
ಭಾರತ-ಅಮೆರಿಕಾದ ಡಿಎನ್‌ಎಯಲ್ಲಿಯೇ ಪ್ರಜಾಪ್ರಭುತ್ವವಿದೆ: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಪ್ರವಾಸ ಇಂದು ಅಂತ್ಯವಾಗಲಿದೆ. ಅಮೆರಿಕಾದಿಂದ ಅವರು ನೇರವಾಗಿ ಈಜಿಪ್ಟ್‌ಗೆ ತೆರಳಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕಾ ಪ್ರವಾಸ ಇಂದು ಅಂತ್ಯವಾಗಲಿದೆ. ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ರಿಂದ ಮೋದಿಗೆ ಔತಣಕೂಟ ಏರ್ಪಡಿಸಲಾಗಿತ್ತು. ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್, ಗೂಗಲ್ ಸಿಇಒ ಸುಂದರ್ ಪಿಚೈ ಈ ಔತಣ ಕೂಟದಲ್ಲಿ ಭಾಗಿಯಾಗಿದ್ದರು. ಜೋ ಬೈಡೆನ್ ದಂಪತಿ ಮೋದಿಯನ್ನು ಸ್ವಾಗತಿಸಿದ್ದರು. ಅಮೆರಿಕಾದಿಂದ ನೇರವಾಗಿ ಮೋದಿ ಈಜಿಪ್ಟ್‌ಗೆ ತೆರಳಲಿದ್ದಾರೆ. ಅಲ್ಲಿ ಎರಡು ದಿನ ಪ್ರವಾಸ ಮಾಡಲಿದ್ದಾರೆ. ಈ ಔತಣ ಕೂಟದಲ್ಲಿ ಗಣ್ಯಾತಿಗಣ್ಯರು ಭಾಗಿಯಾಗಿದ್ದರು. ವಿದೇಶಗಳ ನಡುವಿನ ಬಾಂಧವ್ಯಕ್ಕೆ ಈ ಭೇಟಿ ಸಾಕ್ಷಿಯಾಗಿದೆ. ಇನ್ನೂ ಅದ್ಧೂರಿ ಸ್ವಾಗತ ನೀಡಿದಕ್ಕೆ ಪ್ರಧಾನಿ ಮೋಡಿ ವಿಡಿಯೋ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಇಂದಿನ ರಾಶಿ ಭವಿಷ್ಯ: ಈ ಶುಭ ದಿನ ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