ಭಾರತೀಯರ ಪಾಲಿನೊಂದಿಗೆ ಅಮೆರಿಕಕ್ಕೆ ಹೊಸ ಅಧ್ಯಕ್ಷ, ಕೆನಡಾದಲ್ಲಿ ಹಂದಿ ಜ್ವರ

ಅಮೆರಿಕ ಅಧ್ಯಕ್ಷರನ್ನು ಆಯ್ಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದು ತಲುಪಿದೆ. ಸರಕಾರ ರಚಿಸಲು 270 ಮ್ಯಾಜಿಕ್ ನಂಬರ್. ಡೆಮೋಕ್ರಾಟಿಕ್ ಪಕ್ಷ 264 ಸ್ಥಾನಗಳಲ್ಲಿ ಗೆದ್ದು, ಮುನ್ನಡೆ ಕಾಯ್ದುಕೊಂಡಿದೆ. ರಿಪಬ್ಲಿಕನ್ ಪಕ್ಷದ ಟ್ರಂಪ್ ಕೇವಲ 214 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

First Published Nov 5, 2020, 12:24 PM IST | Last Updated Nov 5, 2020, 12:26 PM IST

ವಾಷಿಂಗ್‌ಟನ್ (ನ. 05): ಅಮೆರಿಕ ಅಧ್ಯಕ್ಷರನ್ನು ಆಯ್ಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದು ತಲುಪಿದೆ. ಸರಕಾರ ರಚಿಸಲು 270 ಮ್ಯಾಜಿಕ್ ನಂಬರ್. ಡೆಮೋಕ್ರಾಟಿಕ್ ಪಕ್ಷ 264 ಸ್ಥಾನಗಳಲ್ಲಿ ಗೆದ್ದು, ಮುನ್ನಡೆ ಕಾಯ್ದುಕೊಂಡಿದೆ. ರಿಪಬ್ಲಿಕನ್ ಪಕ್ಷದ ಟ್ರಂಪ್ ಕೇವಲ 214 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

- ಅಮೆರಿಕ ಚುನಾವಣೆಯಲ್ಲಿ ಮಹಿಳಾ ಪ್ರಾಬಲ್ಯ ಒಂದೆಡೆಯಾದರೆ, ಭಾರತೀಯರೂ ಗೆಲ್ಲುತ್ತಿರುವುದು ಮತ್ತೊಂದು ಹೆಮ್ಮೆಯ ವಿಷಯ. ದಿ ನೇಮ್ ಸೇಕ್ ಖ್ಯಾತಿಯ ಭಾರತೀಯ ಸಿನಿ ನಿರ್ದೇಶಕಿ ಮೀರಾ ನಾಯರ್ ಮಗ ಜೋಹ್ರಾನ್ ಮಮ್ದಾನಿ ನ್ಯೂಯಾರ್ಕ್ ಕ್ಷೇತ್ರವನ್ನು ಗೆದ್ದಿದ್ದಾರೆ.

ಅಮೆರಿಕಾ ಚುನಾವಣಾ ಫಲಿತಾಂಶ: ಹಿಸ್ಟರಿ ಕ್ರಿಯೇಟ್ ಆಗುತ್ತಾ? ರಿಪೀಟ್ ಆಗುತ್ತಾ?

- ಭಾರತದಲ್ಲಿ ಇದೀಗ ಡ್ರಗ್ ಘಾಟಿನಲ್ಲಿ ಸಿಕ್ಕಾಕಿಕೊಂಡ ಘಟಾನುಘಟಿಗಳು ಕಂಬಿ ಎಣಿಸುವಂತಾಗಿದೆ. ಅತ್ತ ನ್ಯೂ ಜರ್ಸಿಯಲ್ಲಿ ಮಾರಿಜೋನಾ ಮಾರಾಟ, ಸೇವನೆಯನ್ನು ಕಾನೂನುಬದ್ಧಗೊಳಿಸಲಾಗಿದೆ. ಮಜಾ ಮಾಡಲು ಮಾರಿಜೋನಾ ಸೇವನೆಗೆ ಅವಕಾಶ ಕೊಟ್ಟಿದ್ದೇ ತಡ, ಮಂದಿ ಈ ಬಗ್ಗೆ ಗೂಗಲ್ ಮಾಡಲು ಶುರು ಮಾಡಿದ್ದಾರೆ. ಈ ಮಾದಕ ವಸ್ತುವನ್ನು ಸೇವಿಸಲು ಸುತ್ತಿಕೊಳ್ಳುವುದು ಹೇಗೆ ಎಂಬುವುದು ವಿಪರೀತ ಸರ್ಚ್ ಆಗುತ್ತಿದೆ. 

- ಚೀನಾ ಹಬ್ಬಿಸಿದ ಕೊರೋನಾ ಸೋಂಕಿನ ಕಾಟವೇ ಇನ್ನೂ ಮುಗಿಯೋ ರೀತಿ ಕಾಣಿಸುತ್ತಿಲ್ಲ. ಆಗಲೇ ಕೆನಡಾದಲ್ಲಿ ಈಗ ಹಂದಿ ಜ್ವರದ ಭೀತಿ ಶುರುವಾಗಿದೆ. ಇದೇ ಮೊದಲ ಬಾರಿಗೆ ಮನುಷ್ಯನಲ್ಲಿ ಈ ಸೋಂಕು ಪತ್ತೆಯಾಗಿದೆ. 

 

Video Top Stories