Pakisthan Election: ನಾನು VS ನೀನು.. ಯಾರ ಪಾಲಾಗಲಿದೆ ಪಾತಕಿದೇಶದ ಗದ್ದುಗೆ ..?
ಪಾಕ್‌ನಲ್ಲೀಗ ತ್ರಿಬ್ಬಲ್ ಗೇಮ್ ಶುರು ಗೆದ್ದವರಿಗೆ ಸಿಕ್ಕಲ್ವಾ ಪಟ್ಟ..?
ಎಲೆಕ್ಷನ್ನಿಗೀಗ ಪಾಕ್ ಸೇನೆ ಎಂಟ್ರಿ..ಮತ್ತೆ ಕೈಗೊಂಬೆ ಸರ್ಕಾರ..?
ಪಾಕ್ನಲ್ಲಿ ಗೆದ್ದವರು ಗೆದ್ದ ಲೆಕ್ಕಕ್ಕಿಲ್ಲ..ಸೋತವ್ರು ಸೋತ ಹಾಗಲ್ಲ..!
ಪಾಕಿಸ್ತಾನದಲ್ಲೀಗ ತ್ರಿಬಲ್ ಗೇಮ್ ಶುರುವಾಗಿದೆ. ಹಿಂಸಾಚಾರದ ನಡುವೆಯೇ ಅನೇಕ ಅಡ್ಡಿ ಆತಂಕಗಳ ನಡುವೆ ಪಾಕಿಸ್ತಾನದ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಆದ್ರೆ ಈ ಬಾರಿಯೂ ಪಾಕ್ ಮತದಾರರು ಯಾರಿಗೂ ಬಹುಮತ ನೀಡಿಲ್ಲ. ಇದ್ರಿಂದ ಪಾಕಿಸ್ತಾನದಲ್ಲಿ(Pakisthan) ಮತ್ತೆ ಅತಂತ್ರ ಫಲಿತಾಂಶ ಹೊರಬಿದ್ದಿದೆ. ಪಾಕಿಸ್ತಾನದಲ್ಲಿ ಈ ಸಲ ಎಲೆಕ್ಷನ್(Election) ನಡೆದಿದ್ದು, ಪ್ರಮುಖವಾಗಿ ಮೂವರ ಮಧ್ಯೆ. ಅದರಲ್ಲೊಬ್ಬ, ಮಾಜಿ ಪ್ರಧಾನಿ, ಇಮ್ರಾನ್ ಖಾನ್(Imran Khan). ಮತ್ತೊಬ್ಬನೂ ಕೂಡ, ಪಾಕಿನ ಮಾಜಿ ಪ್ರಧಾನಿ, ನವಾಜ್ ಷರೀಫ್.. ಈ ಇಬ್ಬರ ಮಧ್ಯೆ ಕಾಣಿಸಿಕೊಂಡೋನು, ಈ ಭಿಲಾವಲ್ ಭುಟ್ಟೋ. ಇಮ್ರಾನ್ ಖಾನ್ ಮತ್ತು ನವಾಜ್ ಷರೀಫ್(Nawaz Sharif) ನಡುವಿನ ಜಿದ್ದಾಜಿದ್ದಿನ ಎಲೆಕ್ಷನ್ ಫೈಟ್‌ನಲ್ಲಿ ಫಲಿತಾಂಶ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಗೆದ್ದವರು, ಸೋತವರು ಎನ್ನುವುದರ ಬಗ್ಗೆ ಸರಿಯಾಗಿ ಕ್ಲಾರಿಟಿ ಸಿಕ್ಕಿಲ್ಲ. ಈ ಮಧ್ಯೆ ಇಬ್ಬರೂ ಗೆಲುವು ನಮ್ಮದು ಎಂದು ಘೋಷಣೆ ಮಾಡಿಕೊಂಡಿವೆ. ಹೀಗಿರುವಾಗ ಸದ್ಯಕ್ಕಂತೂ ಪಾಕಿಸ್ತಾನದಲ್ಲಿ ಸರ್ಕಾರ ರಚನೆ ಆಗುವ ಸಾಧ್ಯತೆ ಇಲ್ಲ.
ಇದನ್ನೂ ವೀಕ್ಷಿಸಿ: ಕಾಂಗ್ರೆಸ್ "ದೊಡ್ಡಣ್ಣ"ನ ವರಸೆ.. ಸಿಡಿದೆದ್ದ ಮಿತ್ರರು.. ಮೈತ್ರಿಯಿಂದ ದೂರ..!