ಇಸ್ರೇಲ್ ಪರ ನಿಲುವು ಪ್ರಕಟಿಸಿದ ಭಾರತ: ಈ ಬಗ್ಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು ?
ಹಮಾಸ್ ಈ ಬಾರಿ ತುಂಬಾ ಕೆಟ್ಟ ಮಟ್ಟಕ್ಕೆ ಇಳಿದಿದೆ. ಇಸ್ರೇಲ್ ಹೆದರಿಸಲು ಹೆಣ್ಮಕ್ಕಳ ಅತ್ಯಾಚಾರ ಮಾಡುವುದು, ಮಕ್ಕಳ ಕಿಡ್ನ್ಯಾಪ್ ಮಾಡುವುದನ್ನು ಮಾಡುತ್ತಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಇಸ್ರೇಲ್ ಪ್ಯಾಲೆಸ್ತೇನ್ ಯುದ್ಧ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರು ಮುಗಿಬಿದ್ದಿದ್ದು, ಸುಮಾರು 800ಕ್ಕೂ ಹೆಚ್ಚು ಇಸ್ರೇಲಿಗರನ್ನು ಹತ್ಯೆಗೈದಿದ್ದಾರೆ. ಇನ್ನೂ ಈ ವಿಚಾರವಾಗಿ ಭಾರತ(India) ಇಸ್ರೇಲ್ (Isreal) ಪರ ತನ್ನ ನಿಲುವನ್ನು ಪ್ರಕಟಿಸಿದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ(Chakravarti Sulibele) ಮಾತನಾಡಿದ್ದಾರೆ. ಇಸ್ರೇಲ್‌ಗೆ ಭಾರತದ ಮೇಲೆ ಬಹಳ ಗೌರವಿದೆ. ಟೆರರಿಜಂ ವಿಚಾರದಲ್ಲಿ ಭಾರತ ಮತ್ತು ಇಸ್ರೇಲ್ ಒಂದೇ ರೀತಿಯ ಅನುಭವವನ್ನು ಹೊಂದಿವೆ. ನೆಹರೂ ಪರಿವಾರ ಮುಸ್ಲಿಮರ(Muslims) ವೋಟಿಗಾಗಿ ಮೊದಲಿನಿಂದ ಪ್ಯಾಲೆಸ್ತೇನ್‌ಗೆ ಬೆಂಬಲವನ್ನು ನೀಡಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಇದೀಗ ಭಾರತ ಇಸ್ರೇಲ್‌ಗೆ ಬೆಂಬಲಿಸುವ ಮೂಲಕ ಇಲ್ಲಿನ ಹಲವರ ಬಾಯಿಯನ್ನು ಮುಚ್ಚಿಸಿದೆ ಎನ್ನಬಹುದು. ಅಲ್ಲದೇ ನಾವು ಈ ವಿಚಾರದಲ್ಲಿ ತುಂಬಾ ಸ್ಟ್ರಾಂಗ್ ಆಗಿ ಇರಬೇಕು ಎಂದು ಅವರು ಹೇಳಿದರು.
ಇದನ್ನೂ ವೀಕ್ಷಿಸಿ: ಹಮಾಸ್ ಉಗ್ರರ ದಾಳಿಗೆ ರಕ್ತಸಿಕ್ತವಾಯ್ತು ಇಸ್ರೇಲ್: 2005ರಿಂದಲೂ ಧಗಧಗಿಸುತ್ತಲೇ ಇದೆ ದ್ವೇಷದ ಜ್ವಾಲೆ..!