ಆಶ್ರಯತಾಣದಲ್ಲಿ ಪ್ರೀತಿಯಲ್ಲಿ ಬಿದ್ದ ಕೇರಳದ ಯುವಕ ಪ್ರೇಮ ನಿವೇದನೆ ಮಾಡಿ ವಿಮಾನ ಹತ್ತಿದ್ದ ಟೈಮ್‌ ಕೇಳಿದ ರೊಮೇನಿಯಾ ಹುಡುಗಿ

ಯುದ್ಧ ಪೀಡಿತ ಉಕ್ರೇನ್‌ನಿಂದ ಒಮ್ಮೆ ಹೇಗಾದರೂ ಮಾಡಿ ತಪ್ಪಿಸಿಕೊಂಡು ಬಂದರೆ ಸಾಕಪ್ಪ ಅಂತ ಎಲ್ಲರೂ ಕಾಯುತ್ತಿದ್ದರೆ ಇಲ್ಲೊಬ್ಬ ಯುವಕ ಮಾತ್ರ ಪ್ರೀತಿಗಾಗಿ ಅಲ್ಲೇ ಉಳಿದಿದ್ದಾನೆ. ಸ್ಥಳಾಂತರಿಸಲು ಕಾಯುತ್ತಿರುವ ಸಂದರ್ಭದಲ್ಲಿ ಕೇರಳದ ಯುವಕನಿಗೆ ರೊಮೇನಿಯನ್ ಹುಡುಗಿಯ ಮೇಲೆ ಪ್ರೀತಿಯಾಗಿದ್ದು, ಆಕೆಗೆ ಮದುವೆಯ ಪ್ರಸ್ತಾಪ ತಿಳಿಸದೇ ಬರಲಾರೆ ಎಂದು ಅಲ್ಲೇ ಕುಳಿತಿದ್ದ. 

ಉಕ್ರೇನ್‌ನ ಗಡಿಯಲ್ಲಿರುವ ದೇಶಗಳಲ್ಲಿನ ಆಶ್ರಯ ಶಿಬಿರಗಳಲ್ಲಿ ಸಿಲುಕಿರುವ ಹೆಚ್ಚಿನ ಜನರು ಸುರಕ್ಷಿತ ಸ್ಥಳಗಳನ್ನು ತಲುಪುವ ಬಗ್ಗೆ ಚಿಂತಿಸುತ್ತಿದ್ದರೆ, ಕೇರಳದ ಯುವಕನೊಬ್ಬನಿಗೆ ಆ ಶಿಬಿರದಲ್ಲೇ ರೊಮೇನಿಯಾದ ಹುಡುಗಿ ಮೇಲೆ ಪ್ರೀತಿ ಶುರುವಾಗಿತ್ತು. ಇದಕ್ಕಾಗಿ ಆತ ಮೂರು ದಿನ ಅಲ್ಲೇ ಉಳಿದಿದು ಪ್ರೇಮ ನಿವೇದನೆಯ ಜೊತೆ ಮದುವೆಯ ಪ್ರಸ್ತಾಪವನ್ನು ಮಾಡಿದ ಬಳಿಕವೇ ಅಲ್ಲಿಂದ ವಿಮಾನ ಹತ್ತಿದ್ದಾನೆ. 

Scroll to load tweet…

ಹಿಂದೂಸ್ತಾನ್ ನ್ಯೂಸ್ ಹಬ್ ವರದಿ ಪ್ರಕಾರ, ಕೇರಳದ (Kerala) ತಿರುವನಂತಪುರ (Trivandrum) ಮೂಲದ ವಿಘ್ನೇಶ್ (Vignesh) ಅವರು ಉಕ್ರೇನ್‌ನ ಇವಾನೊಫ್ರಿಯಾನ್ಸ್ಕ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ(Ivanofriansk National Medical University) ವೈದ್ಯಕೀಯ ಕೋರ್ಸ್ ಅನ್ನು ವ್ಯಾಸಂಗ ಮಾಡುತ್ತಿದ್ದರು. ಯುದ್ಧ ಆರಂಭವಾಗುತ್ತಿದ್ದಂತೆ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ (Indian embassy)ಕಚೇರಿಯು ಹಲವು ಸಲಹೆಗಳನ್ನು ನೀಡಿದ್ದರೂ, ಪರಿಸ್ಥಿತಿ ಹದಗೆಡುವ ಮೊದಲು ಭಾರತೀಯರು ಉಕ್ರೇನ್ ತೊರೆಯುವಂತೆ ಸೂಚಿಸಿದ್ದರೂ, ವಿಘ್ನೇಶ್ ಯುದ್ಧ ಪ್ರಾರಂಭವಾಗುವವರೆಗೂ ಹಾಸ್ಟೆಲ್‌ನಲ್ಲಿ ಇರಲು ನಿರ್ಧರಿಸಿದ್ದ. ಆದರೆ ರಷ್ಯಾದ ಪಡೆಗಳು ಉಕ್ರೇನ್‌ ಮೇಲೆ ದಾಳಿ ತೀವ್ರಗೊಳಿಸಿದ ನಂತರ ಎಚ್ಚೆತ್ತ ವಿಘ್ನೇಶ್‌ ನಿರ್ಗಮಿಸಲು ಮುಂದಾದರು.

