Asianet Suvarna News Asianet Suvarna News

ಯುದ್ಧದ ಹೊಸ್ತಿಲಲ್ಲಿ ಇರಾನ್-ಯುಎಸ್: ಏನಾಯ್ತು, ಏನಾಗಲಿದೆ ವಿಡಿಯೋದಲ್ಲಿ ಎಲ್ಲಾ ಇದೆ!

ಯುದ್ಧದ ಹೊಸ್ತಿಲಲ್ಲಿ ಬಂದು ನಿಂತಿರುವ ಇರಾನ್-ಅಮೆರಿಕ, ಪರಸ್ಪರ ಕೆಸರೆರಚಾಟದಲ್ಲಿ ನಿರತವಾಗಿವೆ. ಅಮೆರಿಕ-ಇರಾನ್ ನಡುವಿನ ಯುದ್ಧೋನ್ಮಾದ ಭಾರತವೂ ಸೇರಿದಂತೆ ಜಗತ್ತನ್ನು ತಲ್ಲಣಗೊಳಿಸಿದ್ದು, ಎರಡೂ ದೇಶಗಳು ಸಂಯಮದಿಂದ ವರ್ತಿಸುವಂತೆ ಭಾರತ ಸಲಹೆ ನೀಡಿದೆ.

ವಾಷಿಂಗ್ಟನ್(ಜ.10): ಯುದ್ಧದ ಹೊಸ್ತಿಲಲ್ಲಿ ಬಂದು ನಿಂತಿರುವ ಇರಾನ್-ಅಮೆರಿಕ, ಪರಸ್ಪರ ಕೆಸರೆರಚಾಟದಲ್ಲಿ ನಿರತವಾಗಿವೆ. ಇರಾನ್‌ನ ಉನ್ನತ ಸೇನಾಧಿಕಾರಿಯನ್ನು ಅಮೆರಿಕ ಕೊಂದಿದಕ್ಕೆ ಪ್ರತಿಕಾರವಾಗಿ ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿಯಾಗಿದೆ. ಕ್ಷಿಪಣಿ ದಾಳಿಯಲ್ಲಿ ಅಮೆರಿಕದ 80ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಹೇಳಿದ್ದು, ಅಮೆರಿಕ ಈ ವಾದವನ್ನು ತಳ್ಳಿ ಹಾಕಿದೆ. ಈ ಮಧ್ಯೆ ಅಮೆರಿಕ-ಇರಾನ್ ನಡುವಿನ ಯುದ್ಧೋನ್ಮಾದ ಭಾರತವೂ ಸೇರಿದಂತೆ ಜಗತ್ತನ್ನು ತಲ್ಲಣಗೊಳಿಸಿದ್ದು, ಎರಡೂ ದೇಶಗಳು ಸಂಯಮದಿಂದ ವರ್ತಿಸುವಂತೆ ಭಾರತ ಸಲಹೆ ನೀಡಿದೆ. ವ್ಯಾಪಾರ ಕ್ಷೇತ್ರದ ಮೇಲಾಗಿರುವ ದುಷ್ಪರಿಣಾಮ ಮತ್ತು ಅನಿವಾಸಿ ಭಾರತೀಯರ ಕುರಿತು ಭಾರತ ಚಿಂತೆಕ್ರಾಂತವಾಗಿದೆ. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..  

Video Top Stories