ಆಮೆಗತಿಯ ಮತ ಎಣಿಕೆ..ರೊಚ್ಚಿಗೆದ್ದ ಪಾಕ್ ಜನತೆ! ಆ ಮೂವರ ನಡುವೆ ನಡೆದಿತ್ತು ಮತಸಂಗ್ರಾಮ!
ಇಮ್ರಾನ್ ಲಾಸ್ಟ್ ಬಾಲ್ ನಲ್ಲಿ ನೋ ಬಾಲ್ ಎಸೆದರೆ ಏನಾಗುತ್ತೆ..?
ಪಾಕ್‌ನಲ್ಲಿ ನಡೆದಿದ್ದು ಚುನಾವಣೆಯೋ.. ಘೋರ ಯುದ್ಧವೋ..?
ಸಿಡಿದವು ಬಾಂಬು.. ಹೋದವು ಜೀವ.. ಇದೆಂಥಾ ಎಲೆಕ್ಷನ್..!?
ಪಾಕಿಸ್ತಾನದ ಚುನಾವಣೆ ಅದ್ಯಾವ ದುರ್ಮುಹೂರ್ತದಲ್ಲಿ ಶುರುವಾಯ್ತೋ ಏನೋ, ಆ ಕ್ಷಣದಿಂದ ಈ ಹೊತ್ತಿನ ತನಕ ನರಬಲಿ ಅನ್ನೋದು ಸರ್ವೇ ಸಾಮಾನ್ಯವಾಗ್ಬಿಟ್ಟಿದೆ. ಪಾಕಿಸ್ತಾನದ ಚುನಾವಣೆ(Pakistan election) ಅದೆಷ್ಟು ಶಾಂತಿಯುತವಾಗಿ ನಡೆದಿತ್ತು ಅನ್ನೋದು ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತೆ. ಪಾಕಿನ ಚುನಾವಣೆ ಅದೆಷ್ಟು ಅದ್ಭುತವಾಗಿ ನಡೀತು ಅಂದ್ರೆ, ವಿಶ್ವಸಂಸ್ಥೆ(United Nations) ಪಾಕಿಸ್ತಾನ ಎಲೆಕ್ಷನ್ ರಿಸಲ್ಟ್(Result) ಮೇಲೇ ಅನುಮಾನ ಪಡೋ ಹಾಗಾಗಿದೆ. ಆಸ್ಟ್ರೇಲಿಯಾ ಅಂತೂ, ಓಪನ್ ಲೆಟರ್ ಬರ್ದು, ಈ ಚುನಾವಣೆಯ ಸತ್ಯಾಸತ್ಯ ಬಗ್ಗೆ ಅನುಮಾನ ವ್ಯಕ್ತಪಡಿಸ್ತಾ ಇದೆ. ಅಮೆರಿಕಾ ಅಂತೂ, ಪಾಕಿಸ್ತಾನದ ವಾಯ್ಲೆನ್ಸ್ ನೋಡಿ ಶಾಕ್‌ಗೆಗೊಳಗಾಗಿದೆ. ಜನ ಏನೋ ಪ್ರಾಣಭೀತಿಯ ಮಧ್ಯೆಯೇ ಓಟ್ ಹಾಕಿದ್ದೂ ಆಯ್ತು. ಅದರ ರಿಸಲ್ಟ್ ಬಯಲಿಗೆ ಬಂದಿದ್ದೂ ಆಯ್ತು. ಪಾಕಿಸ್ತಾನದಲ್ಲಿ ಈ ಸಲ ಎಲೆಕ್ಷನ್ ನಡೆದಿದ್ದು, ಪ್ರಮುಖವಾಗಿ ಮೂವರ ಮಧ್ಯೆ. ಅದರಲ್ಲೊಬ್ಬ, ಮಾಜಿ ಪ್ರಧಾನಿ, ಇಮ್ರಾನ್ ಖಾನ್. ಮತ್ತೊಬ್ಬನೂ ಕೂಡ, ಪಾಕಿನ ಮಾಜಿ ಪ್ರಧಾನಿ, ನವಾಜ್ ಷರೀಫ್. ಈ ಇಬ್ಬರ ಮಧ್ಯೆ ಕಾಣಿಸಿಕೊಂಡೋನು, ಈ ಭಿಲಾವಲ್ ಭುಟ್ಟೋ. ಪಾಕಿಸ್ತಾನದಲ್ಲಿ ಸರ್ಕಾರ ನಡೆಸೋಕೆ ಬೇಕಿರೋ ಬಹುಮತ 134.. ಆದ್ರೆ, ಶನಿವಾರ ಮಧ್ಯಾಹ್ನದ ಹೊತ್ತಿಗೆ 244 ಕ್ಷೇತ್ರಗಳ ಫಲಿತಾಂಶ ಹೊರಬಂದಿತ್ತು. ಆ ವೇಳೆಗೆ, ನವಾಜ್ ಷರೀಫ್ನ ಪಾಕಿಸ್ತಾನ್ ಮುಸ್ಲಿಂ ಲೀಗ್ ಪಾರ್ಟಿ 71 ಸ್ಥಾನ ಗೆದ್ದಿತ್ತು. ಭುಟ್ಟೋನ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಪಾರ್ಲಿಮೆಂಟರಿಯನ್ಸ್ 54 ಸ್ಥಾನ ಗಳಿಸಿತ್ತು. ಉಳಿದ ಸ್ಥಾನಗಳು ಇತರರ ಪಾಲಾಗಿದ್ರೆ, ಬರೋಬ್ಬರಿ 100 ಕ್ಷೇತ್ರಗಳಲ್ಲಿ, ಪಕ್ಷೇತರ ಅಭ್ಯರ್ಥಿಗಳು ಭರ್ಜರಿಯಾಗಿ ವಿನ್ ಆಗಿದ್ರು.
ಇದನ್ನೂ ವೀಕ್ಷಿಸಿ: Narendra Modi: ನಯಾ ಕಾಶ್ಮೀರದ ಬಗ್ಗೆ ಮೋದಿ ವರ್ಣನೆ..! 25 ವರ್ಷಗಳಲ್ಲಿ ವಿಕಸಿತ ಭಾರತದ ಸಂಕಲ್ಪ..!