ಉಗ್ರರಿಗೆ ಸಾವಿನ ಭಯ ಹುಟ್ಟಿಸಿದ ‘ಟೆಡ್ಡಿಬೇರ್’..! ಇಸ್ರೇಲ್‌ಗೆ ಆಪತ್ತು ಬಂದಾಗೆಲ್ಲ ರಕ್ಷಕನಾಗೋ ಡಿ9ಆರ್ !

ಹೆಸರು ‘ಟೆಡ್ಡಿಬೇರ್’ ಮಾಡೋ ಕೆಲಸ ಮಾತ್ರ ಖತರ್ನಾಕ್..!
ಹಮಾಸ್ ಉಗ್ರರಿಗೆ ಸಾವಿನ ಭಯ ಹುಟ್ಟಿಸಿದ ‘ಟೆಡ್ಡಿಬೇರ್’..!
ಇಸ್ರೇಲ್ ‘ಟೆಡ್ಡಿಬೇರ್’ ನೋಡಿ ಹಮಾಸ್ ಉಗ್ರರು ಶಾಕ್..!
 

First Published Nov 6, 2023, 9:57 AM IST | Last Updated Nov 6, 2023, 9:57 AM IST

ಒಂದೊಂದು ದೃಶ್ಯ.. ಒಂದಕ್ಕಿಂತ ಒಂದು ಭಯಾನಕ, ಭೀಕರ.. ಬೀಭತ್ಸ.. ಅಷ್ಟೇ ಹೃದಯ ವಿದ್ರಾವಕ. ಇವೆಲ್ಲ ನೋಡ್ತಿದ್ದ ಹಾಗೆಯೇ ಅರ್ಥವಾಗಿ ಬಿಡುತ್ತೆ, ಇದು ಹಮಾಸ್(Hamas) ಉಗ್ರರು ಆಡಿದ ಕ್ರೌರ್ಯದಾಟದ ಎಫೆಕ್ಟ್ ಅಂತ. ಎಸ್.. ಯುದ್ಧ ಅಂದರೆ ರಕ್ತ, ಮಾಂಸದ ಮುದ್ದೆ ಬಿದ್ದಿರುವ ನರಕದ ಹಾದಿ ಅಲ್ಲ. ಅಲ್ಲೂ ಜೀವಗಳು ಬದುಕಿರುತ್ತೆ. ಒದ್ದಾಡ್ತಿರುತ್ತೆ.. ನರಳಾಡ್ತಿರುತ್ತೆ. ಇದೇ ದೃಶ್ಯಗಳನ್ನ ಇಸ್ರೇಲ್‌ನ(Israel) ಗಾಜಾಪಟ್ಟಿಯಲ್ಲಿ(Gaza) ಹೆಜ್ಜೆ ಇಟ್ಟಲೆಲ್ಲ ನೋಡ್ಬಹುದು. ಹೀಗೆ ನರಕ ಸೃಷ್ಟಿಸಿದ ರಕ್ತದಾಹಿ ಹಮಾಸ್‌ಗಳ ಹೆಡೆಮುರಿ ಕಟ್ಟೊದಕ್ಕಂತಾನೇ ಇಸ್ರೇಲ್ ಸ್ಪೆಷಲ್ ಸ್ಕ್ವಾಡ್ ರೆಡಿ ಮಾಡಿದೆ. ಆ ಸ್ಕ್ವಾಡ್ ಈಗ ಯುದ್ಧ ಭೂಮಿಗೆ ಇಳಿದಿದ್ದೂ ಆಗಿದೆ. ಈಗ ಅದರ ಕೆಲಸ ಉಗ್ರರ ಹೆಡೆಮುರಿ ಕಟ್ಟುವುದಷ್ಟೆ. ಇಲ್ಲಿ ಹೀಗೆ ಸಾಲು ಸಾಲಾಗಿ ಇಟ್ಟಿರೋ ಟೆಡ್ಡಿಬೇರ್‌ಗಳನ್ನ(Teddy Bears) ನೋಡಿ. ಎಲ್ಲಾ ಟೆಡ್ಡಿಬೇರ್ ಕಣ್ಣುಗಳನ್ನೂ ಕಪ್ಪು ಬಟ್ಟೆಯಿಂದ ಕಟ್ಟಲಾಗಿದೆ. ಹಾಗೆಯೇ ಈ ಎಲ್ಲ  ಗೊಂಬೆಗಳಿಗೆ ರಕ್ತವನ್ನ ಹಚ್ಚಲಾಗಿದೆ. ಜೊತೆಗೆ ಆ ಎಲ್ಲ ಟೆಡ್ಡಿಬೇರ್‌ಗಳಿಗೂ ಒಂದೊಂದು ಫೋಟೋ ಹಚ್ಚಲಾಗಿದೆ. ಅಲ್ಲಿರೋ ಕೆಲವರು, ಈ ಗೊಂಬೆಗಳನ್ನ ನೋಡಿ ಭಾವುಕರಾಗ್ತಿದ್ದಾರೆ. ಇಷ್ಟು ದಿನ ನಾವೆಲ್ಲ ಮುದ್ದು ಮುದ್ದಾಗಿರೋ ಟೆಡ್ಡಿಬೇರ್‌ಗಳನ್ನ ನೋಡಿರ್ತೆವೆ. ಆದರೆ ಇಲ್ಲಿರೋ ಟೆಡ್ಡಿಬೇರ್‌ಗಳ ಅವತಾರವೇ ಬೇರೆಯಾಗಿದೆ. ಆ ಟೆಡ್ಡಿಬೇರ್‌ಗಳಿಗೂ ಈ ಇವಕ್ಕೂ ಇರೋ ಡಿಫರೆಂನ್ಸ್ ಅಜಗಜಾಂತರ.

ಇದನ್ನೂ ವೀಕ್ಷಿಸಿ: ಜೋಗಮ್ಮನ ಮೈಮೇಲೆ ಬಂದು ಸಾವಿಗೆ ಕಾರಣ ತಿಳಿಸಿದ ದುರ್ಗಾದೇವಿ: ಕಣ್ಣಿಗೆ ಕಂಡವರನ್ನೆಲ್ಲ ಬಲಿ ಪಡೆಯುತ್ತಿದ್ದಾಳಾ ದುರ್ಗೆ..?

Video Top Stories