ಎದೆಯೊಡ್ಡಿ ನಿಲ್ಲಲಾಗದ ಚೀನಾ ಕುತಂತ್ರಕ್ಕೆ ಮೋದಿ ಪ್ರತ್ಯುತ್ತರವಿದು..!

ಪೂರ್ವ ಲಡಾಕ್‌ನಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಮಾತುಕತೆ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದಾಗಿ ಒಂದೆಡೆ ಹೇಳುತ್ತಿರುವ ಚೀನಾ ಮತ್ತೊಂದೆಡೆ ತನ್ನ ಕಪಟ ನಾಟಕವನ್ನು ತೋರಿಸಿದೆ. ಭಾರತ - ಚೀನಾ ನಡುವಿರುವ 4000 ಕಿಮೀ ಉದ್ದದ ಗಡಿ ವಾಸ್ತವಿಕ ರೇಖೆಯುದ್ದಕ್ಕೂ ಯೋಧರನನ್ನು ಜಮಾವಣೆ ಮಾಡುವ ಮೂಲಕ ಯುದ್ಧೋನ್ಮಾದ ತೋರಿದೆ. ಇದಕ್ಕೆ ಭಾರತ ಕೂಡಾ ಪ್ರತ್ಯುತ್ತರ ನೀಡಿದ್ದು ಯೋಧರನ್ನು ಗಡಿಗೆ ರವಾನಿಸಿದೆ. 

First Published Jun 15, 2020, 1:05 PM IST | Last Updated Jun 15, 2020, 1:13 PM IST

ನವದೆಹಲಿ (ಜೂ. 15): ಪೂರ್ವ ಲಡಾಕ್‌ನಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಮಾತುಕತೆ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದಾಗಿ ಒಂದೆಡೆ ಹೇಳುತ್ತಿರುವ ಚೀನಾ ಮತ್ತೊಂದೆಡೆ ತನ್ನ ಕಪಟ ನಾಟಕವನ್ನು ತೋರಿಸಿದೆ.

ಭಾರತ - ಚೀನಾ ನಡುವಿರುವ 4000 ಕಿಮೀ ಉದ್ದದ ಗಡಿ ವಾಸ್ತವಿಕ ರೇಖೆಯುದ್ದಕ್ಕೂ ಯೋಧರನನ್ನು ಜಮಾವಣೆ ಮಾಡುವ ಮೂಲಕ ಯುದ್ಧೋನ್ಮಾದ ತೋರಿದೆ. ಇದಕ್ಕೆ ಭಾರತ ಕೂಡಾ ಪ್ರತ್ಯುತ್ತರ ನೀಡಿದ್ದು ಯೋಧರನ್ನು ಗಡಿಗೆ ರವಾನಿಸಿದೆ. ಚೀನಾ ಯಾವುದೇ ದುಸ್ಸಾಹಸಕ್ಕೆ ಇಳಿಯದಂತೆ ತಡೆಯುವ ಉದ್ದೇಶದಿಂದ ಗಡಿಯ ಮುಂಚೂಣಿ ಪ್ರದೇಶಗಳಿಗೆ ನಾವೂ ಯೋಧರನ್ನು ರವಾನಿಸಿದ್ದೇವೆ ಎಂದು ಸರ್ಕಾರ ತಿಳಿಸಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!