Qatar: ಹೇಗೆ ಕೆಲಸ ಮಾಡಿತ್ತು ಗೊತ್ತಾ ಜೈ ಶಂಕರ್ ಟೀಮ್..? ಭಾರತ ಸಾಬೀತು ಮಾಡಿದ ‘ವಿಶ್ವಗುರು’ ಪವರ್..!
ಗೂಢಚಾರಿಗಳು ಎಂದು 8 ಭಾರತೀಯರ ಬಂಧನ..!
ನಾಡಿದ್ದು ಕತಾರ್ ದೇಶಕ್ಕೆ ನರೇಂದ್ರ ಮೋದಿ ಭೇಟಿ..!
ಮೋದಿ ಹಾಡಿ ಹೊಗಳಿದ ಮಾಜಿ ನೌಕಾಧಿಕಾರಿಗಳು..!
ಇದು ಮೋದಿ ಸರ್ಕಾರದ ವಿಜಯ. ಭಾರತದ(India) ರಾಜತಾಂತ್ರಿಕ ಶಕ್ತಿಯ ದಿಗ್ವಿಜಯ. ತುಂಬಾ ಕಠಿಣವಾದ ಕಾನೂನು ಪಾಲಿಸೋ ದೇಶದಲ್ಲಿ ನಮ್ಮ ಭಾರತೀಯರು ಸಂಕಷ್ಟದಲ್ಲಿ ಸಿಲುಕಿದ್ದರು. 18 ತಿಂಗಳ ಜೈಲುವಾಸದ ನಂತರ ಮರಣದಂಡನೆ ಅವರನ್ನ ಕಾಯ್ತಾ ಇತ್ತು. ಆದ್ರೆ ಭಾರತ ಅವರನ್ನ ಬಿಟ್ಟುಕೊಡಲಿಲ್ಲ. ಮರಳಿ ತಾಯ್ನಾಡಿಗೆ ಕರ್ಕೊಂಡು ಬಂದಿದೆ. ಕತಾರ್(Qatar) ಅಂದ್ರೆ ಸಾಮಾನ್ಯ ದೇಶವಲ್ಲ. ಅಲ್ಲಿ ತುಂಬಾ ಕಠಿಣವಾದ ಕಾನೂನು ಇದೆ. ಕಾನೂನು ತೀರ್ಪು ಅಂತಿಮ ಅಂತಲೇ ಬದುಕ್ತಾ ಇರೋ ದೇಶ. ಅದು 2022 ಆಗಷ್ಟ್ ತಿಂಗಳು..ಭಾರತದ ಮೂಲದ 8 ನೇವಿ ಆಫೀಸರ್ಸ್ಗಳಾದ ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ, ಕಮಾಂಡರ್ ಅಮಿತ್ ನಾಗಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಾಕಳ, ಕಮಾಂಡರ್ ಸಂಜೀವ್ ಗುಪ್ತ, ಹಾಗೂ ಸೈಲರ್ ರಾಗೇಶ್ ಎನ್ನುವ ನಮ್ಮ ಭಾರತದ ನೌಕಾಪಡೆಯಲ್ಲಿ(Navy Officers) ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅಧಿಕಾರಿಗಳು ಕತಾರ್ನಲ್ಲಿ ಬಂಧನಕ್ಕೆ ಒಳಗಾಗ್ತಾರೆ.. ವಿಚಾರಣೆ ನಡೆಸಿದ ಕತಾರ್ ಕೋರ್ಟ್ ಮರಣದಂಡನೆಯನ್ನ ಎಂಟೂ ಮಂದಿಗೆ ವಿಧಿಸುತ್ತೆ. ಅವರೆಲ್ಲರೂ ಭಾರತಕ್ಕೆ ಸೇರಿದ್ದವರಾಗಿದ್ದರಿಂದ ಇದೊಂದು ಅಂತಾರಾಷ್ಟ್ರೀಯ ಸುದ್ದಿ ಆಗೋದಿಕ್ಕೆ ಹೆಚ್ಚು ಸಮಯ ಕಳೀಲಿಲ್ಲ. ಬಂಧನಕ್ಕೆ ಒಳಗಾಗಿದ್ದ 8 ಮಂದಿ ಭಾರತೀಯರು ದಹ್ರಾ ಗ್ಲೋಬಲ್ ಟೆಕ್ನಾಲಜಿ ಅನ್ನೋ ಒಂದು ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದರು. ಅದೊಂದು ಡಿಫೆನ್ಸ್ ಕಂಪನಿ. ಆದ್ರೆ ಇವರೆಲ್ಲಾ ಗೂಢಚಾರಿಗಳು ಅನ್ನೋ ಅನುಮಾನ ಕತಾರ್ ಗುಪ್ತಚರ ಇಲಾಖೆಗೆ ಬಂದಿತ್ತು. ಕತಾರ್ ದೇಶದ ಆಂತರಿಕ ಮಾಹಿತಿಗಳನ್ನ ಇಸ್ರೇಲ್ ದೇಶಕ್ಕೆ ಕಳಿಸುವ ಮಂದಿ ಅಂತಲೇ ಬಂಧನ ಮಾಡಿತ್ತು.
ಇದನ್ನೂ ವೀಕ್ಷಿಸಿ: Eshwarappa-DKShi: "ನನ್ನ ತಂಟೆಗೆ ಬಂದವರ ಸೆಟ್ಲ್‌ಮೆಂಟ್ ಆಗ್ತಾ ಇದೆ.." ಅಂದಿದ್ದೇಕೆ ಬಂಡೆ..?