ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?

ಸೌದಿ ಅರೇಬಿಯಾದಲ್ಲಿ ಉಮ್ರಾ ಯಾತ್ರೆಗೆ ತೆರಳಿದ್ದ ಭಾರತೀಯ ಯಾತ್ರಾರ್ಥಿಗಳ ಬಸ್, ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಭೀಕರ ಅಗ್ನಿ ದುರಂತ ಸಂಭವಿಸಿದೆ. ಈ ಘೋರ ದುರಂತದಲ್ಲಿ 45 ಮಂದಿ ಸಜೀವ ದಹನವಾಗಿದ್ದು, ಓರ್ವ ವ್ಯಕ್ತಿ ಮಾತ್ರ ಅದೃಷ್ಟವಶಾತ್ ಬದುಕುಳಿದಿದ್ದಾರೆ.

Share this Video
  • FB
  • Linkdin
  • Whatsapp

ಘೋರ.. ಭಯಂಕರ.. ಭೀಕರ ಅಗ್ನಿಪ್ರಮಾದ ಸಂಭವಿಸಿದೆ.. ನಿದ್ದೆಲಿದ್ದವರು ಚಿರನಿದ್ರೆಗೆ ಜಾರೋ ಹಾಗೆ ಮಾಡಿದ ಅತಿ ಭಯಾನಕ ದುರಂತ ಅದು.. ಆ ದುರಂತ ಸಂಭವಿಸಿದ್ದು, ದೂರದ ಸೌದಿಯಲ್ಲಿ.. ಆದ್ರೆ ಪ್ರಾಣ ಕಳೆದುಕೊಂಡಿದ್ದು ಮಾತ್ರ, ಭಾರತೀಯರು.. ಅಷ್ಟಕ್ಕೂ ಆ ದುರ್ಘಟನೆ ನಡೆದಿದ್ದೆಲ್ಲಿ? ಹೇಗಾಯ್ತು? ಯಾಕಾಯ್ತು? ಸೋಮವಾರ ರಾತ್ರಿ, ಆ ಯಾತ್ರಿಕರ ಪಾಲಿಗೆ ಕರಾಳ ರಾತ್ರಿಯಾಗಿದ್ದು.. ದೂರದೇಶದ ದಾರಿಯಲ್ಲಿ, ಭಯಾನಕ ಸಾವು ಹೊಂಚು ಹಾಕಿತ್ತು.. ಡೀಸಲ್ ಟ್ಯಾಂಕರ್​ಗೆ ಯಾತ್ರಿಕರ್ ಬಸ್ ಢಿಕ್ಕಿ ಹೊಡೆದಿದೆ ತಡ, ನೆಲದಿಂದ ಆಕಾಶದ ತನಕ ಅಗ್ನಿ ಎದ್ದು ನಿಂತಿತ್ತು.. ಆಮೇಲೇನಾಯ್ತು? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.. 

Related Video