇನ್ನಷ್ಟು ಕೆರಳಿಸೋದಕ್ಕೆ ಏನ್ ಮಾಡ್ಬೇಕೋ, ಅದಷ್ಟನ್ನೂ ಮಾಡಿ ಕೂತಿದೆ, ಪಾಪಿ ಪಾಕಿಸ್ತಾನ.

ಇದನ್ನೂ ವೀಕ್ಷಿಸಿ:  ಮಧ್ಯಪ್ರದೇಶ ಬಿಜೆಪಿಯಲ್ಲಿ ಭಿನ್ನಮತ: ಸರ್ಕಾರದ ವಿರುದ್ಧವೇ ಸಿಡಿದೆದ್ದ ಉಮಾ ಭಾರತಿ

Video Top Stories