ಪಪುವಾ ನ್ಯೂಗಿನಿಯಾ ಪ್ರಧಾನಿ, ಮೋದಿ ಕಾಲಿಗೆ ಬಿದ್ದಿದ್ದೇಕೆ !?: ಮೋದಿ ಆಟೋಗ್ರಾಫ್ ಕೇಳಿದ ಅಮೆರಿಕಾ, ಆಸ್ಟ್ರೇಲಿಯಾ ಪ್ರಧಾನಿಗಳು !
ಪಪುವಾ ನ್ಯೂಗಿನಿಯಾ ಪ್ರಧಾನಿ, ಮೋದಿ ಅವರ ಕಾಲಿಗೆ ಬಿದ್ದು ಅವರನ್ನು ಸ್ವಾಗತಿಸಿದರು. ಅಲ್ಲದೇ ಈ ದೇಶದಲ್ಲಿ ಸೂರ್ಯಾಸ್ತದ ನಂತರ ಯಾರನ್ನೂ ಸ್ವಾಗತಿಸಲಾಗುವುದಿಲ್ಲ. ಆದ್ರೆ ಮೋದಿಯವರನ್ನು ಸ್ವಾಗತಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಎರಡನೇ ಹಂತದ ಭಾಗವಾಗಿ ಸೋಮವಾರ ಪಪುವಾ ನ್ಯೂಗಿನಿಯಾಗೆ ಆಗಮಿಸಿದರು. ಪ್ರಧಾನಿ ಜೇಮ್ಸ್ ಮರಾಪೆ ಅವರು ಸಾಂಪ್ರದಾಯಿಕವಾಗಿ ಮೋದಿಯವರ ಕಾಲಿಗೆ ಬಿದ್ದು ನಮಸ್ಕರಿಸಿ ಆತ್ಮೀಯವಾಗಿ ಬರಮಾಡಿಕೊಂಡರು. ಜಪಾನ್ ಯಶಸ್ವಿ ಭೇಟಿಯ ನಂತರ,ಪ್ರಧಾನಿ ಮೋದಿಯವರು ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಎರಡನೇ ಹಂತಕ್ಕಾಗಿ ಪಪುವಾ ನ್ಯೂಗಿನಿಯಾಕ್ಕೆ ಪ್ರಯಾಣಿಸಿದ್ದಾರೆ. ಇನ್ನು ಜಪಾನ್‌ನ ಹಿರೋಷಿಮಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಮೋದಿ ಆಟೋಗ್ರಾಫ್‌ನನ್ನು ಅಮೆರಿಕಾ, ಆಸ್ಟ್ರೇಲಿಯಾ ಪ್ರಧಾನಿಗಳು ಕೇಳಿದ್ದಾರೆ. ಅಲ್ಲದೇ ಹಿರೋಶಿಮಾದಲ್ಲಿ ಹರ್ ಹರ್ ಮೋದಿ ಎಂದು ಘೋಷಣೆ ಸಹ ಕೂಗಲಾಗಿದೆ.
ಇದನ್ನೂ ವೀಕ್ಷಿಸಿ: ಲೋಕಾರ್ಪಣೆಯಾಗಲಿದೆ ಮೋದಿ ಕಟ್ಟಿಸಿದ ಸೆಂಟ್ರಲ್ ವಿಸ್ತಾ: ಹಳೆ ಸಂಸತ್ತಿಗೂ.. ಹೊಸ ವಿಸ್ತಾಗೂ.. ಏನೇನು ವ್ಯತ್ಯಾಸ..?