ವಿದೇಶಿಗರ ಪ್ರಾಣ ನುಂಗ್ತಿದ್ದಾರೆ ಹಮಾಸ್ ಉಗ್ರರು: ನಡುರಸ್ತೆಯಲ್ಲೇ ಕಿಡ್ನಾಪ್ ಮಾಡಿದ ರಾಕ್ಷಸರು!

ಮಹಿಳೆಯರ ಮೇಲೆ ಹಮಾಸ್ ದೌರ್ಜನ್ಯ..!
ಬಾಗಿಲು ಬಡಿದು ಎಂಟ್ರಿ ಕೊಡ್ತಾರೆ ಉಗ್ರರು..!
ನಡುರಸ್ತೆಯಲ್ಲೇ ಕಿಡ್ನ್ಯಾಪ್‌ ಮಾಡಿದ ರಾಕ್ಷಸರು!

Share this Video
  • FB
  • Linkdin
  • Whatsapp


ಇಸ್ರೇಲ್ ಅನ್ನೋ ಪುಟ್ಟದೇಶದ ಮೇಲೆ ರಣರಕ್ಕಸರು ದಾಳಿ ನಡೆಸ್ತಾ ಇದಾರೆ. ಇಡೀ ಜಗತ್ತೇ ಅದನ್ನ ಯುದ್ಧ ಅಂತ ಕರೀತಿದೆ. ಇಸ್ರೇಲ್(Israel) ಯುದ್ಧಕ್ಕೆ ಸಿದ್ಧವಾಗಿದೆ ಅನ್ನೋ ಮಾತು ಕೇಳಿಬರ್ತಾ ಇದೆ. ಎರಡು ದೇಶಗಳ ನಡುವೆ ನಡೆಯೋ ಸಂಘರ್ಷಕ್ಕೆ ಯುದ್ಧ ಅಂತ ಹೆಸರು ಕೊಡ್ಬೋದು. ಆದ್ರೆ, ಇಲ್ಲಿ ಸಂಘರ್ಷವಾಗ್ತಾ ಇರೋದು, ಇಸ್ರೇಲ್ ಅನ್ನೋ ಬಲಿಷ್ಠ ದೇಶ ಹಾಗೂ ಹಮಾಸ್ (Hamas) ಅನ್ನೋ ಉಗ್ರ ಸಂಘಟನೆಯ ಮಧ್ಯೆ. ಹಾಗಾಗಿನೇ, ಇದು ಇಸ್ರೇಲ್ ಮೇಲೆ ನಡೀತಿರೋ ಯುದ್ಧ ಅಲ್ಲ, ಅತಿಕ್ರಮಣ ಅಂತ ಹೇಳಬಹುದು.ಇಸ್ರೇಲ್, ಕೆನಡಾ, ಯುರೋಪಿಯನ್ ಯೂನಿಯನ್, ಜಪಾನ್, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಈ ಇಷ್ಟೂ ರಾಷ್ಟ್ರಗಳು ಹಮಾಸ್ ನ ಭಯೋತ್ಪಾದಕ ಸಂಘಟನೆ ಅಂತ ಗುರುತಿಸಿವೆ. ಆದ್ರೆ ನ್ಯೂಜಿಲೆಂಡ್ ಮತ್ತು ಪರಾಗ್ವೆ ಮಾತ್ರ, ಹಮಾಸ್ನ ಮಿಲಿಟರಿ ವಿಭಾಗವನ್ನಷ್ಟೇ ಭಯೋತ್ಪಾದಕ ಸಂಘಟನೆ ಎಂದು ಹೇಳುತ್ವೆ. ಬಟ್, ಬ್ರೆಜಿಲ್, ಚೀನಾ, ಈಜಿಪ್ಟ್, ಇರಾನ್, ನಾರ್ವೆ, ಕತಾರ್, ರಷ್ಯಾ, ಸಿರಿಯಾ ಮತ್ತು ಟರ್ಕಿ, ಈ ಯಾವ ದೇಶಗಳೂ ಕೂಡ, ಹಮಾಸ್ ಉಗ್ರ ಸಂಘಟನೆ ಅಂತ ಒಪ್ಕೊಂಡಿಲ್ಲ. 1987ರಲ್ಲಿ ಹುಟ್ಟಿಕೊಂಡ ಹಮಾಸ್ ಎಂತೆಂಥಾ ಕ್ರೌರ್ಯ ಮೆರೆದಿದೆ. ಏನೇನೆಲ್ಲಾ ಮಾಡಿದೆ ಅನ್ನೋದನ್ನ ನೋಡಿದ್ರೆ, ಅದನ್ನ ಉಗ್ರ ಸಂಘಟನೆ ಅಂತಲ್ಲಾ, ರಾಕ್ಷಸ ಸಂಘಟನೆ ಅಂತಲೇ ಘೋಷಿಸಬೇಕಾಗುತ್ತೆ. ಇಂಥಾ ಹಮಾಸ್, ಇವತ್ತು ಇಸ್ರೇಲಿನ ಮೇಲೆ ದಬ್ಬಾಳಿಕೆ ನಡೆಸ್ತಾ ಇದೆ.

ಇದನ್ನೂ ವೀಕ್ಷಿಸಿ: ಇಸ್ರೇಲ್ ಪರ ನಿಲುವು ಪ್ರಕಟಿಸಿದ ಭಾರತ: ಈ ಬಗ್ಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು ?

Related Video