Russia Ukraine War ಇದು ರಷ್ಯಾದ ಯುದ್ಧವಲ್ಲ, ಪುಟಿನ್ ಅವರ ಯುದ್ಧ, ಪೋಲೆಂಡ್ ಎನ್ಆರ್ ಐ ಮಾತು

ಉಕ್ರೇನ್-ಪೋಲೆಂಡ್ ಗಡಿಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ಏಷ್ಯಾನೆಟ್ ಜೊತೆ ಮಾತನಾಡಿದ ಪೋಲೆಂಡ್ ಎನ್ ಆರ್ ಐ ಎಮಾನ್ಯುಯೆಲ್ಇದು ರಷ್ಯಾದ ಯುದ್ಧವಲ್ಲ , ಇದು ಪುಟಿನ್ ಅವರ ಯುದ್ಧ

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.9): ಯುದ್ಧಪೀಡಿತ ಉಕ್ರೇನ್ ನಲ್ಲಿ(War Torn Ukraine) ನಿಂತು ವರದಿಗಾರಿಕೆ ಮಾಡಿದ ದಕ್ಷಿಣ ಭಾರತದ ಏಕೈಕ ಚಾನೆಲ್ ಎನಿಸಿರುವ ಸುವರ್ಣ ನ್ಯೂಸ್, ಬುಧವಾರ ಉಕ್ರೇನ್-ಪೋಲೆಂಡ್ ಗಡಿಯಲ್ಲಿ (Ukraine Poland Border) ಪೋಲೆಂಡ್ ನ ಅನಿವಾಸಿ ಭಾರತೀಯ ಎಮಾನ್ಯುಯೆಲ್ (NRI Immanuel ) ಅವರನ್ನು ಮಾತನಾಡಿಸಿತು. ಈ ವೇಳೆ ಉಕ್ರೇನ್ ವಲಸಿಗರಿಗೆ ಪೋಲೆಂಡ್ ದೇಶದಲ್ಲಿ ಸಿಗುತ್ತಿರುವ ಸ್ವಾಗತ, ಯುದ್ಧದ ಭೀಕರತೆಯ ಬಗ್ಗೆ ಮಾತನಾಡಿದರು.

ಉಕ್ರೇನ್ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಯುದ್ಧ ಇನ್ನೂ ಹೆಚ್ಚಾಗುವ ಭೀತಿಯಲ್ಲಿ ಹೆಚ್ಚಿನ ಜನರು ದೇಶವನ್ನು ತೊರೆದಿದ್ದು,ಮುಕ್ಕಾಲು ಪಾಲು ಜನ ಪಕ್ಕದ ಪೋಲೆಂಡ್ ದೇಶಕ್ಕೆ ಬಂದಿದ್ದಾರೆ. ಇದರಿಂದಾಗಿ ಪೋಲೆಂಡ್ ನಲ್ಲಿ(Poland) ವಲಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಉಕ್ರೇನ್ ನ ಪಕ್ಕದ ಹಾಗೂ ನಂಬಿಕಸ್ತ ದೇಶ ಪೋಲೆಂಡ್, ಆ ಕಾರಣಕ್ಕಾಗಿಯೇ ಹೆಚ್ಚಿನ ಜನರು ಈ ದೇಶಕ್ಕೆ ಬರುತ್ತಾರೆ. ಅದಷ್ಟು ಬೇಗ ಈ ಯುದ್ಧ ಕೊನೆಯಾಗಲಿ ಎನ್ನುವುದಷ್ಟೇ ನನ್ನ ಪ್ರಾರ್ಥನೆ ಎಂದರು.

ಯುದ್ಧದ ಮಧ್ಯೆ ಪ್ರೀತಿ... ರೋಮೇನಿಯಾ ಯುವತಿಯೊಂದಿಗೆ ಲವ್ವಲ್ಲಿ ಬಿದ್ದ ಕೇರಳ ಯುವಕ
ಯುದ್ಧದಿಂದಾಗಿ ವಿಶ್ವದ ಆರ್ಥಿಕತೆಯ ಮೇಲೆ ಆಗುವ ಪರಿಣಾಮಗಳ ಬಗ್ಗೆಯೂ ಅವರು ಮಾತನಾಡಿದರು. ಇದು ರಷ್ಯಾದ ಯುದ್ಧವಲ್ಲ. ಪುಟಿನ್ ಅವರ ಯುದ್ಧ. ಇದನ್ನು ನಿಲ್ಲಿಸಬೇಕಾಗಿರುವುದು ಅವರೇ, ನ್ಯಾಟೋ ಪಡೆಗಳನ್ನು ಈ ಯುದ್ಧದಿಂದ ಹೊರಗಿಟ್ಟಷ್ಟು ಒಳ್ಳೆಯದೇ ಎಂದು ಅಭಿಪ್ರಾಯಪಟ್ಟರು. ಹಾಗೇನಾದರೂ ನ್ಯಾಟೋ ಕದನಕ್ಕೆ ಇಳಿದರೆ, ಯುದ್ಧ ಇನ್ನಷ್ಟು ಭೀಕರವಾಗಲಿದೆ ಎಂದು ತಿಳಿಸಿದರು.

Related Video