ಕೈ ಜಾರುತ್ತಿದೆಯಾ ಬಲೂಚ್? ಪಾಕ್ ಸಚಿವರೇ ಒಪ್ಪಿಕೊಂಡ ಸತ್ಯ: ಪಾಕ್ ಸೇನೆಗಿಂತಾ ಬಂಡುಕೋರರೇ ಹೈ-ಟೆಕ್!

ಬಲೂಚ್ ಬಂಡುಕೋರರು ಅಮೆರಿಕಾದ ಅತ್ಯಾಧುನಿಕ ಆಯುಧಗಳನ್ನು ಪಡೆದುಕೊಂಡಿದ್ದು, ಪಾಕಿಸ್ತಾನಿ ಸೇನೆಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದ್ದಾರೆ. ಪಾಕಿಸ್ತಾನದ ರಕ್ಷಣಾ ಸಚಿವರೇ ಈ ಸತ್ಯವನ್ನು ಒಪ್ಪಿಕೊಂಡಿದ್ದು, ಈ ಹೈ-ಟೆಕ್ ಶಸ್ತ್ರಾಸ್ತ್ರಗಳು ಪಾಕಿಸ್ತಾನಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ.

Share this Video
  • FB
  • Linkdin
  • Whatsapp

ಒಂದು ಕಡೆ ಜಗತ್ತಿನ ಪ್ರಬಲ ರಾಷ್ಟ್ರದ ಅತ್ಯಾಧುನಿಕ ಯುದ್ಧ ಸಾಮಗ್ರಿಗಳು.. ಇನ್ನೊಂದು ಕಡೆ ಅದೇ ಆಯುಧಗಳನ್ನ ಹಿಡಿದು ಬೆಟ್ಟದ ಸಾಲುಗಳಲ್ಲಿ ಮರೆಯಾಗೋ ಅಗೋಚರ ಹೋರಾಟಗಾರರು.. ಪಾಕಿಸ್ತಾನದ ರಕ್ಷಣಾ ಸಚಿವರೇ ಲೋಕಸಭೆಯಲ್ಲಿ ದಿಕ್ಕೇ ತೋಚದೆ ತಲೆ ತಗ್ಗಿಸಿ ನಿಲ್ಲೋ ಹಾಗೆ ಮಾಡಿದೆ ಆ ಹೈ-ಟೆಕ್ ಸೀಕ್ರೆಟ್.. ಪಾಪಿದೇಶದ ಬಜೆಟ್‌ಗಿಂತಲೂ ದುಬಾರಿ ರೈಫಲ್‌ಗಳು ಬಲೂಚ್ ಬಂಡಾಯಗಾರರ ಕೈ ಸೇರಿದೆ.. ಅದು ಸಾಧ್ಯವಾಗಿದ್ದು ಹೇಗೆ? ಸುಸಜ್ಜಿತ ಸೇನೆಯೇ ಬೆಚ್ಚಿ ಬೀಳೋ ಹಾಗ್ ಮಾಡಿದ ಆ ರಣತಂತ್ರ ಕತೆ ಏನು? ಸೈನ್ಯದ ದರ್ಪಕ್ಕೆ ಸೆಡ್ಡು ಹೊಡೆದು ನಿಂತಿರೋ ಈ ದಂಗೆಕೋರರ ಬೆನ್ನಿಗೆ ಯಾರಿದ್ದಾರೆ? ಬಲೂಚಿಸ್ತಾನದ ಕಲ್ಲುಬಂಡೆಗಳ ನಡುವೆ ಅಡಗಿರೋ ಆ ಸ್ಫೋಟಕ ಸತ್ಯಗಳನ್ನ ಬಿಚ್ಚಿಡುವ ಪ್ರಯತ್ನ ಇಲ್ಲಿದೆ ನೋಡಿ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಲೂಚಿಗರ ಬಂಡಾಯದ ಬೆಂಕಿ, ಪಾಕ್ ಬುಡವನ್ನೇ ಸುಡ್ತಾ ಇದೆ.. ಒಂದೊಂದೇ ಪ್ರಾಂತ್ಯಗಳು ಕೈಜಾರ್ತಾ ಇದಾವೇನೋ ಅನ್ನೋ ಭಯ, ಪಾಕಿಸ್ತಾನಾನ ಕಾಡ್ತಾ ಇದೆ.. ಈ ಭಯ ಹೋಗ್ಬೇಕು ಅಂದ್ರೆ, ಪಾಕಿಸ್ತಾನಕ್ಕಿರೋದು ಒಂದೇ ದಾರಿ. ಪಾಕಿಸ್ತಾನವನ್ನ ಈಗ ಬಲೂಚಿನ ಬೆಂಕಿ ಸುಡ್ತಾ ಇದೆ.. ಅದರ ದಹನ ಕಾರ್ಯ, ಇಡೀ ಜಗತ್ತಿನ ಕಣ್ಣಿಗೇ ಕಾಣ್ತಾ ಇದೆ.. ಛಿದ್ರವಾಗೋಕೆ ತುದಿಗಾಲಲ್ಲಿ ನಿಂತು ಕಾಯ್ತಾ ಇರೋ ಪಾಪಿ ಪಾಕ್ ಪರಿಸ್ಥಿತಿ, ಈಗ ಏನಾಗಿದೆ ಗೊತ್ತಾ? ಇದನ್ನೆಲ್ಲಾ ನೋಡಿನೂ, ಪಾಕಿಸ್ತಾನ ತೆಪ್ಪಗಿರೋದ್ಯಾಕೆ? ಏನೂ ಮಾಡೋಕ್ಕಾಗದ ಹಂತಕ್ಕೆ ಪಾಕ್ ಜಾರಿ ಬಿದ್ದಿದ್ಯಾಕೆ? ಬಲೂಚಿಸ್ತಾನದಲ್ಲಿ ಈಗ ನಡೀತಿರೋದು ಗುಂಡಿನ ಚಕಮಕಿ ಅಲ್ಲ.. ಪಾಕಿಸ್ತಾನದ ಸೈನ್ಯದ ಅಸಲಿ ಬಣ್ಣ ಬಯಲು ಮಾಡ್ತಿರೋ ದೊಡ್ಡ ಸತ್ಯ.. ಅಮೆರಿಕಾದ ಅಸ್ತ್ರಗಳೇ ಬಲೂಚಿಗಳಿಗೆ ಧೈರ್ಯ.. ಆದ್ರೆ ಪಾಕ್ ಪಾಲಿಗೆ ಉಳಿದಿರೋದೇನು?
ಈ ಪ್ರಶ್ನೆಗೆ ಕಾಲವೇ ಉತ್ತರಿಸಲಿದೆ.

Related Video