ತಾಲಿಬಾನ್ ವಿರುದ್ಧ ಹೋರಾಟಕ್ಕೆ ಅಹ್ಮದ್ ಮಸೂದ್ ಕರೆ!
ಅಪ್ಘಾನಿಸ್ತಾನ ಮತ್ತೊಂದು ದಂಗೆಗೆ ಸಾಕ್ಷಿಯಾಗುತ್ತಾ? ತಾಲಿಬಾನ್ ವಿರುದ್ಧ ಒಂದಾಗುತ್ತಿವೆ ಒಂದೊಂದೇ ಬಣಗಳು. ತಾಲಿಬಾಣ್ ತೆಕ್ಕೆಗೆ ಸಿಲುಕಿರುವ ಅಪ್ಘಾನಿಸ್ತಾನದಲ್ಲಿ ಇನ್ನೂ ಕೆಲ ಪ್ರಾಂತ್ಯಗಳ ಜನರು ಒಂದಾಗಿ ಹೋರಾಟ ನಡೆಸುತ್ತಿವೆ. ಅಹ್ಮದ್ ಮಸೂದ್ ಕೂಡಾ ಈ ಉಗ್ರರ ವಿರುದ್ಧ ಹೋರಾಟಕ್ಕೆ ಒಂದಾಗುವಂತೆ ಕರೆ ಕೊಟ್ಟಿದ್ದಾರೆ.
ಕಾಬೂಲ್(ಆ.23) ಅಪ್ಘಾನಿಸ್ತಾನ ಮತ್ತೊಂದು ದಂಗೆಗೆ ಸಾಕ್ಷಿಯಾಗುತ್ತಾ? ತಾಲಿಬಾನ್ ವಿರುದ್ಧ ಒಂದಾಗುತ್ತಿವೆ ಒಂದೊಂದೇ ಬಣಗಳು. ತಾಲಿಬಾಣ್ ತೆಕ್ಕೆಗೆ ಸಿಲುಕಿರುವ ಅಪ್ಘಾನಿಸ್ತಾನದಲ್ಲಿ ಇನ್ನೂ ಕೆಲ ಪ್ರಾಂತ್ಯಗಳ ಜನರು ಒಂದಾಗಿ ಹೋರಾಟ ನಡೆಸುತ್ತಿವೆ. ಅಹ್ಮದ್ ಮಸೂದ್ ಕೂಡಾ ಈ ಉಗ್ರರ ವಿರುದ್ಧ ಹೋರಾಟಕ್ಕೆ ಒಂದಾಗುವಂತೆ ಕರೆ ಕೊಟ್ಟಿದ್ದಾರೆ.
ಜಮಾತ್ ಏ ಇಸ್ಲಾಂ ಪಕ್ಷದ ಯುವ ನಾಯಕ ಈ ಅಹ್ಮದ್ ಮಸೂದ್. ಇವರ ತಂದೆ ಅಹ್ಮದ್ ಶಾ ಮಸೂದ್ ಕೂಡಾ ಓರ್ವ ಪ್ರಭಾವಿ ನಾಯಕ. ಭಾರತದ ಬಗ್ಗೆ ಅಭಿಮಾನ ಹೊಂದಿದ್ದರು. ಉಗ್ರರ ತೆಕ್ಕೆಯಿಂದ ಈವರೆಗೂ ಸೇಫ್ ಆಗಿರುವ ಪಂಜ್‌ಶೀರ್ ಪ್ರಾಂತ್ಯದಲ್ಲಿ ಪಕ್ಷ ಸಂಘಟನೆಯಲ್ಲೂ ಅಹ್ಮದ್ ಮಸೂದ್ ತೊಡಗಿಸಿಕೊಂಡಿದ್ದರು. ಆದರೆ 2001ರಲ್ಲಿ ತಾಲಿಬಾನ್ ಗುಂಡಿಗೆ ಮಸೂದ್ ತಂದೆ ಬಲಿಯಾಗಿದ್ದರು.