Asianet Suvarna News Asianet Suvarna News

Russia- Ukraine Crisis: ಭಾರತದ ಧ್ವಜ ಹಿಡಿದು ಜೀವ ಉಳಿಸಿಕೊಂಡ ಟರ್ಕಿಶ್, ಪಾಕಿಸ್ತಾನಿ ವಿದ್ಯಾರ್ಥಿಗಳು!

ಭಾರತದ ಧ್ವಜವೊಂದೇ ಉಕ್ರೇನಿನಲ್ಲಿ ಹಲವಾರು ಜನರ ಜೀವ ಉಳಿಸಿದೆ. ತಾಯ್ನಾಡಿಗೆ ಮರಳಲು ಉಕ್ರೇನಿನಲ್ಲಿರುವ ವಿದೇಶಿಯರು ಪ್ರಯತ್ನಿಸುವಾಗ ಅವರ ನೆರವಿಗೆ ಬಂದಿದ್ದು ಭಾರತದ ಬಾವುಟ. ಅದು ಹೇಗೆ, ಏನಿದು ಕತೆ ನೋಡೋಣ. 

First Published Mar 5, 2022, 2:48 PM IST | Last Updated Mar 5, 2022, 2:48 PM IST

ರಷ್ಯಾ ಉಕ್ರೇನ್ ಯುದ್ಧ(Russia- Ukraine war)ದಲ್ಲಿ ಭಾರತದ ಶಕ್ತಿ ವಿಶ್ವಕ್ಕೇ ಪರಿಚಯವಾಗಿದೆ. ತನ್ನ ಪ್ರಜೆಗಳನ್ನು ಕರೆ ತರಲು ಭಾರತ ನಿರಂತರ ಕಾರ್ಯನಿರತವಾಗಿದೆ. ಇದರ ಹೊರತಾಗಿಯೂ ಕೇವಲ ಭಾರತದ ಧ್ವಜವೊಂದೇ ಅದೆಷ್ಟೋ ವಿದೇಶಿ ಪ್ರಜೆಗಳ ಜೀವ ಉಳಿಸಿದೆ ಎಂದರೆ ಎಂಥ ಹೆಮ್ಮೆಯ ವಿಷಯವಲ್ಲವೇ? 
ಹೌದು, ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ತಿರಂಗ ಧ್ವಜ(flag)ಕ್ಕಿರುವ ಗೌರವ, ನಮ್ಮ ದೇಶದ ಸಂಸ್ಕೃತಿ, ಅಸ್ಮಿತೆಗಿರುವ ಶಕ್ತಿ ಇತರೆಲ್ಲ ದೇಶಗಳಿಗಿಂತ ಎಷ್ಟೊಂದು ವಿಭಿನ್ನವಾಗಿದೆ ಹಾಗೂ ಅಸಾಧಾರಣವಾಗಿದೆ ಎಂಬುದನ್ನು ಈ ಸುದ್ದಿ ಸಾಬೀತುಪಡಿಸುತ್ತದೆ. ಭಾರತ(India) ಧ್ವಜದ ಈ ಶಕ್ತಿ ಕಂಡು ವಿಶ್ವವೇ ಬೆರಗಾಗಿದೆ. 

ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದಾಗಿನಿಂದಲೇ ಭಾರತ ತನ್ನ ಪ್ರಜೆಗಳನ್ನು ಮರಳಿ ತಾಯ್ನಾಡಿಗೆ ಕರೆತರಲು ಆಪರೇಶನ್ ಗಂಗಾ(operation Ganga) ನಡೆಸುತ್ತಿದೆ. ಉಕ್ರೇನ್ ಗಡಿವರೆಗೆ ಬರಲು ಭಾರತದ ವಿದ್ಯಾರ್ಥಿಗಳು ತಾವಿದ್ದ ಪ್ರದೇಶದಿಂದ ಮೂರು ರಾಜ್ಯಗಳನ್ನು ದಾಟಬೇಕಿತ್ತು. ಅವರೆಲ್ಲರ ಬಸ್ಸು, ಕಾರುಗಳ ಮೇಲೆ ಭಾರತ ಧ್ವಜ ಹಾಕಿಕೊಂಡು ಬಂದಿದ್ದರಿಂದ ಯಾವೊಂದು ಚೆಕ್‌ಪೋಸ್ಟ್‌ನಲ್ಲಿಯೂ ಕೂಡಾ ಅವರನ್ನು ಕನಿಷ್ಠ ತಪಾಸಣೆಯೂ ಮಾಡಲಾಗಿಲ್ಲ. ಈ ವಿಷಯ ಅರಿತ ಟರ್ಕಿ ಹಾಗೂ ಪಕ್ಕದ ಪಾಕಿಸ್ತಾನ(Pakistan)ದ ವಿದ್ಯಾರ್ಥಿಗಳು ಕೂಡಾ ಮಾರುಕಟ್ಟೆಯಿಂದ ಸ್ಪ್ರೇ ಪೇಯಿಂಟ್ ತಂದುಕೊಂಡು ಭಾರತ ಧ್ವಜ ಸಿದ್ಧಪಡಿಸಿಕೊಂಡು, ತಾವೂ ಕೂಡಾ ಭಾರತೀಯರೇ ಎಂದು ಹೇಳುತ್ತಾ ಚೆಕ್‌ಪೋಸ್ಟ್‌(Checkpost)ಗಳನ್ನು ದಾಟಿದ್ದಾರೆ. ಅವರು ಭಾರತದ ಧ್ವಜ ಹಿಡಿದಿದ್ದರಿಂದ ಅವರನ್ನು ಕೂಡಾ ಯಾವುದೇ ತಪಾಸಣೆ ಇಲ್ಲದೆ ಉಕ್ರೇನ್ ಗಡಿಯತ್ತ ತಲುಪಿಸಲಾಗಿದೆ. 

Russia Ukraine War: ಯುದ್ಧಪೀಡಿತ ಉಕ್ರೇನ್‌ನ ಕರಾಳತೆ ಬಿಚ್ಚಿಟ್ಟ ಬಳ್ಳಾರಿ ಸಹೋದರಿಯರ ಕಥೆ!

ಅವರು ತಮ್ಮದೇ ದೇಶದ ಬಾವುಟ ಹಿಡಿಯಬಹುದಿತ್ತು, ಶತ್ರುದೇಶವಾದ ಪಾಕಿಸ್ತಾನ ಸದಾ ಭಾರತೀಯರ ಮೇಲೆ ಸಲ್ಲದ ಆರೋಪ ಹೊರಿಸುತ್ತಿದ್ದರೂ, ಗಡಿ ದಾಟುವಾಗ ತಮ್ಮದೇ ಬಾವುಟ ಹಾಕಿಕೊಂಡು ಹೊರ ಬರುವ ಧೈರ್ಯ ಪಾಕಿಸ್ತಾನದ ವಿದ್ಯಾರ್ಥಿಗಳಿಗಿರಲಿಲ್ಲ. ಬದಲಿಗೆ ಭಾರತದ ಬಾವುಟ ಹಿಡಿದು ಪ್ರಾಣರಕ್ಷಣೆ ಮಾಡಿಕೊಂಡಿದ್ದಾರೆ. ಅಲ್ಲಿಗೆ ಶತ್ರುಗಳಿಗೂ ಭಾರತದ ಘನತೆ ಎಂಥದ್ದು, ತಮ್ಮದಕ್ಕಿಂತ ಅದೆಷ್ಟು ಮಹತ್ವದ್ದು ಎಂಬ ಅರಿವಿದೆ ಎಂದಾಯಿತು. ಈ ಕುರಿತ ವಿಸ್ತೃತ ವಿಡಿಯೋ ವರದಿ ಇಲ್ಲಿದೆ ನೋಡಿ.