4 ಲಕ್ಷ ಪಾಕ್​​ ಪ್ರಜೆಗಳ ಮುಂದೆ ಭಾರತದ ತಾಕತ್ತು ಹೇಳಿದ ಇಮ್ರಾನ್​ ಖಾನ್

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತೆ ಮತ್ತೆ ನೆರೆಯ ರಾಷ್ಟ್ರ ಭಾರತವನ್ನು ಹೊಗಳುವ ಮೂಲಕ ಸುದ್ದಿಯಾಗುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತೆ ಮತ್ತೆ ನೆರೆಯ ರಾಷ್ಟ್ರ ಭಾರತವನ್ನು ಹೊಗಳುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಅಧಿಕಾರದಲ್ಲಿದ್ದಾಗಲೂ ನೆರೆಯ ಭಾರತವನ್ನು ಹೊಗಳುತ್ತಿದ್ದ ಇಮ್ರಾನ್ ಖಾನ್‌ ಈಗ ಅಧಿಕಾರ ಕಳೆದುಕೊಂಡ ನಂತರವೂ ಶತ್ರುರಾಷ್ಟ್ರ ಭಾರತವನ್ನು ಹೊಗಳುತ್ತಿದ್ದು, ಇದು ಸ್ವತಃ ಪಾಕಿಸ್ತಾನ ಸರ್ಕಾರ ಹಾಗೂ ಪಾಕಿಸ್ತಾನಿಗರಿಗೆ ನುಂಗಲಾರದ ತುತ್ತಾಗಿದೆ. ಇತ್ತೀಚೆಗೆ ದೇಶ 75ನೇ ಸ್ವಾತಂತ್ರೋತ್ಸವದ ಸಂಭ್ರಮದ ವೇಳೆಯೂ ಇಮ್ರಾನ್ ಖಾನ್ ದೇಶವನ್ನು ಹೊಗಳಿದ್ದು ಭಾರತದ ದೇಶದ ಸಾಧನೆ ಭಾರತದ ವಿದೇಶಾಂಗ ನೀತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಉದಾಹರಣೆ ಸಮೇತ ಕೊಂಡಾಡಿದ್ದಾರೆ. ಇಮ್ರಾನ್‌ ಖಾನ್ ನಮ್ಮ ದೇಶದ ಬಗ್ಗೆ ಏನೆಲ್ಲಾ ಹೇಳಿದರು ಎಂಬ ಬಗ್ಗೆ ಸಂಪೂರ್ಣ ಡಿಟೇಲ್ ವಿಡಿಯೋದಲ್ಲಿದೆ. ವೀಕ್ಷಿಸಿ. 

Related Video