Asianet Suvarna News Asianet Suvarna News

ಅಮೆರಿಕಾ ಚುನಾವಣೆ 2020 : ಬೈಡೆನ್ ಆರ್ಭಟದ ಮುಂದೆ ಟ್ರಂಪ್ ಧೂಳಿಪಟ?

ನ.3 ರಂದು ನಡೆದಿದ್ದ ಅಧ್ಯಕ್ಷೀಯ ಚುನಾವಣೆ ಮತ ಎಣಿಕೆ ಪ್ರಕ್ರಿಯೆಯು ಗುರುವಾರ ಕೂಡಾ ಪೂರ್ಣಗೊಂಡಿಲ್ಲ. ಕೊರೋನಾ ಹಿನ್ನೆಲೆ ಈ ಬಾರಿ ಕೋಟ್ಯಂತರ ಜನರು ಅಂಚೆಮತಕ್ಕೆ ಶರಣಾದ ಕಾರಣ, ದೊಡ್ಡ ದೊಡ್ಡ ರಾಜ್ಯಗಳಲ್ಲಿ ಮತ ಎಣಿಕೆ ತಡವಾಗಿದೆ. 

ವಾಷಿಂಗ್‌ಟನ್ (ನ. 06): ಅಮೆರಿಕದ ನೂತನ ನೂತನ ಅಧ್ಯಕ್ಷರ ಆಯ್ಕೆಗೆ ನಡೆದಿರುವ ಚುನಾವಣೆಯ ಫಲಿತಾಂಶ ಮತ್ತಷ್ಟು ವಿಳಂಬವಾಗಿದ್ದು, ಭಾರತೀಯ ಕಾಲಮಾನ ಶುಕ್ರವಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ. 

ನ.3 ರಂದು ನಡೆದಿದ್ದ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಯಾಕೆ ವಿಳಂಬವಾಗುತ್ತಿದೆ ಎಂದು ನೋಡುವುದಾದರೆ,  ಕೊರೋನಾ ಹಿನ್ನೆಲೆ ಈ ಬಾರಿ ಕೋಟ್ಯಂತರ ಜನರು ಅಂಚೆಮತಕ್ಕೆ ಶರಣಾದ ಕಾರಣ, ದೊಡ್ಡ ದೊಡ್ಡ ರಾಜ್ಯಗಳಲ್ಲಿ ಮತ ಎಣಿಕೆ ತಡವಾಗಿದೆ.

ಭಾರತೀಯರ ಪಾಲಿನೊಂದಿಗೆ ಅಮೆರಿಕಕ್ಕೆ ಹೊಸ ಅಧ್ಯಕ್ಷ, ಕೆನಡಾದಲ್ಲಿ ಹಂದಿ ಜ್ವರ

 ಭಾರತೀಯ ಕಾಲಮಾನ ಗುರುವಾರ ರಾತ್ರಿಯವರೆಗೆ ಅಮೆರಿಕದ 50 ರಾಜ್ಯಗಳ ಪೈಕಿ 45 ರಾಜ್ಯಗಳ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 214 ಪ್ರತಿನಿಧಿ ಮತ ಪಡೆದಿದ್ದರೆ, ಬೈಡೆನ್‌ 264 ಮತ ಪಡೆದಿದ್ದಾರೆ. ಹೀಗಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಲು ಟ್ರಂಪ್‌ಗೆ 56 ಮತ್ತು ಬೈಡೆನ್‌ಗೆ ಕೇವಲ 6 ಮತಗಳ ಕೊರತೆ ಇದೆ.

 

 

Video Top Stories