ಬಿಸಿಲಿನ ಝಳಕ್ಕೆ ಸುಟ್ಟು ಹೋದ ಯುರೋಪ್ ಜನ: ಸೂರ್ಯನ ಝಳಕ್ಕೆ ಸ್ಪೇನ್, ಬ್ರಿಟನ್ ತತ್ತರ

ಒಂದು ಸಮಯದಲ್ಲಿ ಚಳಿಯಿಂದ ನಡುಗುತ್ತಿದ್ದ ಕೂಲ್‌ ಕೂಲ್ ಬ್ರಿಟನ್‌ ಹಾಗೂ ಯುರೋಪ್‌ನ ಹಲವು ದೇಶಗಳು ಸೂರ್ಯನ ಪ್ರತಾಪಕ್ಕೆ ಬೆಂಕಿ ಮೇಲಿನ ಬಣಲೆಯಂತಾಗಿದ್ದು, ಬಿಸಿಲಿನ ಧಗೆ ತಾಳಲಾರದೇ ಜನ ಪ್ರಾಣ ಬಿಡುತ್ತಿದ್ದಾರೆ.

Share this Video
  • FB
  • Linkdin
  • Whatsapp

ಒಂದು ಸಮಯದಲ್ಲಿ ಚಳಿಯಿಂದ ನಡುಗುತ್ತಿದ್ದ ಕೂಲ್‌ ಕೂಲ್ ಬ್ರಿಟನ್‌ ಹಾಗೂ ಯುರೋಪ್‌ನ ಹಲವು ದೇಶಗಳು ಸೂರ್ಯನ ಪ್ರತಾಪಕ್ಕೆ ಬೆಂಕಿ ಮೇಲಿನ ಬಣಲೆಯಂತಾಗಿದ್ದು, ಬಿಸಿಲಿನ ಧಗೆ ತಾಳಲಾರದೇ ಜನ ಪ್ರಾಣ ಬಿಡುತ್ತಿದ್ದಾರೆ. ಉತ್ತರ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾವನ್ನ ಕಾಡಿದ್ದ ಶಾಖದ ಅಲೆ ಯೂರೋಪ್‌ಗೆ ಕಾಲಿಟ್ಟಿದೆ. ಶಾಖದ ಅಲೆಗೆ ಯೂರೋಪ್ ರಾಷ್ಟ್ರಗಳಲ್ಲಿ ನೂರಾರು ಮಂದಿ ಸುಟ್ಟು ಹೋಗಿದ್ದಾರೆ. ಕೆಂಡದ ಬಿರುಗಾಳಿಗೆ ಸಾವಿರಾರು ಎಕರೆ ಅರಣ್ಯ ಅಗ್ನಿಗಾಹುತಿಯಾಗಿದೆ. ಕೂಲ್ ಆಗಿದ್ದ ಯುರೋಪ್ ದೇಶಗಳಲ್ಲಿ ಜಾಗತಿಕ ತಾಪಮಾನದ ಪರಿಣಾಮವಾಗಿ ಸೂರ್ಯ ಕೆಂಡ ಕಾರುತ್ತಿದ್ದಾನೆ. ಇಲ್ಲಿನ ಶಾಖದ ತೀವ್ರತೆ ಎಷ್ಟಿದೆ ಎಂದರೆ ಬಿಸಿಲ ಝಳಕ್ಕೆ ಟ್ರ್ಯಾಫಿಕ್ ಲೈಟ್‌ಗಳು ಮೆಲ್ಟ್ ಆಗುತ್ತಿವೆ. 

Related Video