ಮಧ್ಯಪ್ರಾಚ್ಯಕ್ಕೆ ಹೋದವರಿಗೆ, ಹೋಗುವವರಿಗೆ ವಿದೇಶಾಂಗ ಇಲಾಖೆ ಸಲಹೆ!
ಯುದ್ಧದ ಹೊಸ್ತಿಲಲ್ಲಿ ಹೂಂಕರಿಸುತ್ತಿರುವ ಇರಾನ್-ಅಮೆರಿಕ| ಮಧ್ಯಪ್ರಾಚ್ಯದ ಅನಿವಾಸಿ ಭಾರತೀಯರಲ್ಲಿ ಆತಂಕ ಸೃಷ್ಟಿಸಿದ ಯುದ್ಧೋನ್ಮಾದ| ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಭಾರತೀಯರಿಗೆ ವಿದೇಶಾಂಗ ಇಲಾಖೆ ಸಲಹೆ| ಇರಾಕ್, ಇರಾನ್ ಪ್ರವಾಸ ಮುಂದೂಡುವಂತೆ ಭಾರತೀಯರಿಗೆ ಸಲಹೆ| ಇರಾಕ್‌ನಲ್ಲಿರುವ ಭಾರತೀಯರು ಕಟ್ಟೆಚ್ಚರದಿಂದ ಇರಬೇಕೆಂಬ ಮನವಿ| ಇರಾಕ್, ಇರಾನ್ ವಾಯುಗಡಿ ಪ್ರದೇಶ ಬಳಸದಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ|
ನವದೆಹಲಿ(ಜ.08): ಅಮೆರಿಕ-ಇರಾನ್ ನಡುವಿನ ಯುದ್ಧ ಭೀತಿಗೆ ಜಗತ್ತು ತಲ್ಲಣಗೊಂಡಿದ್ದು, ಪ್ರಮುಖವಾಗಿ ಅನಿವಾಸಿ ಭಾರತೀಯರ ಹಿತರಕ್ಷಣೆಗಾಗಿ ಭಾರತ ಚಿಂತಾಕ್ರಾಂತವಾಗಿದೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಲಕ್ಷಾಂತರ ಭಾರತೀಯರು ನೆಲೆಸಿದ್ದು, ಅಮೆರಿಕ-ಇರಾನ್ ನಡುವಿನ ಯುದ್ಧ ಭೀತಿಯಿಂದಾಗಿ ಇವರ ಸುರಕ್ಷತೆ ಕೇಂದ್ರ ಸರ್ಕಾವನ್ನು ಚಿಂತೆಗೀಡುಮಾಡಿದೆ.
ಅವ್ರದ್ದು ಯುದ್ಧ ಆರಂಭಿಸುವ ಬಯಕೆ, ನಮ್ದು ಮುಗಿಸುವ ಬಯಕೆ: ಎಸ್ಪರ್!
ಇರಾಕ್‌ಗೆ ತೆರಳುವ ಭಾರತೀಯರು ತಮ್ಮ ಪ್ರವಾಸವನ್ನು ಮುಂದೂಡುವುದು ಒಳಿತು ಎಂದು ಭಾರತದ ವಿದೇಶಾಂಗ ಇಲಾಖೆ ಸಲಹೆ ನೀಡಿದ್ದು, ಇರಾಕ್‌ನಲ್ಲಿರುವ ಭಾರತೀಯರು ಕಟ್ಟೆಚ್ಚರದಿಂದ ಇರುವಂತೆ ಮನವಿ ಮಾಡಿದೆ.
ಇರಾನ್ ಮಿಸೈಲ್ ದಾಳಿಗೆ 80 'ಅಮೆರಿಕನ್ ಭಯೋತ್ಪಾದಕರ' ಸಾವು?: ಏನಾಗಿಲ್ಲ ಎಂದ ಟ್ರಂಪ್!
ಈ ಕುರಿತು ಪ್ರಕಟಣೆ ಹೊರಡಿಸಿರುವ ವಿದೇಶಾಂಗ ಇಲಾಖೆ, ಮಧ್ಯಪ್ರಾಚ್ಯ ರಾಷ್ಟ್ರಗಳು ಅದರಲ್ಲೂ ಇರಾಕ್ ಹಾಗೂ ಇರಾನ್ ರಾಷ್ಟ್ರಗಳಿಗೆ ತೆರಳು ಯೋಜನೆಯನ್ನು ಭಾರತೀಯರು ಮುಂದೂಡಬೇಕು ಎಂದು ಮನವಿ ಮಾಡಿದೆ.
ಅಲ್ಲದೇ ಈಗಾಗಲೇ ಇರಾಕ್ ಹಾಗೂ ಇರಾನ್‌ನಲ್ಲಿ ನೆಲೆಸಿರುವ ಭಾರತೀಯರು, ಅಮೆರಿಕ-ಇರಾನ್ ನಡುವಿನ ವೈಮನಸ್ಸಿನ ಕುರಿತು ಎಚ್ಚರದಿಂದ ಇರಬೇಕು ಎಂದು ಹೇಳಿದೆ.
ಇನ್ನು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತೆರಳುವ ವಿಮಾನಗಳು ಇರಾಕ್ ಹಾಗೂ ಇರಾನ್ ವಾಯುಗಡಿ ಪ್ರದೇಶವನ್ನು ಬಳಸದಂತೆಯೂ ವಿದೇಶಾಂಗ ಇಲಾಖೆ ಕಟ್ಟಪ್ಪಣೆ ಹೊರಡಿಸಿದೆ.
ಒಟ್ಟಿನಲ್ಲಿ ಅಮೆರಿಕ-ಇರಾನ್ ನಡುವಿನ ಯುದ್ಧೋನ್ಮಾದ ಮಧ್ಯಪ್ರಾಚ್ಯಗಳಲ್ಲಿ ನೆಲೆಸಿರುವ ಭಾರತೀಯರ ನಿದ್ದೆಗೆಡೆಸಿದ್ದು, ಯುದ್ಧ ಶುರುವಾದರೆ ಅನಿವಾಸಿ ಭಾರತೀಯರ ಸುರಕ್ಷತೆ ಭಾರತ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.