ಇಸ್ರೇಲ್ ಹಮಾಸ್ ಯುದ್ಧ: ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಭೀಕರ ಕೃತ್ಯಗಳ ದೃಶ್ಯ ಪ್ರದರ್ಶನ

ಇಸ್ರೇಲ್‌ ಮತ್ತು ಹಮಾಸ್ ನಡುವಿನ ಯುದ್ಧ ಮುಂದುವರೆದಿದ್ದು, ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಉಗ್ರರ ಭೀಕರ ಕೃತ್ಯಗಳ ದೃಶ್ಯವನ್ನು ತೋರಿಸಲಾಗಿದೆ.
 

Share this Video
  • FB
  • Linkdin
  • Whatsapp

ಇಸ್ರೇಲ್‌ ಮತ್ತು ಹಮಾಸ್ ಯುದ್ಧದ ಭೀಕರತೆಯನ್ನು ಇಸ್ರೇಲ್‌ ಸೇನೆ ಜಗತ್ತಿನ ಮುಂದೆ ತೋರಿಸಿದೆ. ಮಾಧ್ಯಮಗಳ ಮೊಬೈಲ್‌, ಕ್ಯಾಮೆರಾ, ಹೊರಗಿಟ್ಟು ಹಮಾಸ್‌ ಉಗ್ರರ ಕೃತ್ಯವನ್ನು ಸೇನೆ ತೋರಿಸಿದೆ. ಸಾರ್ವಜನಿಕರನ್ನೇ ಹಮಾಸ್ ಉಗ್ರರು ಟಾರ್ಗೆಟ್ ಮಾಡಿದ್ರು. ಮಕ್ಕಳನ್ನು ಕರೆ ತಂದು ಅವರ ಕಣ್ಮುಂದೆ ಕುಟುಂಬಸ್ಥರ ಹತ್ಯೆ ಮಾಡಲಾಗಿದೆ. ಹಬ್ಬದ ಸಂಭ್ರಮದಲ್ಲಿದ್ದ ಸಾವಿರಾರು ಜನರನ್ನು ಅವರು ಕೊಂದಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ. 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಮಾಸ್ ಉಗ್ರರು ದಾಳಿ ಮಾಡಿದ್ದಾರೆ. ಇಸ್ರೇಲ್ ಜನ ಹಮಾಸ್‌ಗೆ ಪ್ರತಿರೋಧ ವ್ಯಕ್ತಪಡಿಸಿದ್ರೂ, ಜನ ಸಾಮಾನ್ಯರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ಹಮಾಸ್ ಉಗ್ರರ ಟಾರ್ಗೆಟ್ ಜನ ಸಾಮಾನ್ಯರೇ ಹೊರತು ಸೇನೆ ಅಲ್ಲ ಆಗಿರಲಿಲ್ಲ. ಇಸ್ರೇಲ್ ಕುಟುಂಬಗಳನ್ನು ಟಾರ್ಗೆಟ್ ಮಾಡಿ ಹಮಾಸ್ ಹತ್ಯೆ ಮಾಡಿದೆ ಎಂದು ಇಸ್ರೇಲ್‌ ಸೇನೆ ಹೇಳಿದೆ.

ಇದನ್ನೂ ವೀಕ್ಷಿಸಿ:  ಸ್ಮಶಾನವಾಗಿದೆ ಇಸ್ರೇಲಿನ ಕಿಬುತ್ಸ್ ಊರು: ಮಕ್ಕಳ ಹತ್ಯೆ ಇಸ್ರೇಲ್ ಸರ್ಕಾರವನ್ನೇ ಅಣುಕಿಸಿತ್ತಾ..?

Related Video