Russia Ukraine War: ರಷ್ಯಾಗೆ ಜಾಗತಿಕ ನಿರ್ಬಂಧ, ಭಾರತೀಯ ಔಷಧ ಕಂಪನಿಗಳಿಗೆ ಹೆಚ್ಚಾಯ್ತು ಡಿಮ್ಯಾಂಡ್.!
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸಿದ ನಂತರ ಬಹಳಷ್ಟುಪಾಶ್ಚಿಮಾತ್ಯ ರಾಷ್ಟ್ರಗಳ ರಷ್ಯಾದ ತೈಲ ಖರೀದಿಯ ಮೇಲೆ ನಿರ್ಬಂಧ ವಿಧಿಸಿವೆ. ಇದು ರಷ್ಯಾದ ಕಚ್ಚಾ ತೈಲ ಅಗ್ಗದ ಬೆಲೆಗೆ ದೊರೆಯುವಂತಹ ಅವಕಾಶಕ್ಕೆ ಎಡೆ ಮಾಡಿಕೊಟ್ಟಿದೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸಿದ ನಂತರ ಬಹಳಷ್ಟುಪಾಶ್ಚಿಮಾತ್ಯ ರಾಷ್ಟ್ರಗಳ ರಷ್ಯಾದ ತೈಲ ಖರೀದಿಯ ಮೇಲೆ ನಿರ್ಬಂಧ ವಿಧಿಸಿವೆ. ಇದು ರಷ್ಯಾದ ಕಚ್ಚಾ ತೈಲ ಅಗ್ಗದ ಬೆಲೆಗೆ ದೊರೆಯುವಂತಹ ಅವಕಾಶಕ್ಕೆ ಎಡೆ ಮಾಡಿಕೊಟ್ಟಿದೆ. ಇದರ ಭರಪೂರ ಲಾಭ ಪಡೆದುಕೊಳ್ಳಲು ಮುಂದಾಗಿರುವ ಭಾರತದ ಕಂಪನಿಗಳು ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಖರೀದಿ ಮಾಡುತ್ತಿವೆ.
Russia Ukraine War ಉಕ್ರೇನ್ ವಿರುದ್ಧ ಕ್ರಿಮಿಯಾ ಅಸ್ತ್ರವನ್ನು ಪ್ರಯೋಗಿಸ್ತಿದ್ಯಾ ರಷ್ಯಾ?
ಇನ್ನೊಂದೆಡೆ ಪಾಶ್ಚಿಮಾತ್ಯ ದೇಶಗಳ ಔಷಧಿ ತಯಾರಕರು ರಷ್ಯಾದ ಮಾರುಕಟ್ಟೆಯಿಂದ ನಿರ್ಗಮಿಸಿದ ಹಿನ್ನೆಲೆಯಲ್ಲಿ, ಆ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಭಾರತೀಯ ಔಷಧಿ ತಯಾರಿಕಾ ಕಂಪನಿಗಳಿಗೆ ರಷ್ಯಾ ಮುಕ್ತ ಆಹ್ವಾನವನ್ನು ನೀಡಿದೆ.
‘ಭಾರತವು ಜಾಗತಿಕ ಔಷಧಾಲಯ ಎಂದು ಪ್ರಸಿದ್ಧಿ ಪಡೆದಿದೆ. ಭಾರತ ಸ್ವದೇಶಿ ಕೋವಿಡ್ ಲಸಿಕೆ ತಯಾರಿಸಿ, ತನ್ನ ನಾಗರಿಕರಿಗೆ ಪೂರೈಸಿದ್ದಲ್ಲದೇ ವ್ಯಾಕ್ಸಿನ್ ಮೈತ್ರಿ ಯೋಜನೆಯ ಮೂಲಕ ಹಲವಾರು ದೇಶಗಳಿಗೆ ಔಷಧಿ ಪೂರೈಸಿ ತನ್ನ ಸಾಮರ್ಥ್ಯವನ್ನು ತೋರಿಸಿದೆ. ಈಗಾಗಲೇ ಹಲವಾರು ಪಾಶ್ಚಿಮಾತ್ಯ ಕಂಪನಿಗಳು ರಷ್ಯಾದ ಮಾರುಕಟ್ಟೆಯನ್ನು ತೊರೆದಿರುವುದರಿಂದ ಆ ಸ್ಥಳಗಳನ್ನು ಭಾರತದ ಔಷಧ ತಯಾರಿಕಾ ಕಂಪನಿಗಳು ಆಕ್ರಮಿಸಿಕೊಳ್ಳಬಹುದು’ ಎಂದು ರಷ್ಯಾ ಹೇಳಿದೆ.