Russia Ukraine War ಉಕ್ರೇನ್ ಮೇಲೆ Kinzhal ಬ್ರಹ್ಮಾಸ್ತ್ರ ಪ್ರಯೋಗಿಸಿದ ರಷ್ಯಾ!

ಉಕ್ರೇನ್ ಮೇಲೆ ತನ್ನ ಅದ್ವಿತೀಯ ಹೈಪರ್ ಸಾನಿಕ್ ಕ್ಷಿಪಣಿ ಪ್ರಯೋಗಿಸಿದ ರಷ್ಯಾ

ಇದೇ ಮೊಟ್ಟಮೊದಲ ಬಾರಿಗೆ ಕಿಂಜಾಲ್ ಹೈಪರ್ ಸಾನಿಕ್ ಕ್ಷಿಪಣಿಯಿಂದ ದಾಳಿ

ಉಕ್ರೇನ್ ಗೆ ನೆರೆಯ ದೇಶಗಳು ನೀಡಿದ್ದ ಶಸ್ತ್ರಾಸ್ತ್ರಗಳ ಗೋಧಾಮಿಗೆ ದಾಳಿ ನಡೆಸಿದ ಕಿಂಜಾಲ್

Russia launched Brahmastra for the first time in Ukraine know how dangerous the Kinzhal Missile is san

ಮಾಸ್ಕೋ (ಮಾ. 19): ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ಸೇನೆ ಇದೇ ಮೊದಲ ಬಾರಿಗೆ ಉಕ್ರೇನ್ (Ukraine) ದೇಶದ ಮೇಲೆ ತನ್ನ ಬ್ರಹಾಸ್ತ್ರ ಕ್ಷಿಪಣಿಯ ದಾಳಿ ನಡೆಸಿದೆ. ಶಬ್ದಕ್ಕಿಂತ ವೇಗದಲ್ಲಿ ಚಲಿಸುವ ಹೈಪರ್ ಸಾನಿಕ್ ಕ್ಷಿಪಣಿ ಕಿಂಜಾಲ್ (Kinzhal  Hypersonic Missile) ಅನ್ನು ವಿಮಾನದ ಮೂಲಕ ರಷ್ಯಾ ಪ್ರಯೋಗ ಮಾಡುವ ಮೂಲಕ, ಉಕ್ರೇನ್ ನ ಭೂಗತ ಶಸ್ತ್ರಾಸ್ತ್ರ ಗೋಧಾಮಿಗೆ ಬೆಂಕಿ ಇಟ್ಟಿದೆ. ಈ ಸೂಪರ್ ವಿಧ್ವಂಸಕ ಕ್ಷಿಪಣಿ ಎಷ್ಟು ಅಪಾಯಕಾರಿ ಎಂದರೆ ಇಲ್ಲಿಯವರೆಗೆ ಯಾವುದೇ ದೇಶದಲ್ಲೂ ಕೂಡ ಈ ಕ್ಷಿಪಣಿಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿಲ್ಲ. ಈ ಕ್ಷಿಪಣಿಯು ಪರಮಾಣು ಬಾಂಬ್‌ಗಳನ್ನು (nuclear bombs) ಸಹ ಬೀಳಿಸುವ ಸಾಮರ್ಥ್ಯವನ್ನು ಹೊಂದಿದೆ. ಉಕ್ರೇನ್‌ಗೆ ಎಚ್ಚರಿಕೆ ನೀಡಲು ರಷ್ಯಾ ಇದನ್ನು ಬಳಸಿದೆ ಎಂದು ನಂಬಲಾಗಿದೆ.

ರಷ್ಯಾ ಸೇನೆಗೆ ಉಕ್ರೇನ್ ನ ರಾಜಧಾನಿ ಕೀವ್ ನಲ್ಲಿ ಭಾರೀ ಹಿನ್ನಡೆ ಆಗುತ್ತಿದೆ. ನ್ಯಾಟೋ ಪಡೆಗಳು ಹಾಗೂ ಅಮೆರಿಕ ನೀಡಿರುವ ಶಸ್ತ್ರಗಳ ಮೂಲಕ ಉಕ್ರೇನ್, ರಷ್ಯಾದ ಮೇಲೆ ದಾಳಿ ಮಾಡುತ್ತಿದೆ. ನೆರೆಯ ದೇಶಗಳಿಂದ ಬಂದ ಶಸ್ತ್ರಾಸ್ತ್ರಗಳನ್ನು ಉಕ್ರೇನ್ ಭೂಗತ ಗೋದಾಮಿನಲ್ಲಿ ಇಟ್ಟಿರುವ ಮಾಹಿತಿ ಪಡೆದುಕೊಂಡಿದ್ದ ರಷ್ಯಾ, ಶನಿವಾರ ತನ್ನ ಹೈಪರ್ ಸಾನಿಕ್ ಕ್ಷಿಪಣಿ ಕಿಂಜಾಲ್ ಮೂಲಕ ದಾಳಿ ಮಾಡಿರುವುದಾಗಿ ತಿಳಿಸಿದೆ. 

