ಇಸ್ರೇಲ್ ಬೆನ್ನಿಗೆ ನಿಂತ ವಿಶ್ವದ ಬಲಿಷ್ಠ ರಾಷ್ಟ್ರಗಳು: ಲೆಬನಾನ್ ಗುರಿಯಾಗಿಸಿಕೊಂಡು ಸಿದ್ಧವಾಗಿ ನಿಂತ ಇಸ್ರೇಲ್ ಸೇನೆ

ಲೆಬನಾನ್, ಹಿಜ್ಬುಲ್ಲಾ ಉಗ್ರರಿಂದಲೂ ಶುರುವಾಯ್ತು ದಾಳಿ
ಮೆಡಿಟರೇನಿಯನ್ ಸಮುದ್ರಕ್ಕೆ ಬಲಿಷ್ಠ ನೌಕೆ ಕಳುಹಿಸಿದ ಅಮೆರಿಕಾ
ಏರ್ ಸ್ಟ್ರೈಕ್ ಮೂಲಕವೇ ಉಗ್ರರನ್ನು ಮಟಾಶ್ ಮಾಡ್ತಿರುವ ಇಸ್ರೇಲ್ 

First Published Oct 21, 2023, 9:07 AM IST | Last Updated Oct 21, 2023, 9:07 AM IST

ರಿಷಿ ಸುನಕ್  ಮಾತಿನಿಂದ ಇಸ್ರೇಲ್‌ಗೆ ಮತ್ತಷ್ಟು ಬಲ ಬಂದಿದೆ. ಆತ್ಮಸ್ಥೈರ್ಯ ಹೆಚ್ಚಿದಂತಾಗಿದೆ. ಮೊನ್ನೆ ಜೋ ಬೈಡನ್ ಭೇಟಿಯಿಂದಲೇ ಒಂದಿಷ್ಟು ಬಲ ಸಿಕ್ಕಂತಾಗಿತ್ತು. ಇನ್ನೂ ಬ್ರಿಟನ್ ಪ್ರಧಾನಿ ಭೇಟಿಯಿಂದ ಆ ಬಲ ಮತ್ತಷ್ಟು ಹೆಚ್ಚಿದೆ. ಅದ್ರಲ್ಲೂ ರಿಷಿ ಸುನಕ್ ಆಡಿದ ಮಾತುಗಳಿಂದ ಇಸ್ರೇಲ್‌ಗೆ ಮತ್ತಷ್ಟು ಶಕ್ತಿ ಸಿಕ್ಕಂತಾಗಿದೆ. ಬೈಡನ್ ಮತ್ತು ರಿಷಿ ಸುನಕ್(Rishi Sunak) ಭೇಟಿಯಿಂದ ಎರಡು ಬಲಿಷ್ಠ ರಾಷ್ಟ್ರಗಳ ಬೆಂಬಲ ಇಸ್ರೇಲ್‌ಗೆ ಸಿಕ್ಕಂತಾಗಿದೆ. ಗಾಜಾ(Gaza) ಸಿಟಿಯಿಂದ ಹಮಾಸ್ ಉಗ್ರರು ಮತ್ತು ಲೆಬನಾನ್ ದೇಶದಿಂದ ಹಿಜ್ಬುಲ್ಲಾ ಉಗ್ರರು ಇಸ್ರೇಲ್ ಮೇಳೆ ದಾಳಿಗೈಯುತ್ತಿದ್ದಾರೆ. ಎರಡೂ ಕಡೆಗಳಿಂದ ದಾಳಿ ಶುರುವಾಗಿದ್ರೂ ಇಸ್ರೇಲ್(Israel) ಎದೆಗುಂದಿಲ್ಲ. ಎರಡೂ ಕಡೆಗಳಿಗೂ ತಕ್ಕ ಉತ್ತರವನ್ನೇ ಕೊಡುತ್ತಿದೆ. ಲೆಬನಾನ್( Lebanon ) ಕಡೆದಿಂದ ಹಿಜ್ಬುಲ್ಲಾ ಉಗ್ರರ ದಾಳಿ ಎರಡು ದಿನಗಳಿಂದ ಜೋರಾಗಿದೆ. ಹೀಗಾಗಿ, ಲೆಬನಾನ್ ಗಡಿ ಪಕ್ಕದಲ್ಲಿದ್ದ ಸ್ಥಳೀಯರನ್ನು ಇಸ್ರೇಲ್ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದೆ. ಲೆಬನಾನ್ ಗಡಿ ಪಕ್ಕದ ಹಳ್ಳಿ ಜನರನ್ನೆಲ್ಲ ಖಾಲಿ ಮಾಡಿಸಿದ ಇಸ್ರೇಲ್ ಈಗ ಲೆಬನಾನ್ ಮೇಲೆ ಮಾಸ್ಟರ್ ಅಟ್ಯಾಕ್‌ಗೆ ಇಸ್ರೇಲ್ ರೆಡಿಯಾಗಿ ನಿಂತಿದೆ. ಹಮಾಸ್(Hamas) ಬಂಡುಕೋರರು, ಬಲಿಷ್ಠ ರಾಷ್ಟ್ರ ಇಸ್ರೇಲ್ ವಿರುದ್ಧ ಯುದ್ಧ ಸಾರಿದ್ದು ಯಾರ ಬೆಂಬಲದಿಂದ ಗೊತ್ತಾ, ಇರಾನ್ ಬೆಂಬಲದಿಂದ. ಹಮಾಸ್ ಉಗ್ರರನ್ನು ಸಾಕುತ್ತಿರುವುದೇ ಇರಾನ್. ಅವರಿಗೆ ಬೇಕಾದ ಆರ್ಥಿಕ ಮತ್ತು ಅಸ್ತ್ರ ಸಹಾಯ ಮಾಡುತ್ತಿರುವುದೇ ಇರಾನ್. ಇರಾನ್‌ಗೆ ಇಸ್ರೇಲ್ ಕಂಡ್ರೆ ಆಗೋದಿಲ್ಲ. ಇಸ್ರೇಲ್ ಮತ್ತು ಇರಾನ್ ಬದ್ಧ ವೈರಿಗಳು. ಹೀಗಾಗಿ ಈ ಹಿಂದೆ ಪಾಕಿಸ್ತಾನ ಭಾರತದ ಮೇಲೆ ಉಗ್ರರನ್ನು ಸಾಕಿ ಛೂ   ಬಿಡುತ್ತಿತ್ತಲ್ಲ, ಇರಾನ್ ಸಹ ಅದೇ ರೀತಿ ಇಸ್ರೇಲ್ ಮೇಲೆ ಈ ಹಮಾಸ್ ಉಗ್ರರನ್ನು ಛೂ  ಬಿಡುತ್ತಲೇ ಇರುತ್ತ ಇರಾನ್. ಇಸ್ರೇಲ್ ಮೇಲಿನ ಹಮಾಸ್ ಉಗ್ರರ ದಾಳಿನ್ನು ಮೊದಲು ಬೆಂಬಲಿಸಿದ್ದು ಇದೇ ಇರಾನ್. 

ಇದನ್ನೂ ವೀಕ್ಷಿಸಿ:  Today Horoscope: ತುಲಾ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ಲಲಿತಾ ಪ್ರಾರ್ಥನೆ ಮಾಡಿ

Video Top Stories