Russia- Ukraine War: ರಷ್ಯಾ ಬಾಂಬ್ ದಾಳಿಗೆ ಉಕ್ರೇನಿನ 160ಕ್ಕೂ ಅಧಿಕ ಶೈಕ್ಷಣಿಕ ಸಂಸ್ಥೆಗಳು ಉಡೀಸ್
ರಷ್ಯಾ ಉಕ್ರೇನ್ ಯುದ್ಧ ದಿನ ದಿನವೂ ಉಗ್ರ ರೂಪ ತಾಳುತ್ತಿದೆ. ರಷ್ಯಾದ ಅನಿಯಂತ್ರಿತ ಬಾಂಬ್ ದಾಳಿಗೆ ಉಕ್ರೇನಿನ 160ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಧ್ವಂಸವಾಗಿವೆ.
ರಷ್ಯಾ ಉಕ್ರೇನ್ ಯುದ್ಧ(Russia- Ukraine War) 10ನೇ ದಿನಕ್ಕೆ ಕಾಲಿಟ್ಟಿದ್ದು, ಬಾಂಬ್‌ಗಳ ಸುರಿಮಳೆಯನ್ನೇ ಉಕ್ರೇನಿನ ಮೇಲೆ ಸುರಿಸ್ತಾ ಇದೆ ರಷ್ಯಾ. ಈ ಬಾಂಬ್‌ಗಳ ದಾಳಿಗೆ ಉಕ್ರೇನಿನ 160ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು(educational institutions) ಸಂಪೂರ್ಣ ನೆಲ ಕಚ್ಚಿವೆ. ಇಲ್ಲಿನ ಅಣುವಿದ್ಯುತ್ ಸ್ಥಾವರಗಳನ್ನೇ ಟಾರ್ಗೆಟ್ ಮಾಡಿಕೊಂಡಿದೆ ರಷ್ಯಾ.
ಆದರೆ, ಬಲಾಢ್ಯ ರಷ್ಯಾಗೆ ಟಕ್ಕರ್ ಕೊಡ್ತಿದೆ ಉಕ್ರೇನ್. ಶತ್ರುದೇಶದ ನಿರಂತರ ದಾಳಿಗೆ ಕಿಂಚಿತ್ತೂ ಬಗ್ಗದೆ, ಸೋಲೊಪ್ಪದ ಸ್ವಾಭಿಮಾನಿ ಉಕ್ರೇನ್ ಕಳೆದ 9 ದಿನಗಳಲ್ಲಿ ರಷ್ಯಾದ 39 ವಿಮಾನಗಳು, 40 ಹೆಲಿಕಾಪ್ಟರ್‌ಗಳು ಉಡೀಸ್ ಆಗಿವೆ. ಉಕ್ರೇನನ್ನು ಸಂಪೂರ್ಣ ನಾಶ ಮಾಡುವುದೇ ತಮ್ಮ ಗುರಿ ಎಂದಿದ್ದಾರೆ ರಷ್ಯಾ ಅಧ್ಯಕ್ಷ ವ್ಲ್ಯಾಡಿಮಿರ್ ಪುಟಿನ್(Vladimir Putin).
Russia- Ukraine Crisis: ಭಾರತದ ಧ್ವಜ ಹಿಡಿದು ಜೀವ ಉಳಿಸಿಕೊಂಡ ಟರ್ಕಿಶ್, ಪಾಕಿಸ್ತಾನಿ ವಿದ್ಯಾರ್ಥಿಗಳು!
ಉಕ್ರೇನಿನ ಬಹುತೇಕ ಎಲ್ಲ ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಧ್ವಂಸವಾಗಿರುವಾಗ, ಯುದ್ಧ ನಿಂತರೂ ಇವನ್ನೆಲ್ಲ ಮತ್ತೆ ಕಟ್ಟಿಕೊಳ್ಳುವುದು, ನಾಗರಿಕರಿಗೆ ಮುಂಚಿನಂತೆ ಶಿಕ್ಷಣ ನೀಡುವುದು ಉಕ್ರೇನಿಗೆ ದೊಡ್ಡ ಸವಾಲಾಗೇ ಉಳಿಯಲಿದೆ.