
ಉಗ್ರರ ಸ್ವರ್ಗ ಪಾಕಿಸ್ತಾನದಲ್ಲಿ ಜಲಪ್ರಳಯ! ಸಂಕಷ್ಟದಲ್ಲಿ ಪಾತಕಿ ದೇಶ, ಊಟವಿಲ್ಲ.. ನೀರಿಲ್ಲ!
ಉಗ್ರರ ಸ್ವರ್ಗ ಪಾಕಿಸ್ತಾನದಲ್ಲಿ ವರುಣರಾಯ ಉಗ್ರ ಪ್ರತಾಪ ಮೆರೀತಿದಾನೆ. ಜಸ್ಟ್ ಮೂರೇ ದಿನಕ್ಕೆ ನೂರಾರು ಜನರ ಪ್ರಾಣವನ್ನೇ ನುಂಗಿ ಹಾಕಿದ್ದಾನೆ.
ಪಾಕಿಸ್ತಾನ.. ಮೊದಲೇ ಅಧಃಪತನ ತುತ್ತತುದಿಯಲ್ಲಿ ನಿಂತು, ಆಗ್ಲೋ ಈಗ್ಲೋ ಅಂತ ಪರದಾಡ್ತಾ ಇರೋ ಪಾಪಿ ದೇಶ. ಈಗ ಆ ದೇಶದ ಕೇಡುಗಾಲ ಶುರುವಾಗಿದೆ. ಉಗ್ರರ ಸ್ವರ್ಗದಲ್ಲಿ ವರುಣರಾಯ ಉಗ್ರ ಪ್ರತಾಪ ಮೆರೀತಿದಾನೆ. ಜಸ್ಟ್ ಮೂರೇ ದಿನಕ್ಕೆ ನೂರಾರು ಜನರ ಪ್ರಾಣವನ್ನೇ ನುಂಗಿ ಹಾಕಿದ್ದಾನೆ. ಅಷ್ಟಕ್ಕೂ, ಪಾಪಿಸ್ತಾನದಲ್ಲಿ ಪ್ರವಾಹ ಪ್ರಹಾರ ಹೇಗಿದೆ ಗೊತ್ತಾ? ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ. ಪಾಕಿಸ್ತಾನಕ್ಕೆ ಪ್ರಾಣ ಕಂಟಕ ಎದುರಾಗಿದೆ. ನಿನ್ನೆ ಮೊನ್ನೆ ಇದ್ದ ಪರಿಸ್ಥಿತಿಗಿಂತಾ ಈಗ ತೀರಾ ಭಿನ್ನವಾದ ವಾತಾವರಣ ನಿರ್ಮಾಣವಾಗಿದೆ. ಪ್ರವಾಹಾಸುರನ ಪ್ರತಾಪಕ್ಕೆ ಬೆಚ್ಚಿಬಿದ್ದಿದ್ದ ಪಾಕಿಸ್ತಾನಕ್ಕೆ ಮತ್ತೂ ಒಂದು ಬಿಗ್ ಶಾಕ್ ಕಾದಿದೆ. ಇಷ್ಟೂ ದಿನ ಉಗ್ರರನ್ನ ಛೂಬಿಟ್ಟು, ಇಲ್ಲಸಲ್ಲದ ಪ್ರತಾಪ ಮೆರೆಯೋಕೆ ಹೋಗಿ, ಮಣ್ಣುಮುಕ್ಕಿದ ಕಾರಣಕ್ಕಾಗಿಯೇ, ಪಾಕಿಸ್ತಾನ ಸದ್ದು ಮಾಡ್ತಾ ಇತ್ತು.
ಆದ್ರೆ ಈ ಸಲ, ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಿದೆ. ಅಲ್ಲಿ ಉಂಟಾಗಿರೋ ದುರಂತವೇ ಪಾಕಿಸ್ತಾನದ ಬಗ್ಗೆ ಮಾತಾಡೋ ಹಾಗೆ ಮಾಡಿದೆ. ಅಷ್ಟಕ್ಕೂ ಈ ಭೀಭತ್ಸ ಪ್ರವಾಹಕ್ಕೆ ಕಾರಣವಾಗಿದ್ದೇನು? ನಿಜಕ್ಕೂ ಪಾಕಿಸ್ತಾನ ಪತನದ ಅಂಚಿಗೆ ಬಂದು ನಿಂತಿದ್ಯಾ? ಅದಕ್ಕೆ ಸಹಕಾರ ಕೊಡೋಕ್ಕಂತಲೇ ಈ ದಾರುಣ ಮಳೆ ದಂಡಯಾತ್ರೆ ನಡೆಸ್ತಾ ಇದ್ಯಾ? ಇದೇ ಥರ ಮುಂದುವರೆದರೆ ಏನಾಗ್ಬೋದು? ಭೀಕರ ಮಳೆ. ಭಯಂಕರ ಪ್ರವಾಹ. ಅದರ ಮಧ್ಯೆಯೂ ಪಾಕಿಸ್ತಾನಕ್ಕೊಂದು ನೆಮ್ಮದಿಯ ಸುದ್ದಿ ಇದೆ. ಅದೇನು ಅಂದ್ರೆ, 2022ರಲ್ಲಿ ಆಗಿತ್ತಲ್ಲಾ, ಅಂಥಾ ದೊಡ್ಡ ಪ್ರವಾಹ ಮತ್ತೆ ಆಗೋ ಸಾಧ್ಯತೆ ಇಲ್ವಂತೆ. ಆದ್ರೆ ಈಗಾಗಿರೋ ಡ್ಯಾಮೇಜ್ ಏನ್ ಸಣ್ಣದಾ? ಯಾರು ಎಷ್ಟೇ ಲೆಕ್ಕಾ ಹಾಕಿದ್ರೂ, ಇದಿನ್ನೂ ಆರಂಭ ಮಾತ್ರ. ಮುಂದೇನು ಗ್ರಹಚಾರ ಕಾದಿದ್ಯೋ ಆ ಉಗ್ರರ ಸ್ವರ್ಗಕ್ಕೆ.