Asianet Suvarna News Asianet Suvarna News

ಇರಾನ್ ಜೊತೆ ಸೇರಿ ಭಾರತದ ಮೇಲೆ ಸಮರ ಸಾರುತ್ತಿದೆಯಾ ಚೀನಾ?

ಚೀನಾ ಗಡಿಯಲ್ಲಿ ನಿಂತು ಭಾರತದ ಜೊತೆ ಯುದ್ಧ ಮಾಡುವುದು ಅಸಾಧ್ಯ. ಭಾರತವನ್ನು ಎದುರು ಹಾಕಿಕೊಂಡ್ರೆ ಬೇರೆ ಬೇರೆ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಚೀನಾ ಇನ್ನೊಂದು ಬಗೆಯ ಯುದ್ಧಕ್ಕೆ ಸಜ್ಜಾದಂತೆ ಕಾಣಿಸುತ್ತಿದೆ. ಭಾರತದ ಕನಸನ್ನು ಭಗ್ನಗೊಳಿಸುವ ಕುಟಿಲ ರಣ ನೀತಿ ರಚಿಸಿದೆ. 

ನವದೆಹಲಿ (ಜು. 15): ಚೀನಾ ಗಡಿಯಲ್ಲಿ ನಿಂತು ಭಾರತದ ಜೊತೆ ಯುದ್ಧ ಮಾಡುವುದು ಅಸಾಧ್ಯ. ಭಾರತವನ್ನು ಎದುರು ಹಾಕಿಕೊಂಡ್ರೆ ಬೇರೆ ಬೇರೆ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಚೀನಾ ಇನ್ನೊಂದು ಬಗೆಯ ಯುದ್ಧಕ್ಕೆ ಸಜ್ಜಾದಂತೆ ಕಾಣಿಸುತ್ತಿದೆ. ಭಾರತದ ಕನಸನ್ನು ಭಗ್ನಗೊಳಿಸುವ ಕುಟಿಲ ರಣ ನೀತಿ ರಚಿಸಿದೆ. 

2016 ರಲ್ಲಿ ಪ್ರಧಾನಿ ಮೋದಿ ಇರಾನ್‌ಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದರು. ಬರೋಬ್ಬರಿ 12 ಒಪ್ಪಂದಗಳಿಗೆ ಸಹಿ ಹಾಕಿದರು. ಇದಾಗಿ ನಾಲ್ಕು ವರ್ಷಗಳು ಕಳೆದಿವೆ. ಅಂದು ಇದ್ದ ಸಂಬಂಧ ಈಗಲೂ ಇದೆಯಾ ಎಂಬ ಅನುಮಾನ ಕಾಡುತ್ತಿದೆ. ಇದಕ್ಕೆ ಕಾರಣ ಇರಾನಿನ ಹೊಸ ನಿರ್ಧಾರ. 

ಚಬಹಾರ್‌ - ಝಹೆದಾನ್ ರೈಲು ಯೋಜನೆಯಿಂದ ಭಾರತ ಕೈ ಬಿಟ್ಟ ಇರಾನ್!

ಅಷ್ಘಾನಿಸ್ತಾನದ ಗಣಿ ಸಂಪದ್ಭಿರಿತ ಹಜಿಘಾಕ್‌- ಝಹೆದಾನ್‌ ಮತ್ತು ಇರಾನ್‌ನ ಚಬಹಾರ್‌ ಬಂದರಿನ ನಡುವೆ ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆಯನ್ನು ಭಾರತದ ನೆರವು ಇಲ್ಲದೆಯೇ ಜಾರಿಗೊಳಿಸಲು ಇರಾನ್‌ ಸರ್ಕಾರ ಮುಂದಾಗಿದೆ. ಭಾರತ-ಇರಾನ್‌- ಅಷ್ಘಾನಿಸ್ತಾನದ ನಡುವೆ ಯೋಜನೆ ಜಾರಿ ಸಂಬಂಧ 2016ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ ಯೋಜನೆಗೆ ಭಾರತ ಹಣಕಾಸು ನೆರವು ನೀಡಲು ವಿಳಂಬವಾಗಿದ್ದರಿಂದ, ಭಾರತವನ್ನು ಕೈ ಬಿಡಲಾಗಿದೆ ಎಂದು ಇರಾನ್‌ ಹೇಳಿದೆ. ಇದೇ ವೇಳೆ ಯೋಜನೆಯ ಭಾಗವಾಗಲು ಭಾರತಕ್ಕೆ ಇನ್ನೂ ಅವಕಾಶ ಇದೆ ಎಂದು ಸ್ಪಷ್ಟಪಡಿಸಿದೆ.ಇದರ ಹಿಂದೆ ಚೀನಾದ ಕೈವಾಡವಿದೆ ಎನ್ನಲಾಗುತ್ತದೆ. ಹಾಗಾದರೆ ಚೀನಾಗೂ ಈ ಒಪ್ಪಂದಕ್ಕೂ ಏನ್ ಸಂಬಂಧ? ಇಲ್ಲಿದೆ ನೋಡಿ..!

Video Top Stories