ಇಸ್ರೇಲಿನ ಬೀದಿ ಬೀದಿಯಲ್ಲಿ ಸುವರ್ಣ ಸಂಚಾರ..! ಗಾಜಾ ಗಡಿಯಿಂದ ಕೂಗಳತೆ ದೂರದಲ್ಲಿ ವರದಿ

ಯುದ್ಧ ಭೂಮಿಗೆ ನುಗ್ಗಿದ ದಕ್ಷಿಣ ಭಾರತದ ಏಕೈಕ ವಾಹಿನಿ
ಇದು ಎಲ್ಲೂ ಸಿಗದ ಯುದ್ಧದ ವರದಿ..ನಮ್ಮಲ್ಲಿ ಮಾತ್ರ!  
ಇಸ್ರೇಲ್..ಹಮಾಸ್ ಸಂಘರ್ಷದ ಎಕ್ಸ್‌ಕ್ಲೂಸಿವ್ ವರದಿ

Share this Video
  • FB
  • Linkdin
  • Whatsapp

ಇದು ನಿರ್ಭೀತ ಪ್ರತ್ರಿಕೋದ್ಯಮಕ್ಕೊಂದು ಉದಾಹರಣೆ. ಯುದ್ಧ ಭೂಮಿಯಲ್ಲಿ ನಿಂತು ವರದಿಗಾರಿಕೆ ಎಂಬ ಎದೆಗಾರಿಕೆ. ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಸಂಘರ್ಷದ ಪ್ರತ್ಯಕ್ಷ ವರದಿಯನ್ನ ನಿಮ್ಮ ಮುಂದೆ ಇಡೋದಕ್ಕೆ ಏಷ್ಯಾನೆಟ್ ಸುವರ್ಣ ನ್ಯೂಸ್ ಇಸ್ರೇಲ್(Isreal) ಅಂಗಳಕ್ಕೆ ಕಾಲಿಟ್ಟಿದೆ. ಫಿಯರ್ಲೆಸ್ ಜರ್ನಲಿಸ್ಟ್ ಅಜಿತ್ ಹನಮಕ್ಕನವರ್ ರಣಾಂಗಣದಲ್ಲಿ ನಿಂತು ಕದನ ವರದಿಯನ್ನ ನೀಡಲಿದ್ದಾರೆ. ಇಸ್ರೇಲ್ ಹಾಗೂ ಹಮಾಸ್(Hamas) ಉಗ್ರರ ಸಂಘರ್ಷ ಅತಿರೇಕದ ಹಂತಕ್ಕೆ ಹೋಗಿದೆ. ತಮ್ಮನ್ನ ತಡವಿಕೊಂಡ ಹಮಾಸ್ ಉಗ್ರರ ಗೋರಿ ಕಟ್ಟೋದಿಕ್ಕೆ ಇಸ್ರೇಲ್ ಸಿದ್ಧವಾಗಿದೆ. ಶತಮಾನದ ಭೀಕರ ಸಂಘರ್ಷವನ್ನ ನಿಮ್ಮ ಮುಂದೆ ಇಡೋದಿಕ್ಕೆ ಏಷ್ಯಾನೆಟ್ ಸುವರ್ಣ ನ್ಯೂಸ್ ರಣಾಂಗಣಕ್ಕೆ ಗ್ರಾಂಡ್ ಎಂಟ್ರಿ ಕೊಟ್ಟಿದೆ. ನಿರ್ಭೀತ ಪತ್ರಕರ್ತ ಅಜಿತ್ ಹನಮಕ್ಕನವರ್(Ajith Hanumakkanavar) ಇಸ್ರೇಲ್ ನೆಲದಲ್ಲಿ ನಿಂತು ವರದಿಗಾರಿಕೆ ಮಾಡ್ತಿದ್ದಾರೆ. ಕ್ಯಾಮೆರಾ ಮ್ಯಾನ್ ಮೋಹನ್ ಅವರು ಯುದ್ಧಭೂಮಿಯನ್ನ ಕವರೇಜ್ ಮಾಡ್ತಾ ಇದಾರೆ. ಯುದ್ಧ ಪೀಡಿತ ಜಾಗದಲ್ಲಿ ನಿಂತು ವರದಿಗಾರಿಕೆ ಮಾಡೋದು ಸುಲಭದ ಮಾತಲ್ಲ.. ನಿರ್ಭೀತ ಪತ್ರಕರ್ತರು ಮಾತ್ರ ಅಂಥದ್ದೊಂದು ಸಾಹಸಕ್ಕೆ ಕೈ ಹಾಕೋಕೆ ಸಾಧ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ನ ಅಜಿತ್ ಹನಮಕ್ಕನವರ್ ಅಂತದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. 

ಇದನ್ನೂ ವೀಕ್ಷಿಸಿ: ಟ್ಯಾಂಕರ್‌ಗಳ ಧೂಳಿನಿಂದ ಆವರಿಸಿದ ಇಸ್ರೇಲ್‌ ಗಡಿ: 7 ಪೊಲೀಸರ ಎದೆ ಸೀಳಿಸಿದ ಉಗ್ರರ ಗುಂಡು

Related Video