Suvarna Focus: ಕಾಡ್ಗಿಚ್ಚಿನ ಅಟ್ಟಹಾಸಕ್ಕೆ ಪತರಗುಟ್ಟಿದ ಅಮೆರಿಕಾ!

ಪ್ರಪಂಚದಾದ್ಯಂತ ನಡೆಯುತ್ತಿರುವ ಅನಾಹುತಗಳಿಂದ ಪಂಚಭೂತಗಳು ಯುದ್ಧ ಸಾರಿದೆಯೇ ಎಂಬ ಪ್ರಶ್ನೆ ಮೂಡಿದೆ. ಆಕಾಶ, ಭೂಮಿ, ನೀರು, ಗಾಳಿ ಮತ್ತು ಬೆಂಕಿ - ಈ ಪಂಚತತ್ವಗಳನ್ನು ಪೂಜಿಸುವ ಹಿಂದೂ ಪರಂಪರೆಯಲ್ಲಿ ಈ ಘಟನೆಗಳು ಆತಂಕ ಮೂಡಿಸಿವೆ.

First Published Jan 14, 2025, 7:02 PM IST | Last Updated Jan 14, 2025, 7:02 PM IST

ಬೆಂಗಳೂರು (ಜ.14): ಪರದೆ ಮೇಲೆ ಈ ದೃಶ್ಯಗಳನ್ನ ನೋಡುತ್ತಿದ್ದರೇನೇ, ಜೀವ ಝಲ್ ಅನ್ನುತ್ತೆ.. ಇನ್ನು ಆ ವಾತಾವರಣದಲ್ಲೇ ಇರೋರ ಗತಿ ಏನಾಗಿರ್ಬೋದು ಅಂತ ನೀವೇ ಒಂದು ಕ್ಷಣ ಯೋಚಿಸಿನೋಡಿ.

ಎಲ್ಲೋ ಒಂದು ಕಡೆ ಏನೋ ಒಂದು ಅನಾಹುತವಾಗೋದು, ಹೊಸದೂ ಅಲ್ಲ, ವಿಚಿತ್ರವಂತೂ ಅಲ್ವೇ ಅಲ್ಲ.. ಆದ್ರೆ, ಭೂಮಂಡಲದ ಒಂದೊಂದು ಮೂಲೇಲೂ ಒಂದೊಂದು ವಿಧವಾದ ಅನಾಹುತ ವರದಿಯಾಗ್ತಾ ಇರೋದು, ಬಹುಶಃ ಇದೇ ಮೊದಲು.. ಹಾಗಾಗಿನೇ, ಪಂಚಭೂತಗಳು ಪ್ರಪಂಚದ ಮೇಲೆ ಯುದ್ಧ ಸಾರಿದವಾ ಅನ್ನೋ ವಾತಾವರಣ ಹುಟ್ಟಿಕೊಂಡಿರೋದು.

ಅರ್ಧ ಅಮೆರಿಕ ಧಗಧಗ, ಇನ್ನರ್ಧ ಗಡಗಡ! ಒಂದೇ ದೇಶ, ಎರಡು ಪ್ರಾಕೃತಿಕ ವೈಪರಿತ್ಯ!

ಆಕಾಶ, ಭೂಮಿ, ನೀರು, ಗಾಳಿ, ಬೆಂಕಿ.. ಈ ಐದನ್ನ ಪಂಚಭೂತಗಳು, ಪಂಚತತ್ವಗಳು ಅಂತ ಕರೀತಾರೆ.. ಹಿಂದೂ ಪರಂಪರೆಲಿ ಇವನ್ನೆಲ್ಲಾ ಪೂಜಿಸ್ತಾರೆ.. ಜಗತ್ತಿನ ಹತ್ತಾರು ನಾಗರಿಕತೆಗಳು ಬೇರೆ ಬೇರೆ ವಿಧಾನದಲ್ಲಿ ಪೂಜಿಸಿದ್ದು ಕೂಡ ಇದೇ ಈ ಐದು ಭೂತಗಳನ್ನ.. ಆದ್ರೆ, ಅವೇ ಈಗ, ಪ್ರಚಂಡ ಪ್ರಳಯಕ್ಕೆ ಮುಂದಾಗಿವೆ.