ಇದೇ ಕ್ಷಿಪಣಿಯನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೆಲವು ಸಮಯದ ಹಿಂದೆ "ಆದರ್ಶ ಅಸ್ತ್ರ" ಎಂದು ಬಣ್ಣಿಸಿದ್ದರು. ಕ್ಷಿಪಣಿಯು ನಗರದ ಹೊರಗಿರುವ ಮತ್ತು ಪರ್ವತಗಳಿಂದ ಆವೃತವಾಗಿರುವ ಉಕ್ರೇನಿಯನ್ ಗ್ರಾಮವಾದ ಡೆಲ್ಯಾಟಿನ್ ಪ್ರದೇಶಕ್ಕೆ ಅಪ್ಪಳಿಸಿದೆ.ಕ್ಷಿಪಣಿಯನ್ನು ಮಿಗ್-31 ಸೂಪರ್‌ಸಾನಿಕ್ ಫೈಟರ್ ಜೆಟ್‌ನಿಂದ ಉಡಾಯಿಸಲಾಗಿದೆ ಎಂದು ವರದಿಯಾಗಿದೆ. ಇದನ್ನು ರಷ್ಯಾ ಕಲಿನಿನ್‌ಗ್ರಾಡ್‌ನ ಚ್ಕಾಲೋವ್ಸ್ಕ್ ನೇವಲ್ ಬೇಸ್‌ನಲ್ಲಿ ಇರಿಸಿದ್ದು, ಕಾಲಿಗ್ರಾಡ್ ಪೋಲೆಂಡ್ ಮತ್ತು ಲಿಥುವೇನಿಯಾದ ಗಡಿಯ ಸಮೀಪದಲ್ಲಿರುವ ರಷ್ಯಾದ ನಗರವಾಗಿದೆ, ಇಲ್ಲಿ ರಷ್ಯಾ ತನ್ನ ಅತಿದೊಡ್ಡ ಮಿಲಿಟರಿ ನೆಲೆಯನ್ನು ಹೊಂದಿದೆ.


ಶಬ್ದಕ್ಕಿಂತ 10 ಪಟ್ಟು ಹೆಚ್ಚು ವೇಗದಲ್ಲಿ ತೆರಳುವ ಸಾಮರ್ಥ್ಯವಿರುವ ರಷ್ಯಾದ ಕಿಂಜಾಲ್ ಹೈಪರ್‌ಸಾನಿಕ್ ಕ್ಷಿಪಣಿಯನ್ನು 2018 ರಲ್ಲಿ ಸ್ವತಃ ವ್ಲಾಡಿಮಿರ್ ಪುಟಿನ್ ದೇಶಕ್ಕೆ ಅರ್ಪಣೆ ಮಾಡಿದ್ದರು. ಶಬ್ದಕ್ಕಿಂತ 10 ಪಟ್ಟು ವೇಗದಲ್ಲಿ ಹೋಗುವ ಸಾಮರ್ಥ್ಯವನ್ನು ಹೊಂದಿರುವುದರೊಂದಿಗೆ ಪರಮಾಣು ಬಾಂಬ್ ಗಳನ್ನು ಬೀಳಿಸುವ ಶಕ್ತಿ ಕೂಡ ಹೊಂದಿದೆ. ಇದರ ಅಪರಿಮಿತ ವೇಗದ ಕಾರಣದಿಂದಾಗಿ ಶತ್ರುಗಳಿಗೆ ಇದಕ್ಕೆ ಪ್ರತಿಕ್ರಿಯೆ ನೀಡಲು ಸಹ ಸಾಧ್ಯವಾಗುವುದಿಲ್ಲ. ಈ ಹೈಪರ್ ಸಾನಿಕ್ ಕ್ಷಿಪಣಿಯನ್ನು ಹೊಡೆದುರುಳಿಸುವ ಯಾವುದೇ ಶಕ್ತಿಯನ್ನು ಅಮೆರಿಕ ಅಥವಾ ನ್ಯಾಟೋ ದೇಶಗಳಾಗಲಿ ಹೊಂದಿಲ್ಲ ಎನ್ನುವುದು ಪ್ರಮುಖ ಅಂಶವಾಗಿದೆ.

