Russia Ukraine War: ಯುದ್ಧಪೀಡಿತ ಉಕ್ರೇನ್‌ನ ಕರಾಳತೆ ಬಿಚ್ಚಿಟ್ಟ ಬಳ್ಳಾರಿ ಸಹೋದರಿಯರ ಕಥೆ!
*'ನಾವು ಬದುಕಿ ಬರತ್ತೇವೆಂದು ಒಂಚೂರು ನಂಬಿಕೆ ಇರಲಿಲ್ಲ'
*ಉಕ್ರೇನ್ ಕರಾಳತೆ ಬಿಚ್ಚಿಟ್ಟ ಬಳ್ಳಾರಿ ಸಹೋದರಿಯರ ಕಥೆ
*ಯುದ್ಧಭೂಮಿಯಿಂದ ಬಂದಿಳಿದ ತಯಬ್ ಕೌಸರ್, ಸಭಾ ಕೌಸರ್
ಬಳ್ಳಾರಿ (ಮಾ. 05): ಉಕ್ರೇನ್‌ನ ಮಹಾನಗರಗಳನ್ನು ವಶಪಡಿಸಿಕೊಳ್ಳುವ ರಷ್ಯಾದ ಹರಸಾಹಸ ಯುದ್ಧ 10ನೇ ದಿನವೂ ಮುಂದುವರೆದಿದೆ. ಈ ಮಧ್ಯೆ ಯುದ್ಧಪೀಡಿತ ದೇಶವಾದ ಉಕ್ರೇನ್‌ನಿಂದ ಭಾರತಕ್ಕೆ ಮರಳಿದ ಬಳ್ಳಾರಿಯ ಸಹೋದರಿಯರಿಬ್ಬರು ಉಕ್ರೇನನ್‌ನ ಕರಾಳತೆ ಬಿಚ್ಚಿಟ್ಟಿದ್ದಾರೆ.
"ನಾವು ಬದುಕಿ ಬರತ್ತೇವೆಂದು ಒಂಚೂರು ನಂಬಿಕೆ ಇರಲಿಲ್ಲ" ಇಲ್ಲ ಎಂದು ಯುದ್ಧಭೂಮಿಯಿಂದ ಭಾರತಕ್ಕೆ ವಾಪಾಸಾದ ತಯಬ್ ಕೌಸರ್, ಸಭಾ ಕೌಸರ್ ಹೇಳಿದ್ದಾರೆ. ಬಳ್ಳಾರಿ ವಿದ್ಯಾರ್ಥಿಗಳ ಪೈಕಿ ಈವರೆಗೆ ನಾಲ್ವರು ವಿದ್ಯಾರ್ಥಿಗಳು ವಾಪಸಾಗಿದ್ದು ಇನ್ನೂಳಿದ ವಿದ್ಯಾರ್ಥಿಗಳನ್ನ ಆದಷ್ಟು ಬೇಗ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಯವರು ಬೇಗನೆ ಕರೆತರಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Russia-Ukraine War: ಮೈ ಕೊರೆಯುವ ಚಳಿ, ನಮ್ಮನ್ನು ರಕ್ಷಿಸಿ ಎಂದು ಭಾರತೀಯರ ಆರ್ತನಾದ
"ಬಂಕರ್ - ರೈಲ್ವೆ ನಿಲ್ದಾಣದಲ್ಲಿ ಅಶ್ರಯ ಪಡೆದುಕೊಂಡು ಬದುಕಿ ಬಂದಿದ್ದೇವೆ. ಯುದ್ದ ಆರಂಭವಾದ ಮೊದಲ ಮೂರು ದಿನಗಳ ಕಾಲ ಪರಿಸ್ಥಿತಿ ಸರಿಯಿತ್ತು. 4 ಮತ್ತು 5 ದಿನ ನಮಗೆ ಸಾಕಷ್ಟು ಭಯವಾಗಿತ್ತು .. ಆಹಾರ ಇದ್ರೂ ಅದನ್ನು ಹೊರಗಡೆ ಹೋಗಿ ತರೋದಕ್ಕೆ ಆಗ್ತಿರಲಿಲ್ಲ. ಬಂಕರ್ ನಲ್ಲಿದ್ದಾಗಲೂ ಹೊರಗೆ ಬಾಂಬ್ ಗುಂಡಿನ ದಾಳಿ ನಿರಂತರ ವಾಗಿ ಇತ್ತು ಭಯವಾಗ್ತಿತ್ತು. ಕತ್ತಲಲ್ಲಿ ನಾವೂ ಅಶ್ರಯ ಪಡೆದುಕೊಂಡು ಬದುಕಿ ಬಂದಿದ್ದೇವೆ. ಭಾರತದ ವಿದ್ಯಾರ್ಥಿಗಳ ಪಾಸ್ ಪೋರ್ಟ್ ಪರಿಶೀಲನೆ ಮಾಡಿ ಬಿಟ್ರು. ಯುದ್ದ ಆರಂಭಕ್ಕೂ ಮುನ್ನ ಬರಬೇಕು ಅಂದ್ರೆ ಯೂನಿವರ್ಸಿಟಿಯವರು ಯುದ್ದ ಆಗಲ್ಲವೆಂದು ಭರವಸೆ ನೀಡಿದ್ರು.ಹೀಗಾಗಿ ನಾವೂ ಮರಳಿ ಬರಲಿಲ್ಲ.. ಯುದ್ದ ಘೋಷಣೆಯಾದ ನಂತರ ಕಷ್ಟ ಅನುಭವಿಸಿ ಬಂದಿದ್ದೇವೆ" ಎಂದು ಸಹೋದರಿಯರಿಬ್ಬರು ಹೇಳಿದ್ದಾರೆ.