Narendra Modi: ನಯಾ ಕಾಶ್ಮೀರದ ಬಗ್ಗೆ ಮೋದಿ ವರ್ಣನೆ..! 25 ವರ್ಷಗಳಲ್ಲಿ ವಿಕಸಿತ ಭಾರತದ ಸಂಕಲ್ಪ..!
ವಿಕಸಿತ ಭಾರತದಲ್ಲಿ ಯುವಜನತೆಯ ಪಾತ್ರವೇನು..?
3ನೇ ಬಾರಿ ಗೆಲ್ಲುವ ಅಮಿತ ವಿಶ್ವಾಸದಲ್ಲಿ ಪ್ರಧಾನಿ..!
ಅಭಿನಂದನಾ ಭಾಷಣದಲ್ಲಿ ಪ್ರಧಾನಿ ಮೋದಿ ಪ್ರತಿಜ್ಞೆ..!
ಲೋಕಸಭೆಯಲ್ಲಿ ಪ್ರಧಾನಿ ಮೋದಿ(Narendra Modi) ಅನೇಕ ವಿಚಾರಗಳನ್ನ ಹಂಚಿಕೊಂಡರು. ಸಂಸತ್ತಿನಲ್ಲಿ ತಗೊಂಡ ನಿರ್ಧಾರಗಳಿಂದ ಭಾರತದಲ್ಲಿ ಬದಲಾವಣೆಗಳು ಆಗಿದ್ದು ಹೇಗೆ ಅನ್ನೋದನ್ನ ತಿಳಿಸಿದರು. ಭಯೋತ್ಪಾದನೆ ಮುಕ್ತ ಭಾರತದ(India) ಸಂಕಲ್ಪದ ಬಗ್ಗೆಯೂ ವಿವರಿಸಿದರು. ಇದು ಲೋಕತಂತ್ರದ ಅತ್ಯಂತ ಮಹತ್ವದ ದಿನ ಎನ್ನುತ್ತಲೇ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಕಳೆದ ಐದು ವರ್ಷಗಳಲ್ಲಿ ದೇಶ ಭಾರೀ ಬದಲಾವಣೆ ಕಂಡಿದೆ. ಲೋಕಸಭೆಗೆ(Loksabha) ಪ್ರತಿಯೊಬ್ಬರೂ ಕೊಡುಗೆ ನೀಡಿದ್ದಾರೆ. 17ನೇ ಲೋಕಸಭೆಯಲ್ಲೂ ಜನರು ಆಶೀರ್ವದಿಸುವ ನಿರೀಕ್ಷೆ ಇದೆ. ಎಲ್ಲಾ ಸದಸ್ಯರಿಗೂ ನನ್ನ ಅಭಿನಂದನೆಗಳು. ಈ ವೇಳೆ ಸ್ಪೀಕರ್ ಓಂ ಬಿರ್ಲಾ(Speaker Om Birla) ಅವರ ಕಾರ್ಯನಿರ್ವಹಣೆಯ ಬಗ್ಗೆ ಮೋದಿ ಪ್ರಶಂಸೆ ವ್ಯಕ್ತಪಡಿಸಿದರು. ಸದನ ಅಥವಾ ಸಂಸತ್ತು ಅಂದ್ರೆ ಅಲ್ಲಿ ಸಭಾಧ್ಯಕ್ಷರೇ ಮುಖ್ಯಮಂತ್ರಿ ಅಥವಾ ಪ್ರಧಾನಿಗಿಂತಲೂ ತೂಕದ ಹುದ್ದೆಯನ್ನ ನಿಭಾಯಿಸ್ತಾ ಇರ್ತಾರೆ. ಪ್ರಧಾನಿ ಕೂಡ ಸ್ಪೀಕರ್ ಆದೇಶವನ್ನ ಮೀರುವಂತಿಲ್ಲ.. ಸ್ಪೀಕರ್ ಸ್ಥಾನವೇ ಹಾಗೇ, ನ್ಯಾಯಾಧೀಶರ ಥರವೇ ಇರ್ಬೇಕಾಗುತ್ತೆ. ಸ್ಪೀಕರ್ ಆದವರು ಪಕ್ಷಪಾತ ಮಾಡುವಂತಿಲ್ಲ. ಸರಿ ಇರೋದನ್ನ ಸರಿ ತಪ್ಪನ್ನ ತಪ್ಪು ಎನ್ನಬೇಕಾಗುತ್ತೆ. ಈ ವಿಚಾರಕ್ಕೆ ಓಂ ಬಿರ್ಲಾ ಅವರನ್ನ ಶ್ಲಾಘಸಿದ್ರು ನರೇಂದ್ರ ಮೋದಿ.
ಇದನ್ನೂ ವೀಕ್ಷಿಸಿ: Amit Shah: ಸುತ್ತೂರು ಮಠ ಲಿಂಗಾಯತ ಪರಂಪರೆಗೆ ಬಹುದೊಡ್ಡ ಕೊಡುಗೆ ನೀಡಿದೆ: ಅಮಿತ್ ಶಾ