ಯುದ್ಧದಲ್ಲಿ ಮೃತಪಟ್ಟ ಹಸುಳೆಗಳೆಷ್ಟು: ಹೃದಯ ಹಿಂಡುತಿದೆ 100ಕ್ಕೂ ಹೆಚ್ಚು ಖಾಲಿ ತೊಟ್ಟಿಲುಗಳು
ಅಂದಾಜು 2 ಸಾವಿರ ಕಿಲೋಮೀಟರ್ ದೂರದವರೆಗಿನ ಟಾರ್ಗೆಟ್ ಗಳನ್ನೂ ಕೂಡ ಹೈಪರ್ ಸಾನಿಕ್ ಕ್ಷಿಪಣಿ ಹೊಡೆದುರುಳಿಸುತ್ತದೆ. 500 ಕಿಲೋ ಭಾರದ ಪರಮಾಣು ಬಾಂಬ್ ಗಳನ್ನು ಹೊತ್ತೊಯ್ಯಬಲ್ಲ ಶಕ್ತಿ ಇದಕ್ಕಿದೆ. ಅದರೊಂದಿಗೆ ಇತರೇ ಕೆಲವು ಸಾಂಪ್ರದಾಯಿಕ ಸ್ಪೋಟಕಗಳನ್ನು ಹೊತ್ತೊಯ್ಯಬಲ್ಲುದು. ಈ ಪರಮಾಣು ಬಾಂಬ್‌ಗಳು ಹಿರೋಷಿಮಾದ ಮೇಲೆ ಬೀಳಿಸಿದ ಪರಮಾಣು ಬಾಂಬ್‌ಗಿಂತ 33 ಪಟ್ಟು ಹೆಚ್ಚು ಶಕ್ತಿಶಾಲಿ. ಸೆಕೆಂಡ್ ಗೆ 3 ಕಿಲೋಮೀರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ಕಾರಣಕ್ಕಾಗಿಯೇ ವಿಶ್ವದ ಅತ್ಯಂತ ಪ್ರಬ ವಾಯು ರಕ್ಷಣಾ ವ್ಯವಸ್ಥೆಯೂ ಈ ಕ್ಷಿಪಣಿಯ ಮುಂದೆ ಸೋಲು ಕಾಣುತ್ತದೆ.

ಯುದ್ಧ ನಿಲ್ಲದಿದ್ದರೆ ಪುಟಿನ್‌ ಅಣ್ವಸ್ತ್ರ ಬೆದರಿಕೆ ಸಾಧ್ಯತೆ: ಗುಪ್ತಚರ ಸಂಸ್ಥೆ ವರದಿ
ಸಾಮಾನ್ಯವಾಗಿ ರಷ್ಯಾ ಕಲಿನಿನ್ಗ್ರಾಡ್ ನೆಲೆಯಲ್ಲಿ MiG-31 ವಿಮಾನಗಳನ್ನು ನಿಯೋಜಿಸುವುದಿಲ್ಲ, ಆದರೆ ಉಕ್ರೇನ್ ಯುದ್ಧದ ದೃಷ್ಟಿಯಿಂದ, ಈ ಯುದ್ಧವಿಮಾನಗಳನ್ನು ಇಲ್ಲಿಗೆ ಕಳುಹಿಸಲಾಗಿದೆ. ಮಿಲಿಟರಿ ತಜ್ಞ ರಾಬ್ ಲೀ ಪ್ರಕಾರ, ಕಿಂಜಾಲ್ ಕ್ಷಿಪಣಿಯನ್ನು ಕಲಿನಿನ್‌ಗ್ರಾಡ್‌ನಿಂದ ಉಡಾಯಿಸಿದರೆ, ಪಶ್ಚಿಮ ಯುರೋಪಿಯನ್ ರಾಷ್ಟ್ರಗಳ ಹೆಚ್ಚಿನ ರಾಜಧಾನಿಗಳನ್ನು ಮತ್ತು ಟರ್ಕಿಯ ರಾಜಧಾನಿ ಅಂಕಾರಾವನ್ನು ನಾಶಪಡಿಸುವ ಶಕ್ತಿ ಹೊಂದಿದೆ. ಇಷ್ಟೇ ಅಲ್ಲ, ಕಿಂಜಾಲ್ ನ ನ್ಯಾಟೋ ದೇಶಗಳ ಮೇಲೆ ದಾಳಿ ಮಾಡಲು ಕೇವಲ 7 ರಿಂದ 10 ನಿಮಿಷಗಳು ಬೇಕಾಗುತ್ತವೆ.

Latest Videos
Follow Us:
Download App:
  • android
  • ios