ಯುನಿವರ್ಸಿಟಿಯವರು ನಾವು ಹೆಲ್ಪ್‌ಲೆಸ್, ನಿಮ್ಮ ರಿಸ್ಕ್‌ನಲ್ಲಿ ಹೋಗಿ ಎಂದರು: ವಿದ್ಯಾರ್ಥಿನಿ

ನಂತರ ತಮ್ಮ ಹಾಸ್ಟೆಲ್ ತೊರೆದ ವಿಘ್ನೇಶ್‌ ರೊಮೇನಿಯನ್ (Romania) ಗಡಿಗೆ ಪ್ರಯಾಣ ಬೆಳೆಸಿದರು. ಹಲೆಮು(Halemu) ದಿಂದ ರೊಮೇನಿಯನ್ ಗಡಿಯನ್ನು ದಾಟಿದ ನಂತರ, ಅವರು ಬುಕಾರೆಸ್ಟ್‌ಗೆ ( Bucharest) ರೈಲಿನಲ್ಲಿ ಪ್ರಯಾಣಿಸಿದರು. ನಂತರ ಅವರು ವಿಜುರೆಸ್ತಿ (Vizuresti) ಎಂಬ ಹತ್ತಿರದ ಹಳ್ಳಿಯಲ್ಲಿ ತಂಗಿದ್ದರು, ಅಲ್ಲಿ ಭಾರತೀಯ ರಾಯಭಾರ ಕಚೇರಿಯು ಸ್ಥಳಾಂತರಿಸಬೇಕಾದ ಜನರಿಗೆ ತಾತ್ಕಾಲಿಕವಾಗಿ ತಂಗಲು ವ್ಯವಸ್ಥೆ ಮಾಡಿತ್ತು. ಈ ನಿಟ್ಟಿನಲ್ಲಿ ಸ್ಥಳೀಯ ಕುಟುಂಬಗಳು ಮತ್ತು ಎನ್‌ಜಿಒ ನೆರವು ನೀಡಿದ್ದವು.

ಉಕ್ರೇನ್‌ ಯುದ್ಧದಲ್ಲಿ ಮೃತಪಟ್ಟ ನಟನ ಕೊನೆ ಸಂದೇಶವಿದು...
ಈ ಆಶ್ರಯ ತಾಣದಲ್ಲಿ ಮೂರು ದಿನ ತಂಗಿದ್ದ ವಿಘ್ನೇಶ್, ರೊಮೇನಿಯನ್ (Romania) ಹುಡುಗಿ ಸಿಮೋನಾ (Simona) ಅವರನ್ನು ಭೇಟಿಯಾದರು. ಎಲ್ಲರೂ ಸುರಕ್ಷಿತವಾಗಿ ಮನೆಗೆ ಹೋಗುವ ಆತಂಕದಲ್ಲಿದ್ದರೆ ವಿಘ್ನೇಶ್ ರೊಮೇನಿಯನ್ ಹುಡುಗಿಯ ಪ್ರೀತಿಯಲ್ಲಿ ಬಿದ್ದಿದ್ದ. ಅಲ್ಲದೇ ಆಕೆಗೆ ಮದುವೆಯ ಪ್ರಸ್ತಾಪವನ್ನು ಸಹ ಮಾಡಿದ ಆದರೆ, ವಿಘ್ನೇಶ್ ಅವರ ಪ್ರಸ್ತಾಪಕ್ಕೆ ಹುಡುಗಿಯ ಪ್ರತಿಕ್ರಿಯೆ ಏನು ಎಂಬುದು ಇನ್ನೂ ತಿಳಿದಿಲ್ಲ. ಆದರೆ ಆಕೆ ಸಮಯ ಕೇಳಿದ್ದಾಳೆ ಎಂದು ತಿಳಿದು ಬಂದಿದೆ.

ಈ ವಿಚಾರವನ್ನು ವಿಕಾಸ್ ಬದೌರಿಯಾ (Vikas Bhadauria) ಸೇರಿದಂತೆ ಪ್ರಮುಖ ಪತ್ರಕರ್ತರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.