ಅಸ್ಟ್ರೇಲಿಯಾದಲ್ಲಿ ಮೋದಿ ಮೇನಿಯಾ: ಜಗತ್ತಿನಾದ್ಯಂತ ಭಾರತದ ಟ್ಯಾಲೆಂಟ್‌ ಫ್ಯಾಕ್ಟರಿ ಇದೆ ಎಂದ ಪ್ರಧಾನಿ

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಸಮುದಾಯ ಸಮಾರಂಭದಲ್ಲಿ ಪ್ರಧಾನಿ ಮೋದಿ ಮಾತನಾಡಿದರು.

Share this Video
  • FB
  • Linkdin
  • Whatsapp

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಸಿಡ್ನಿಯಲ್ಲಿ ಸಮುದಾಯ ಕಾರ್ಯಕ್ರಮದಲ್ಲಿ ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಮಾತನಾಡಿದರು. ಉಭಯ ದೇಶಗಳ ನಡುವಿನ ಬಾಂಧವ್ಯಕ್ಕೆ ನೀಡಿದ ಕೊಡುಗೆಗಾಗಿ ಅವರು ಭಾರತೀಯ ಡಯಾಸ್ಪೊರಾವನ್ನು ಶ್ಲಾಘಿಸಿದರು. ಪ್ರಧಾನಿ ಮೋದಿ ಅವರು ಮೂರು ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಪ್ರಧಾನಿ ಮೋದಿ ಅವರ ಮಾತನ್ನು ಕೇಳಲು ಸುಮಾರು 20 ಸಾವಿರ ಅನಿವಾಸಿಗಳು ಆಗಮಿಸಿದ್ದರು. ಇಲ್ಲಿ ಇರುವ ಭಾರತೀಯರನ್ನು ಕಂಡು ಸಂತೋಷವಾಗಿದೆ ಎಂದು ಮೋದಿ ಹೇಳಿದರು. ಸದ್ಯ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುತ್ತಿದೆ. ಆರ್ಥಿಕತೆಯಲ್ಲಿ ಭಾರತ ಪ್ರಗತಿಯತ್ತ ಸಾಗುತ್ತಿದೆ. ಭಾರತದಲ್ಲಿ ಯಾವುದಕ್ಕೂ ಕೊರತೆ ಇಲ್ಲ. ನಮ್ಮ ದೇಶ ಈಗ ವೇಗವಾಗಿ ಬೆಳೆಯುತ್ತಿರುವ ಆರ್ಥಿಕವಾಗಿದೆ. ಎರಡನೇ ಅತಿ ದೊಡ್ಡ ಮೊಬೈಲ್ ತಯಾರಕ ರಾಷ್ಟ್ರವಾಗಿದೆ. ಭಾರತ ಬೃಹತ್ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಆರಂಭಿಸಿದೆ. ಭಾರತದಲ್ಲಿ ಡಿಜಿಟಲ್‌ ಕ್ರಾಂತಿಯಾಗಿದೆ ಎಂದು ಮೋದಿ ಹೇಳಿದರು.

ಇದನ್ನೂ ವೀಕ್ಷಿಸಿ: ನಿಮ್ಮ ಬಳಿ 2000 ರೂ. ನೋಟಿದ್ರೆ ಭಯ ಬೇಡ: ಇಂದಿನಿಂದ 4 ತಿಂಗಳ ಕಾಲ ನೋಟ್‌ ಬದಲಾವಣೆಗೆ ಅವಕಾಶ

Related Video