15ನೇ ದಿನವೂ ರಣರಂಗದಲ್ಲಿ ಇಸ್ರೇಲ್ ಗುಂಡಿನ ಮಳೆ: ಗಾಜಾದ ಮತ್ತೊಂದು ಮಸೀದಿ ಉಡೀಸ್‌

ಎಲ್ಲೆಲ್ಲೂ ಗುಂಡಿನ ಮಳೆ.. ಬಹುಮಹಡಿ ಕಟ್ಟಡಗಳ ಮೇಲೆ ರಾಕೆಟ್ ದಾಳಿ. ಎಲ್ಲೆಲ್ಲೂ ಜನರ ಚೀತ್ಕಾರ. ಆಸ್ಪತ್ರೆಗಳಲ್ಲಿ ಗಾಯಾಳುಗಳ ನರಳಾಟ. ಗಾಜಾ ಉತ್ತರ ಭಾಗದಲ್ಲೆಡೆ ದಟ್ಟ ಹೊಗೆ. ಗಾಜಾ ಬೀದಿಯಲ್ಲಿ ರಕ್ತಪಾತ. 14ನೇ ದಿನದ ಯುದ್ಧಭೂಮಿಯಲ್ಲಿ ಇಸ್ರೇಲ್ ಪ್ಯಾಲೆಸ್ತೀನ್ ಮೇಲೆ ಮುಗಿಬಿದ್ದ ಪರಿ ಇದು.

Share this Video
  • FB
  • Linkdin
  • Whatsapp

ಇಸ್ರೇಲ್ ಏಟಿಗೆ ಗಾಜಾಸಿಟಿ ಅಕ್ಷರಶಃ ಸ್ಮಶಾನ ಆಗಿದೆ. ಇಸ್ರೇಲ್(Israel) ವಾಯುಪಡೆ ನಿರಂತರವಾಗಿ ಏರ್ಸ್ಟ್ರೈಕ್ ನಡೆಸುತ್ತಲೇ ಇದೆ. ಹಮಾಸ್ ಉಗ್ರರ ಹೆಡೆಮುರಿ ಕಟ್ಟೋವರೆಗೂ ಸಮರ ನಿಲ್ಲಲ್ಲ ಎಂದು ದಾಳಿ ಮುಂದುವರಿಸಿದೆ. ಇತ್ತೀಚೆಗೆ ಗಾಜಾದ ಆಲ್ ಅಮೀನ್ ಮಸೀದಿ(Al Omar Mosque) ಮೇಲೆ ದಾಳಿ ನಡೆಸಿ, ನಾಶಪಡಿಸಿತ್ತು.. ನಿನ್ನೆ ರಾತ್ರಿ ಕೂಡ, ಗಾಜಾದ(Gaza) ಉತ್ತರ ಭಾಗದಲ್ಲಿನ ಪ್ರಸಿದ್ಧ ಆಲ್ ಒಮರ್ ಮಸೀದಿ ಮೇಲೆ ದಾಳಿ ನಡೆಸಿ ನಾಶಪಡಿಸಿದೆ. ಹಮಾಸ್ ಉಗ್ರರ ನೆಲೆಗಳೇ ಇಸ್ರೇಲ್ ಸೇನೆ ಪ್ರಮುಖ ಟಾರ್ಗೆಟ್. ನಿನ್ನೆ ತಡರಾತ್ರಿಯ ಕಾರ್ಯಾಚರಣೆಯಲ್ಲಿ 100 ಉಗ್ರರ ನೆಲೆ ಟಾರ್ಗೆಟ್ ಮಾಡಿ ಉಡಾಯಿಸಲಾಗಿದೆ. ಉಗ್ರರು ಬಂದೂಕು ಹಿಡಿದು ಹೊರ ಬರ್ತಿದ್ದಂತೆಯೇ ಇಸ್ರೇಲ್ ದಾಳಿ ಕ್ಷಣಾರ್ಧದಲ್ಲೇ ಹೊಡೆದುರುಳಿಸಿದೆ. ಗಾಜಾ ಮಾತ್ರವಲ್ಲ ಲೆಬನಾನ್ ಗಡಿಯ ಹಿಜ್ಬುಲ್ಲಾ ಉಗ್ರರ ನೆಲೆಗಳ ಮೇಲೂ ದಾಳಿ ನಡೆಸಿದೆ. ಇಸ್ರೇಲ್‌ನ ಈ ದಾಳಿಯಲ್ಲಿ ಹಲವು ಉಗ್ರರ ಹೆಣ ಬಿದ್ದಿವೆ. ಇದು ದಕ್ಷಿಣ ಭಾಗದಲ್ಲಿರುವ ಪ್ಯಾಲಿಸ್ತೇನ್ ನಿರಾಶ್ರಿತರ ಟೆಂಟ್ಗಳು. ಈ ಭಾಗದಲ್ಲಿ ಆಹಾರ ಅಷ್ಟೇ ಅಲ್ಲ.ನೀರಿಗೂ ಹಾಹಾಕಾರ ಶುರುವಾಗಿದೆ. ಯುದ್ಧ ನಿಲ್ಲಿಸುವಂತೆ ಈಗಾಗಲೇ 57 ಮುಸ್ಲಿಂ ರಾಷ್ಟ್ರಗಳು, ಇಸ್ರೇಲ್ಗೆ ಎಚ್ಚರಿಕೆ ನೀಡಿವೆ. ಇಸ್ರೇಲ್ ಮಾತ್ರ ಬಗ್ಗುವ ಲಕ್ಷಣ ಕಾಣ್ತಿಲ್ಲ.

ಇದನ್ನೂ ವೀಕ್ಷಿಸಿ: ಇಸ್ರೇಲ್ ಬೆನ್ನಿಗೆ ನಿಂತ ವಿಶ್ವದ ಬಲಿಷ್ಠ ರಾಷ್ಟ್ರಗಳು: ಲೆಬನಾನ್ ಗುರಿಯಾಗಿಸಿಕೊಂಡು ಸಿದ್ಧವಾಗಿ ನಿಂತ ಇಸ್ರೇಲ್ ಸೇನೆ

Related Video