ಎನ್‌ಡಿಎ ಒಳಗೂ ನಡೀತಿದೆಯಾ ಮುಸುಕಿನ ಗುದ್ದಾಟ..? ಐಎನ್‌ಡಿಐಎಗೆ ಶಾಪವಾಗುತ್ತಾ ಒಳಜಗಳ..?

I.N.D.I.Aಲಿ ಶುರುವಾಗಿದೆ ಕ್ಷೇತ್ರಕ್ಕಾಗಿ ಹಗ್ಗಜಗ್ಗಾಟ..!
ಪಂಚರಾಜ್ಯ ಚುನಾವಣೆ ಹೊತ್ತಲ್ಲಿ ಮೈತ್ರಿ-ಮನಸ್ತಾಪ!
ಕೋಲಾಹಲ ಸೃಷ್ಟಿಸಿದೆ ಕ್ಷೇತ್ರ ಹಂಚಿಕೆಯ ಗೊಂದಲ!

First Published Nov 3, 2023, 2:58 PM IST | Last Updated Nov 3, 2023, 2:58 PM IST

ಅರ್ಧ ವರ್ಷ ಇನ್ನೊಂದರ್ಧ ವರ್ಷ ಅಷ್ಟೇ ಬಾಕಿ, ಲೋಕಸಭಾ(Loksabha) ಸಂಗ್ರಾಮ ಅನ್ನೋ ಮಹಾ ಸಂಘರ್ಷಕ್ಕೆ. ಆದ್ರೆ, ಆ ಯುದ್ಧವನ್ನ ಗೆಲ್ಲೋದಕ್ಕೆ ಸಿದ್ಧವಾಗ್ತಾ ಇರೋ ಮೈತ್ರಿಪಡೆಗಳಲ್ಲೇ ಸವಾಲು ಸೃಷ್ಟಿಯಾಗಿದೆ. ಸಮಸ್ಯೆ ತಲೆದೂರಿದೆ. ಲೆಕ್ಕಾಚಾರಗಳೇ ಬುಡಮೇಲಾಗೋ ಸಾಧ್ಯತೆ ಕಾಣ್ತಾ ಇದೆ. ಈ ಎರಡು ಮೈತ್ರಿಕೂಟಗಳ ಮಧ್ಯೆ ಯುದ್ಧವಂತೂ ಶುರುವಾಗಿದೆ. ಆದ್ರೆ, ಈ ಮೈತ್ರಿ ಕೂಟದ ಒಳಗೇ ಅಂತರ್ಯುದ್ಧವೇ ಆರಂಭವಾಗಿದೆಯಾ ಅನ್ನೋ ಕುತೂಹಲವೊಂದು ಈಗ ನಿರ್ಮಾಣವಾಗಿದೆ. ಅದಕ್ಕೆ ಒಂದಲ್ಲ ಅಂತ ಹತ್ತಾರು ಕಾರಣಗಳು ಕಣ್ಣಿಗೆ ರಾಚ್ತಾ ಇದಾವೆ. ಕಳೆದ ನಾಲ್ಕು ತಿಂಗಳ ಹಿಂದೆ, ಇದೇ ಬೆಂಗಳೂರಲ್ಲಿ, ಯುಪಿಎ(UPA) ಅನ್ನೋ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ, ಐಎನ್‌ಡಿಐಎ(I.N.D.I.A ) ಅನ್ನೋ ಹೊಸ ಸ್ವರೂಪ ಪಡೆದು, ಎನ್‌ಡಿಎ ವಿರುದ್ಧ ರಣಘೋಷ ಮೊಳಗಿಸಿತ್ತು. ಅದೇ ಹೊತ್ತಲ್ಲಿ, ಅಲ್ಲಿ, ದೂರದ ದೆಹಲಿಯಲ್ಲಿ ಮೋದಿ ನಾಯಕತ್ವದಲ್ಲಿ ಎನ್‌ಡಿಎ ಮೈತ್ರಿ ಕೂಟವೂ ಹೊಸ ಆಕೃತಿ ಪಡೆದಿತ್ತು. ಈ ಇಬ್ಬರ ಟಾರ್ಗೆಟ್ ಇದ್ದದ್ದು, ಅವರನ್ನ ಇವರು ಗೆಲ್ಲೋದು. ಇವರನ್ನ ಅವರು ಗೆಲ್ಲೋದು. ಈ ಗೆದ್ದೇ ಗೆಲ್ಲೋ ಆಟದಲ್ಲಿ, ನಾಲ್ಕು ತಿಂಗಳ ಬಳಿಕ ಯಾರ್ಯಾರು ಏನೇನು ಮಾಡಿದಾರೆ ಅನ್ನೋದನ್ನ ನೋಡಿದ್ರೆ, ಈ ಮೈತ್ರಿಕೂಟಗಳ ಮಿಸ್ಟ್ರಿ ಅರ್ಥವಾಗುತ್ತೆ. ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್ ಈಗ ಎನ್‌ಡಿಎ ಭಾಗವಾಗಿದೆ. ಮುಂದಿನ ಲೋಕಸಭಾ ಚುನಾವಣೆನಾ ಬಿಜೆಪಿ ಜೊತೆ ಮೈತ್ರಿ ಮಾಡ್ಕೊಂಡು ಎದುರಿಸಲಿದೆ. ಇದರಿಂದ ಬಿಜೆಪಿಗೆ ಅದೇನು ಲಾಭವಾಗಲಿದೆಯೋ ಅಂದಾಜು ಸಿಗುತ್ತಿಲ್ಲ. ಆದ್ರೆ, ಜೆಡಿಎಸ್‌ಗೆ ಅಂತೂ ಕನಿಷ್ಟ ಕೆಲವು ಸೀಟುಗಳಲ್ಲಿ ಗೆಲುವು ಸಿಕ್ಕಷ್ಟೇ ಖುಷಿಯಾಗಿದೆ.

ಇದನ್ನೂ ವೀಕ್ಷಿಸಿ:  ಅಪ್ಪ ಮಗನನ್ನ ಕೊಂದರೆ.. ಇಲ್ಲಿ ಮಗ ತಾಯಿಯನ್ನ ಮುಗಿಸಿದ..!

Video Top Stories