ಆರ್ಥಿಕ ಆಘಾತದ ಜೊತೆಗೆ ಅಂತರ್ಯುದ್ಧಕ್ಕೆ ಸಿದ್ಧವಾಯ್ತಾ ಪಾತಕಿಸ್ತಾನ್?
ಪಾಕಿಸ್ತಾನವು ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ತನ್ನ ಸಾಲದ ಡೀಫಾಲ್ಟ್ ಮಾಡುವ ಹಾದಿಯಲ್ಲಿದೆ. ಹಣಕಾಸಿನ ನೆರವು ನೀಡಲು ಕಠಿಣ ಆರ್ಥಿಕ ನಿಯಮಗಳನ್ನು ಐಎಂಎಫ್ ಹೇಳಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಇನ್ನು ಮೂರೇ ವಾರದಲ್ಲಿ ಪಾಕ್ ಬೀದಿಗೆ ಬಂದು ನಿಲ್ಲಲಿದೆ.
ನವದೆಹಲಿ (ಜ.27): ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಾಗಿದೆ ಎಂದರೆ ಹೆಚ್ಚಲ್ಲ ಇನ್ನು ಮೂರೇ ಮೂರು ವಾರಗಳಲ್ಲಿ ನೆರೆಯ ದೇಶ ಬೀದಿಗೆ ಬಂದು ಬಂದು ನಿಲ್ಲಲಿದೆ. ಅಧಃಪತನದತ್ತ ಸಾಗಿರುವ ಪಾಕ್‌ಗೆ ಈಗ ಚೀನಾ ಕೂಡ ಕೈಕೊಟ್ಟಿದೆ. ಇನ್ನು ಭಾರತ ಕೂಡ ಪಾಕಿಸ್ತಾನಕ್ಕೆ ಸಹಾಯ ಮಾಡುವ ಯಾವ ಮನಸ್ಸು ತೋರುತ್ತಿಲ್ಲ.
ಬಾಲಾಕೋಟ್‌ನಲ್ಲಿ ಭಾರತ ಏರ್‌ಸ್ಟ್ರೈಕ್ ಮಾಡಿದ ಬಳಿಕ, ಅಣು ದಾಳಿಗೆ ಸ್ಕೆಚ್ ಹಾಕಿದ್ದ ಪಾಕ್, ಎರಡೇ ವರ್ಷದಲ್ಲಿ ಬಿಕಾರಿಯಾಗುವ ಹಂತ ತಲುಪಿದೆ. ನ್ಯೂಕ್ಲಿಯರ್ ಯುದ್ಧದ ಕನಸು ಕಂಡಿದ್ದ ದೇಶ, ಈಗ ದಿವಾಳಿಸ್ತಾನ್ ಹಂತ ತಲುಪಿದ್ದು ತನ್ನದೇ ತಪ್ಪುಗಳಿಂದ. ಪ್ರಸ್ತುತ ಭಿಕಾರಿಸ್ತಾನದ ಖಜಾನೆಯಲ್ಲಿ ಹಣವೇ ಇಲ್ಲ. ಒಂದು ಡಾಲರ್‌ಗೆ ಪಾಕಿಸ್ತಾನದ ರೂಪಾಯಿ 255ಕ್ಕೆ ಕುಸಿದಿದೆ. ಇಷ್ಟಲ್ಲಾ ಇದ್ರೂ ಪಾಕಿಸ್ತಾನದ ಪಾಲಿಗೆ ಯಾರಾದರೂ ಭಾಗ್ಯದಾತ ಆಗೋ ದೇಶವಿದ್ದರೆ ಅದು ಭಾರತ ಮಾತ್ರ.
ದಿವಾಳಿ ಪಾಕ್‌ಗೆ ಐಎಂಎಫ್ ಸಾಲವಿಲ್ಲ..! ಪಾಕ್ ಬಳಿ ಈಗ ಬರೀ 3 ವಾರಕ್ಕಾಗುವಷ್ಟು ಹಣ
ಪಾಕಿಸ್ತಾನ ತನಗೆ ಬಂದಿರೋ ಕಷ್ಟದಿಂದ ಬಚಾವ್ ಆಗ್ಬೇಕು ಅಂದ್ರೆ ಅದರ ಮುಂದಿರೋದು ಒಂದೇ ಆಯ್ಕೆ. ಭಾರತದ ಮಾತನ್ನು ಕೇಳ್ಕೊಂಡು ಅದರ ಹಾಗೆ ನಡೆಯೋದು. ಭಾರತ ಕೂಡ ಈ ನಿಟ್ಟಿನಲ್ಲಿ ಪಾಕಿಸ್ತಾನಕ್ಕೆ ಕಡೆಯ ಆಫರ್‌ಅನ್ನು ಕೂಡ ನೀಡಿದೆ ಎನ್ನಲಾಗಿದೆ.