ಪ್ರಧಾನಿ ನರೇಂದ್ರ ಮೋದಿ ಬದಲಾವಣೆಯ ಹರಿಕಾರ: ವಿಶ್ಲೇಷಕ ರೇ ಡಾಲಿಯೋ

ವಿಶ್ಲೇಷಕ ರೇ ಡಾಲಿಯೋ ಮೋದಿಯವರನ್ನು ಅಮೆರಿಕಾದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಮೋದಿ ಬದಲಾವಣೆಯ ಹರಿಕಾರ ಎಂದಿದ್ದಾರೆ.

First Published Jun 21, 2023, 11:31 AM IST | Last Updated Jun 21, 2023, 11:31 AM IST

ನ್ಯೂಯಾರ್ಕ್: ಖ್ಯಾತ ಹೂಡಿಕೆದಾರ ಮತ್ತು ವಿಶ್ಲೇಷಕ ರೇ ಡಾಲಿಯೋ ಅವರು ಅಮೆರಿಕಾದಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾದರು. ಬಳಿಕ ಮಾತನಾಡಿದ ಅವರು, ಭಾರತದಲ್ಲಿ ಮೋದಿಯವರ ಆಡಳಿತ ಶುರುವಾದ ತಕ್ಷಣ, ಆ ದೇಶಕ್ಕೆ ಒಳ್ಳೆ ಸಮಯ ಬಂದಿತು. ಅದು ಭಾರತದ ಕಾಲವಾಯಿತು. ಆ ದೇಶದ ಸಾಮರ್ಥ್ಯವು ಅಗಾಧವಾಗಿದೆ. ಅಲ್ಲದೇ ಭಾರತ ಉತ್ತಮ ನಾಯಕನನ್ನು ಹೊಂದಿದೆ. ಮೋದಿಯವರು ಬದಲಾವಣೆಯ ಹರಿಕಾರರಾಗಿದ್ದಾರೆ ಎಂದು ರೇ ಡಾಲಿಯೋ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಅಮೆರಿಕಾಗೆ ತೆರಳಿದ್ದಾರೆ. ಇಲ್ಲಿ ರೇ ಡಾಲಿಯೋ ಮೋದಿಯವರನ್ನು ಭೇಟಿಯಾಗಿದ್ದಾರೆ.

ಇದನ್ನೂ ವೀಕ್ಷಿಸಿ: ಪ್ರಧಾನಿ ಮೋದಿ ಅವರಿಗೆ ಆಕಾಶವೂ ಮಿತಿ ಇಲ್ಲ: ನೀಲ್ ಡಿಗ್ರಾಸ್ ಟೈಸನ್