ಜೋಗಮ್ಮನ ಮೈಮೇಲೆ ಬಂದು ಸಾವಿಗೆ ಕಾರಣ ತಿಳಿಸಿದ ದುರ್ಗಾದೇವಿ: ಕಣ್ಣಿಗೆ ಕಂಡವರನ್ನೆಲ್ಲ ಬಲಿ ಪಡೆಯುತ್ತಿದ್ದಾಳಾ ದುರ್ಗೆ..?

ಎಣ್ಣೆಯ ಜಿಗಿಯನ್ನು ಕೆತ್ತನೆ ಮಾಡುವಾಗ ದೇವಿ ಮೂರ್ತಿ ವಿರೂಪ
ರಾಮದುರ್ಗ ತಾಲ್ಲೂಕಿನ ತುರನೂರು ಗ್ರಾಮದಲ್ಲಿ ಅಚ್ಛರಿ ಘಟನೆ 
ಹೃದಯಾಘಾತ, ರಕ್ತದೊತ್ತಡ, ಮಧುಮೇಹದ ಕಾಯಿಲೆಗೆ ಸಾವು
ಹೃದಯ ಸಂಬಂಧಿ ಕಾಯಿಲೆಗಳಿಂದಲೇ ಆಗಿವೆಯಂತೆ ಹೆಚ್ಚಿನ ಸಾವು

First Published Nov 6, 2023, 9:39 AM IST | Last Updated Nov 6, 2023, 9:39 AM IST

ತಮ್ಮೂರಿದ ದುರ್ಗಾದೇವಿ ಮೂರ್ತಿ ಮುಕ್ಕಾಗಿದ್ದರಿಂದಲೇ ಹೀಗೆಲ್ಲ ಆಗ್ತಿದೆ ಎಂದುಕೊಂಡ ಗ್ರಾಮಸ್ಥರು(Villagers) ಸಂಪೂರ್ಣ ಭಯಭೀತರಾಗಿದ್ದಾರೆ. ಮೂರ್ತಿ(Idol) ಕ್ಲೀನ್ ಮಾಡುವ ಸಂದರ್ಭದಲ್ಲಿ ಪೂರ್ತಿ ಮುಕ್ಕಾಗಿದೆ. ಆ ಕಾರಣಕ್ಕೆ ದುರ್ಗಾದೇವಿ(Durga) ಗ್ರಾಮಸ್ಥರ ಮೇಲೆ ಸಿಟ್ಟಾಗಿದ್ದಾಳೆ. ಅವಳ ಕೋಪಕ್ಕೆ ಗ್ರಾಮಸ್ಥರು ಬಲಿಯಾಗುತ್ತಿದ್ದಾರೆ ಎಂದು ಗ್ರಾಮಸ್ಥರು ಅಂದುಕೊಂಡಿದ್ದಾರೆ. ಕೊರೊನಾ(Corona) ಸಂದರ್ಭದಲ್ಲಿ ದೇವಿ ಇಡೀ ಗ್ರಾಮವನ್ನೇ ಮಡಿಲಲ್ಲಿಟ್ಟು ಕಾಪಾಡಿಕೊಂಡು ಬಂದಿದ್ದಾಳೆ. ಆದ್ರೆ ಈಗ ಯಾಕಿಷ್ಟು ಕೋಪಗೊಂಡಿದ್ದಾಳೆ? ಅವಳ ಕೋಪ ತಣ್ಣಗಾಗಿಸೋದು ಹೇಗೆ ಅನ್ನೋ ಚಿಂತೆಯಲ್ಲಿ ಇಲ್ಲಿನ ಜನರಿದ್ದಾರೆ. ದುರ್ಗಾದೇವಿ ಪೂಜೆ ಮಾಡಲು ಎಲ್ಲ ಸಿದ್ಧತೆಗಳನ್ನು ಗ್ರಾಮಸ್ಥರು ಮಾಡಿಕೊಂಡಿದ್ದಾರೆ. ಬರುವ ಮಂಗಳವಾರದಿಂದ ದೇವಿಗೆ ಪೂಜೆ, ಹೋಮ, ಹವನ ಶುರು ಮಾಡಲಿದ್ದಾರೆ. ಅರ್ಚಕರು ಅನೇಕ ಪದ್ಧತಿಗಳನ್ನು ಗ್ರಾಮಸ್ಥರಿಗೆ ಹೇಳಿದ್ದಾರೆ. ಮುಖ್ಯ ಅರ್ಚಕರು ಹೇಳಿದಂತೆ ಎಲ್ಲ ಸಿದ್ಧತೆಗಳನ್ನು ಗ್ರಾಮಸ್ಥರು ಮಾಡಿಕೊಳ್ಳುತ್ತಿದ್ದಾರೆ. ಈ ಮಂಗಳವಾರದಿಂದ ದುರ್ಗಾದೇವಿಗೆ ಶಾಂತಿ ಪೂಜೆ ಆರಂಭವಾಗಲಿದೆ. ಮೂರ್ತಿ ಮುಕ್ಕಾಗಿದ್ದರಿಂದ, ಅರ್ಚಕರು ಮೊದಲು ಅದನ್ನು ರೆಡಿ ಮಾಡಿಸಿದ್ದಾರೆ. ಇದರ ನಂತರ ಈ ಮಂಗಳವಾರದಿಂದ ಶುಭಕಾರ್ಯಗಳು ಶುರುವಾಗಲಿವೆ. ಹೋಮ-ಹವನ ಸೇರಿದಂತೆ ಕಾರ್ಯಗಳು ನಡೆಯಲಿವೆ.ಮುಂದಿನ ಮಂಗಳವಾರದಿಂದ ಭರ್ಜರಿ ಪೂಜೆ ನಡೆಯಲಿದೆ. ಗ್ರಾಮಸ್ಥರೆಲ್ಲ ಅಂದು ಯಾರೂ ಕೆಲಸಕ್ಕೆ ಹೋಗದಿರಲು ನಿರ್ಧರಿಸಿದ್ದಾರೆ. ಅದ್ದೂರಿಯಾಗಿ ದೇವಿಗೆ ಉಡಿ ತುಂಬಿ ಪೂಜೆ ಮಾಡಲು ಸಿದ್ಧರಾಗಿದ್ದಾರೆ. ಹಾಗೆನೇ ಸಧ್ಯದಲ್ಲೇ ದುರ್ಗಾದೇವಿ ಜಾತ್ರೆಯನ್ನು ಜೋರಾಗಿನೇ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಜಾತ್ರೆ ಸಂದರ್ಭದಲ್ಲಿ ಕುಂಭ ಮೇಳ ಮತ್ತು ಬ್ಯಾಟಿ ಮಾಡುವ ಸಿದ್ಧತೆಯಲ್ಲೂ ಇದ್ದಾರೆ. 

ಇದನ್ನೂ ವೀಕ್ಷಿಸಿ:  ವಿಷಬಾಂಬ್ ಬ್ಲಾಸ್ಟ್ ಹಿಂದಿದೆಯಾ ದೆಹಲಿ ರೈತರ ಪಾಲು..? ಬೆಂಗಳೂರಿನಲ್ಲೂ ಏರ್ ಪಾಯ್ಸನ್ ಬಾಂಬ್ ಬ್ಲಾಸ್ಟ್..!

Video Top Stories