Asianet Suvarna News Asianet Suvarna News

Russia Ukraine War ಉಕ್ರೇನ್ ವಿರುದ್ಧ ಕ್ರಿಮಿಯಾ ಅಸ್ತ್ರವನ್ನು ಪ್ರಯೋಗಿಸ್ತಿದ್ಯಾ ರಷ್ಯಾ?

ಮುಂದುವರಿದ ರಷ್ಯಾ-ಉಕ್ರೇನ್ ಯುದ್ಧ

ರಷ್ಯಾ ದಾಳಿಗೆ ಸವಾಲೊಡ್ಡಿರುವ ಉಕ್ರೇನ್ ಸೇನೆ

ಕ್ರಿಮಿಯಾ ಸಹಾಯ ಪಡೆಯಲು ಮುಂದಾಗಿದ್ಯಾ ರಷ್ಯಾ?

First Published Mar 19, 2022, 10:49 PM IST | Last Updated Mar 19, 2022, 10:49 PM IST

ಬೆಂಗಳೂರು (ಮಾ. 19): ಹೆಚ್ಚೆಂದರೆ ವಾರದ ಒಳಗೆ ಮುಗಿಯಬಹುದು ಎನ್ನುವ ಅಂದಾಜಿನಲ್ಲಿ ಉಕ್ರೇನ್ (Ukraine ) ಮೇಲೆ ದಾಳಿ ನಡೆಸಿದ್ದ ರಷ್ಯಾ (Russia) ಈಗ ಅಕ್ಷರಶಃ ಆತಂಕಕ್ಕೆ ಈಡಾಗಿದೆ. ದಿನ ಕಳೆದಂತೆ ರಷ್ಯಾ ಸೇನೆಗೆ (Russia Army) ಪ್ರಬಲವಾಗಿ ಪ್ರತಿರೋಧವನ್ನು ಉಕ್ರೇನ್ ಒಡ್ಡುತ್ತಿದೆ. ಇದರಿಂದಾಗಿ ಕ್ಲಸ್ಟರ್ ಬಾಂಬ್, ವಾಕ್ಯುಮ್ ಬಾಂಬ್, ವಿಷಾನಿಲ ಬಾಂಬ್ ಗಳ ಪ್ರಯೋಗಕ್ಕೂ ರಷ್ಯಾ ಮುಂದಾಗಿದೆ.

ಆದರೆ, ಇದ್ಯಾವುದಕ್ಕೂ ಉಕ್ರೇನ್ ಬಗ್ಗುತ್ತಿಲ್ಲ. ಈಗ ಉಕ್ರೇನ್ ಅನ್ನು ಬಗ್ಗು ಬಡಿಯಲು ರಷ್ಯಾ ಹೊಸ ತಂತ್ರ ರೂಪಿಸಿದೆ. ಇದಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಇಟ್ಟಿರುವ ಹೆಸರು ಕ್ರಿಮಿಯಾಸ್ತ್ರ. ಜಗ್ಗದ, ಬಗ್ಗದ ಉಕ್ರೇನ್ ಗೆ ಪಾಠ ಕಲಿಸೋಕೆ ಮುಂದಾಗಿರುವ ರಷ್ಯಾ, ಕ್ರಿಮಿಯಾ (Crimea) ಸಹಾಯ ಪಡೆಯೋಕೆ ಸಿದ್ಧವಾಗಿದೆ.  ಉಕ್ರೇನ್ ನ ಮಗ್ಗುಲಲ್ಲೆ ಇರುವ ಕ್ರಿಮಿಯಾ ಸಹಾಯದಿಂದ ಉಕ್ರೇನ್ ದೇಶವನ್ನು ಹೆಡೆಮುರಿ ಕಟ್ಟುವ ಇರಾದೆಯಲ್ಲಿದೆ ರಷ್ಯಾ ದೇಶ.

Russia Ukraine War ಉಕ್ರೇನ್ ಮೇಲೆ Kinzhal ಬ್ರಹ್ಮಾಸ್ತ್ರ ಪ್ರಯೋಗಿಸಿದ ರಷ್ಯಾ!
ರಷ್ಯಾ ಹಾಗೂ ಉಕ್ರೇನ್ ನಡುವಿನ ಸಮರದಲ್ಲಿ ಹಲವು ಬಾರಿ ಕ್ರಿಮಿಯಾ ಹೆಸರು ಕೂಡ ಕೇಳಲ್ಪಟ್ಟಿದೆ. ಪುಟ್ಟ ರಾಷ್ಟ್ರವಾಗಿರುವ ಕ್ರಿಮಿಯಾ ಸಹಾಯದೊಂದಿಗೆ ಉಕ್ರೇನ್ ಅನ್ನು ಮಣಿಸಲು ಸಾಧ್ಯವಾಗಲಿದೆ ಎನ್ನುವುದು ರಷ್ಯಾದ ಅಚಲ ವಿಶ್ವಾಸ. ಇಲ್ಲಿಯವರೆಗೂ ಬಂಡುಕೋರರ ರೂಪದಲ್ಲಿದ್ದ ಕ್ರಿಮಿಯಾ ಜನರು ಈಗ ಬಹಿರಂಗವಾಗಿ ಉಕ್ರೇನ್ ಸೇನೆಯ ವಿರುದ್ಧ ಹೋರಾಡುವ ಪಣ ತೊಟ್ಟಿದ್ದಾರೆ.

Video Top Stories