ಭಾರತೀಯ ಯೋಧರನ್ನು ಕೊಂದು ಚೀನಾ ಹೇಳಿದ 9 ಸುಳ್ಳುಗಳು

ಭಾರತೀಯ ಸೈನಿಕರೇ ಗಡಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ನಿಮ್ಮ ಸೈನಿಕರಿಗೆ ಬುದ್ದಿ ಹೇಳಿ ಎಂದು ಚೀನಾ ಬಹಿರಂಗವಾಗಿಯೇ ಉದ್ದಟತನದ ಮಾತುಗಳನ್ನು ಆಡಿದೆ. ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಈ ಮಾತುಗಳನ್ನು ಹೇಳಿದ್ದಾರೆ.

First Published Jun 17, 2020, 6:09 PM IST | Last Updated Jun 17, 2020, 6:09 PM IST

ನವದೆಹಲಿ(ಜೂ.17): ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆ ನಮ್ಮದು ಎಂದು ಇದೇ ಮೊದಲ ಬಾರಿಗೆ ಚೀನಾ ಹೇಳಿದೆ. ಈ ಮೂಲಕ ಗಲ್ವಾನ್ ಪ್ರದೇಶದ ಮೇಲೆ ಸಾರ್ವಭೌಮತ್ವ ಸಾಧಿಸಲು ಚೀನಾ ಮುಂದಾಗಿದೆ. ಭಾರತದ 20 ಸೈನಿಕರನ್ನು ಹತ್ಯೆ ಮಾಡಿ ಹೊಸ ಸುಳ್ಳುಗಳನ್ನು ಹೆಣೆಯತೊಡಗಿದೆ.

ಭಾರತೀಯ ಸೈನಿಕರೇ ಗಡಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ನಿಮ್ಮ ಸೈನಿಕರಿಗೆ ಬುದ್ದಿ ಹೇಳಿ ಎಂದು ಚೀನಾ ಬಹಿರಂಗವಾಗಿಯೇ ಉದ್ದಟತನದ ಮಾತುಗಳನ್ನು ಆಡಿದೆ. ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಈ ಮಾತುಗಳನ್ನು ಹೇಳಿದ್ದಾರೆ.

ಭಾರತ- ಚೀನಾ ಗಡಿ ಸಂಘರ್ಷ; ಹುತಾತ್ಮರಾದ 20 ಯೋಧರ ಪಟ್ಟಿ ಬಿಡುಗಡೆ

ಚೀನಾ ನೆಲದಲ್ಲಿ ಭಾರತೀಯ ಸೇನೆ ಘರ್ಷಣೆ ನಡೆಸಿದೆ, ಚೀನಾವನ್ನು ನಿಷೇಧಿಸಲು ಗಡಿಗೆ ನುಸುಳಬೇಡಿ. ಸರಿ-ತಪ್ಪು ಯಾವುದು ಎನ್ನುವುದು ನಮಗೆ ಗೊತ್ತಿದೆ ಎಂದು ಚೀನಾ ಅತಿರೇಕದ ಮಾತುಗಳನ್ನು ಆಡಿದೆ. ಚೀನಾ ಹೇಳಿದ 9 ಸುಳ್ಳುಗಳು ಇಲ್ಲಿವೆ ನೋಡಿ.