Eshwarappa-DKShi: "ನನ್ನ ತಂಟೆಗೆ ಬಂದವರ ಸೆಟ್ಲ್‌ಮೆಂಟ್ ಆಗ್ತಾ ಇದೆ.." ಅಂದಿದ್ದೇಕೆ ಬಂಡೆ..?

"ಒಂದು ರೌಂಡ್ ಸೆಟ್ಲ್‌ಮೆಂಟ್  ಆಗಿದೆ, ನೆನಪಿದ್ಯಾ.." ಡಿಕೆಶಿ ಡಿಚ್ಚಿ..!
"ಗೂಂಡಾಗಿರಿಗೆ ಇಳಿದ್ರೆ ಸುಮ್ಮನಿರಲ್ಲ" ಡಿಕೆಶಿಗೆ ಈಶ್ವರಪ್ಪ ವಾರ್ನಿಂಗ್..!
ಗುಂಡಿನ ಮಾತು.. ಸೆಟ್ಲ್‌ಮೆಂಟ್ ರಾಜಕೀಯ.. ದ್ವೇಷ.. ದುಷ್ಮನಿ..!

First Published Feb 13, 2024, 5:53 PM IST | Last Updated Feb 13, 2024, 5:55 PM IST

ಅವರಿಬ್ಬರು ಆಜನ್ಮ ಶತ್ರುಗಳೇನಲ್ಲ. ಆದ್ರೆ ಆಜನ್ಮ ವೈರಿಗಳನ್ನೇ ಮೀರಿಸತ್ತೆ ಅವ್ರ ನಡುವಿನ ಶತ್ರುತ್ವ. ಇದು ಇಡೀ ರಾಜ್ಯವೇ ತಿರುಗಿ ನೋಡುವಂಥಾ ದುಷ್ಮನಿ. ಆ ದ್ವೇಷದ ಅಗ್ನಿಕುಂಡ ಮತ್ತೆ ಧಗಧಗಿಸ್ತಾ ಇದೆ. ಒಂದ್ಕಡೆ ಅಣ್ಣ ಮತ್ತು ತಮ್ಮ. ಮತ್ತೊಂದ್ಕಡೆ ಕೇಸರಿ ಕಲಿ. ಅರ್ಧ ಸೆಟ್ಲಮೆಂಟ್ ಆಗಿದೆ, ಪೂರ್ಣ ಮಾಡೋದು ಬಾಕಿ ಇದೆ ಅಂತ ಕನಕವೀರ. ತಿಹಾರ್ ಜೈಲಿನಲ್ಲೇ ಕಂಪ್ಲೀಟ್ ಸೆಟ್ಲ್'ಮೆಂಟ್ ಅಂತ ಕೇಸರಿವೀರ. ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಬಾಯಲ್ಲೂ ಸೆಟ್ಲ್'ಮೆಂಟ್. ಮಾಜಿ ಡಿಸಿಎಂ ಈಶ್ವರಪ್ಪ(Eshwarappa) ಬಾಯಲ್ಲೂ ಸೆಟ್ಲ್'ಮೆಂಟ್. ಇದು ರಾಜ್ಯ ರಾಜಕಾರಣದಲ್ಲಿ ಮತ್ತೆ ಸದ್ದು ಮಾಡ್ತಿರೋ ಸೆಟ್ಲ್'ಮೆಂಟ್(settlement) ರಾಜಕಾರಣ. ಕೇಸರಿ ಕಲಿ ಕೆ.ಎಸ್ ಈಶ್ವರಪ್ಪ ವಿರುದ್ಧ ಕನಕಪುರ ಬಂಡೆ ಡಿಕೆ ಶಿವಕುಮಾರ್ ಮತ್ತೆ "ಸೆಟ್ಲ್'ಮೆಂಟ್" ಪದ ಪ್ರಯೋಗ ಮಾಡಿದ್ದಾರೆ. ಒಂದು ರೌಂಡ್ ಸೆಟ್ಲ್'ಮೆಂಟ್ ಆಗಿದೆ, ಮುಂದೆ ಕಂಪ್ಲೀಟ್ ಸೆಟ್ಲ್'ಮೆಂಟ್ ಆಗತ್ತೆ ಅಂತ ಈಶ್ವರಪ್ಪ ವಿರುದ್ಧ ಆಕ್ರೋಶಭರಿತರಾಗಿ ಹೇಳಿದ್ದಾರೆ ಡಿಕೆಶಿ.

ಇದನ್ನೂ ವೀಕ್ಷಿಸಿ:  10 ಕೋಟಿ ವಂಚಿಸಿ ಮಹಿಳೆ ಪರಾರಿ..! ಲೋನ್ ಕೊಡಿಸ್ತೀನಿ ಅಂತ ಲಕ್ಷ ಲಕ್ಷ ಪೀಕಿದ್ಲು..!

Video Top Stories