ಅರ್ಧ ಅಮೆರಿಕ ಧಗಧಗ, ಇನ್ನರ್ಧ ಗಡಗಡ! ಒಂದೇ ದೇಶ, ಎರಡು ಪ್ರಾಕೃತಿಕ ವೈಪರಿತ್ಯ!
ಪ್ರಕೃತಿ ಮುನಿಸಿಕೊಂಡಿದೆ. ಅಮೆರಿಕಾದಲ್ಲಿ ವಿಧ್ವಂಸ ಸೃಷ್ಟಿಸ್ತಾ ಇದೆ. ಸಮುದ್ರಕ್ಕೆ ಅಂಟಿಕೊಂಡಿರೋ ಪ್ರದೇಶವೇ ಆದ್ರು, ಅಲ್ಲಿನ ಬೆಂಕಿನಾ ಅಂಕೆಗೆ ತರೋಕೆ ಸಾಧ್ಯವಾಗ್ತಾ ಇಲ್ಲ. ಇನ್ನೊಂದು ಕಡೆ, ಅಮೆರಿಕ ಜನರಿಗೆ, ಚಳಿ ತಡೆಯೋಕೆ ಸಾಧ್ಯಾವಾಗ್ತಾ ಇಲ್ಲ. ಒಂದೇ ದೇಶ, ಎರಡು ಪ್ರಾಕೃತಿಕ ವೈಪರಿತ್ಯ, ಇದರ ಹಿಂದಿರೊ ಅಸಲಿ ಕತೆ ಏನು ಅಂತ ತೋರಿಸ್ತೀವಿ ನೋಡಿ
ಅದು ಅಂತಿಂಥಾ ದೇಶ ಅಲ್ಲ. ಜಗತ್ತಿನ ಯಾವ ಮೂಲೆಲಿ ಏನೇ ಸಮಸ್ಯೆ ಬಂದ್ರು, ನಾನ್ ರಿಪೇರಿ ಮಾಡ್ತಿನಿ ಅಂತ ಠೇಂಕಾರ ಮಾಡ್ತಾ ಎಗರಾಡೋ ದೇಶ.. ಅದರ ಹೆಸರು ಅಮೆರಿಕಾ, ಆದ್ರೆ ತನ್ನನ್ನ ತಾನು ಘೋಷಿಸಿಕೊಂಡಿರೋದು, ಹಿರಿಯಣ್ಣ ಅಂತ. ಟೆಕ್ನಾಲಜಿಲಿ ಅಮೆರಿಕಾ ಮುಂದುವರೆದಿದೆ, ತಂತ್ರಜ್ಞಾನದಲ್ಲಿ ನಮಗಿಂತಾ ಮುಂದಿದೆ. ವಿಜ್ಞಾನದ ತವರು ನಮ್ಮ ದೇಶ ಅಂತ ಹೇಳ್ಕೊಳ್ತಾರೆ.
ಆದ್ರೆ, ಅಂಥಾ ದೇಶದಲ್ಲಿ ಈಗ ಎಂಥಾ ವಿಧ್ವಂಸವಾಗ್ತಾ ಇದೆ ನೀವೇ ನೋಡ್ತಾ ಇದೀರಿ.. ಪ್ರಕೃತಿ ಒಂದು ಸಲ ಮೈಕೊಡವಿದ್ರೆ ಏನಾಗುತ್ತೆ ಅನ್ನೋಕೆ, ಅಮೆರಿಕಾದ ಈ ದುರಂತವೇ ಸಾಕ್ಷಿ